ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ

ರಾಜ್ಯ ಹೈಕೋರ್ಟ್ ಆದೇಶ: (ನಾಳೆ) 12-03-2022 ರಾಜ್ಯಾದ್ಯಂತ ನಡೆಯಬೇಕಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ 11.03.2022 ರಂದು ತಡೆಯಾಜ್ಞೆ ನೀಡಿದೆ.  

 ಎಂಟು ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ 11.03.2022 ರಂದು ತಡೆಯಾಜ್ಞೆ ನೀಡಿದೆ.  

 

ಕಾಲೇಜು ಶಿಕ್ಷಣ ಇಲಾಖೆಯ ವಿವಿದ ಪ್ರಥಮ ದರ್ಜೆ ಕಾಲೇಜು ಗಳಲ್ಲಿನ ಮನೋವಿಜ್ಞಾನ ವಿಷಯದ ಹುದ್ದೆಗಳನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ವಿಷಯಗಳಿಗೆ ವರ್ಗಾಯಿಸಿ ಆದೇಶಿಸಿದ್ದ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಮನೋವಿಜ್ಞಾನ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಾವಿರಾರು ಉದ್ಯೋಗ ಆಕಾಂಕ್ಷಿಗಳು   ಆದೇಶದ ವಿರುದ್ದ ನ್ಯಾಯಲಯದ ಮೊರೆ ಹೋಗಿದ್ದರುಇದಕ್ಕೆ ಸಂಬಂದಿಸಿದಂತೆ ವಾದವನ್ನಾಲಿಸಿದ ನ್ಯಾಯಲಯ  ಆದೇಶವನ್ನು 05.10.2021 ರವರೆಗೆ ತಡೆ ಹಿಡಿಯುವಂತೆ ಸೂಚನೆ ನೀಡಿತ್ತುಇದರ ನಡುವೆಯೇ ಇಲಾಖೆಯು ದಿನಾಂಕ 01.10.2021 ರಂದು ಇಲಾಖೆಯ ವಿವಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿ ಗಾಗಿ ನೇಮಕಾತಿ ಅಧಿಸೂಚನೆ ಯನ್ನು ಹೊರಡಿಸಿದ್ದು ಇದರಲ್ಲಿ ಮನೋವಿಜ್ಞಾನ ವಿಷಯದ ಹುದ್ದೆಗಳನ್ನು ಕೈ ಬಿಟ್ಟಿರುವುದು ದೀರ್ಘಕಾಲದಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಾವಿರಾರು  ಉದ್ಯೋಗಾಕಾಂಕ್ಷಿಗಳು NET , KSET  ಪಾಸು ಮಾಡಿ  PhD  ಪದವಿ ಪಡೆದು ಮತ್ತು ಹತ್ತಾರು ವರ್ಷಗಳು ಟೀಚಿಂಗ್ ಅನುಭವ ಪಡೆದಿರುವ ಉದ್ಯೋಗ ಆಕಾಂಕ್ಷಿಗಳಲ್ಲಿ  ಅವಕಾಶ ಕೈತಪ್ಪುವ ಆತಂಕದಲ್ಲಿದ್ದಾರೆ.

 

ಇದಕ್ಕೆ ಸಂಬಂದಿಸಿದಂತೆ ರಾಜ್ಯ ಹೈಕೋರ್ಟ್  ಅರ್ಜಿದಾರರ ವಾದವನ್ನು ಆಲಿಸಿ  ನೇಮಕಾತಿ ಅಧಿಸೂಚನೆಯಲ್ಲಿ ಮನೋವಿಜ್ಞಾನ ವಿಷಯದಿಂದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ವರ್ಗಾವಣೆಗೊಂಡಿದ್ದ ಹುದ್ದೆಗಳಿಗೆ ಸಂಬಂದಿಸಿದ ನೇಮಕಾತಿ ಪ್ರಕ್ರಿಯೆಗೆ 11.03.2022 ರಂದು  ತಡೆ ನೀಡಿದೆಕಾಲೇಜು ಇಲಾಖೆಯ ಆದೇಶವನ್ನು ಪ್ರಶ್ನಿಸಿದ ಬೆಂಗಳೂರಿನ ಡಾಮೀನಾಕ್ಷಿ ಎನ್ , ಡಾವಿಶ್ವನಾಥ್ ಕೆ ,  ಇನ್ನು ರಾಜ್ಯದ ವಿವಿಧ ಜಿಲ್ಲೆಗಳ 15 ಕ್ಕೂ ಹೆಚ್ಚು  ಸಹಾಯಕ  ಪ್ರಾಧ್ಯಾಪಕರು  ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

 

ಬದಲಾದಬದಲಾಗುತ್ತಿರುವ ಜೀವನ ಶೈಲಿಕರೋನ ಸಂಕಷ್ಟ  ನಡುವೆ ವಿವಿದ ವರ್ತನಾ ಸಮಸ್ಯೆಗಳು ಹೆಚ್ಚುತ್ತಿದ್ದು ಸಮಾಜದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಬೇಕಾಗಿರುವ ಮನೋವಿಜ್ಞಾನ ವಿಷಯದ ಹುದ್ದೆಗಳನ್ನು ಮೊಟಕುಗೊಳಿಸಿದರೆ ಪ್ರಸ್ತುತ ಮತ್ತು  ಮುಂದಿನ ದಿನಗಳಲ್ಲಿ ಸಮಾಜಕ್ಕೆ ತುಂಬಾಲಾರದ ನಷ್ಟವಾಗುತ್ತದೆ ಎಂಬುದು ಉದ್ದೋಗಾಂಕ್ಷಿಗಳ ಅಳಲು.


Leave a Reply

Your email address will not be published. Required fields are marked *