ಪುನೀತ್ ಜನ್ಮ ದಿನದ ಅಂಗವಾಗಿ ಸ್ವಯಂ ಪ್ರೇರಿತ ನೇತ್ರದಾನ ನೋಂದಣಿ ಶಿಬಿರ

ಬೆಂಗಳೂರು : ಯಶವಂತಪುರದ ತ್ರಿವೇಣಿ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಇಂದು ನಾಡಿನ ಯುವರತ್ನ ಡಾ. ಪುನೀತ್ ರಾಜಕುಮಾರ್ ರವರ 47 ನೇ ಹುಟ್ಟು ಹಬ್ಬ ಆಚರಣೆಯ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಕನ್ನಡ ಯುವಕರ ಸಂಘ (ರಿ)ದ ವತಿಯಿಂದ ನಾರಾಯಣ ನೇತ್ರಾಲಯದ ಡಾ. ರಾಜಕುಮಾರ್ ನೇತ್ರದಾನ ಕೇಂದ್ರದವರ ಸಹಕಾರದೊಂದಿಗೆ ಸ್ವಯಂ ಪ್ರೇರಿತ ನೇತ್ರದಾನ ಮಾಡಲು ಇಚ್ಛೆಯುಳ್ಳವರಿಗೆ ನೇತ್ರದಾನ ನೋಂದಣಿ ಹಾಗೂ  ಕಣ್ಣುಗಳ ತಪಾಸಣೆಯ ಜೊತೆಯಲ್ಲಿ ಅಗತ್ಯವಿರುವವರಿಗೆ  ಉಚಿತವಾಗಿ ಕನ್ನಡಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕರು ಆದ ಡಾ. ಸಿ.ಎನ್. ಅಶ್ವಥನಾರಾಯಣ ಹಾಗೂ  ಸಮಾಜ ಸೇವಕರು, ಚಲನಚಿತ್ರ ನಿರ್ಮಾಪಕರು ಹಾಗೂ ಕಾರ್ಯಕ್ರಮದ ಪ್ರಾಯೋಜಕರು ಆದ ಸುರೇಶ್ ಗೌಡರ ಸಹಕಾರದೊಂದಿಗೆ  ನಡೆದ ಕಾರ್ಯಕ್ರಮದಲ್ಲಿ ಮುಖ್ಯ  ಅತಿಥಿಗಳಾಗಿ ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎನ್.ಜೈಪಾಲ್, ಮುನಿಸ್ವಾಮಿ ಗೌಡರು, ಎಂ.ಸಿ.ಜಯಪ್ರಕಾಶ್,   ಎಂ.ವೇಲು ನಾಯಕರ್, ಸಮಾಜ ಸೇವಕರು ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳು ಆದ ಡಾ.ಜಿ.ಎಸ್.ಚೌಧರಿ, ಶ್ರೀ ಜಗದ್ಗುರು ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಕಾವೇರಿಯ ಅಧ್ಯಕ್ಷರಾದ ಎನ್.ಆರ್.ಪರಮೇಶ್ವರಯ್ಯ, ಸಮಾಜ ಸೇವಕರು ಹಾಗೂ ಧನಲಕ್ಷ್ಮೀ ಕನ್ಸ್ ಟ್ರಕ್ಷನ್ ಮಾಲೀಕರು ಎಸ್. ರಮೇಶ್ ಮುಂತಾದ ಹಲವಾರು ಗಣ್ಯರು ಭಾಗವಹಿಸಿದ್ದರು. ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆಯನ್ನು ಸಹ ಈ ಸಂದರ್ಭದಲ್ಲಿ ವ್ಯವಸ್ಥೆ ಮಾಡಲಾಗಿತ್ತು. 

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *