ಮಾ.27 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

ಬೆಂಗಳೂರು ನಗರ ಜಿಲ್ಲೆ, ಮಾ 17- (ಕರ್ನಾಟಕ ವಾರ್ತೆ):  ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಯಡಿ 18ರಿಂದ 25 ವರ್ಷದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ದಿನಾಂಕ 27-03-2022 ರಂದು  ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ರಾಜರಾಜೇಶ್ವರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ,ಬೆಂಗಳೂರು ದಕ್ಷಿಣ ತಾಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ  ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಕನಿಷ್ಠ  ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿರಬೇಕು.

ಪಿಯುಸಿ, ಐಟಿಐ, ಡಿಪ್ಲೋಮ, ಬಿಕಾಂ, ಬಿಬಿಎ, ಬಿಎ, ಬಿಸಿಎ, ಬಿಇ, ಎಂಕಾಂ, ಎಂಬಿಎ, ಎಂಎ, ಎಂಸಿಎ ಪದವಿಗಳನ್ನು ಹೊಂದಿದ ಉದ್ಯೋಗಕಾಂಕ್ಷಿಗಳಿಗೆ  ಒಂಭತ್ತು ವಿವಿಧ ಪ್ರತಿಷ್ಠಿತ  ಖಾಸಗಿ ಕಂಪನಿಗಳಾದ ಮುತ್ತೂಟ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಯುರೇಕಾ ಫೋರ್ಬ್ಸ್, ಟೀಮ್ ಲೀಸ್, ಯು ಟಿ ಎಲ್ ಟೆಕ್ನಾಲಜಿ ಲಿಮಿಟೆಡ್, ಜಸ್ಟ್ ಡಯಲ್, ಇಂಪ್ಯಾಕ್ಟ್, ರಿಲೆಯನ್ಸ್ ಗಳಲ್ಲಿ ಉದ್ಯೋಗ  ಸೃಷ್ಟಸಿಕೊಳ್ಳುವ ಅವಕಾಶ ಇದಾಗಿದೆ .  

ಹೆಚ್ಚಿನ ಮಾಹಿತಿಗಾಗಿ ಮೊ ಸಂ : 9964907444 / 7975014738 ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗಪ್ಪರವರು  ತಿಳಿಸಿದ್ದಾರೆ. 

Leave a Reply

Your email address will not be published. Required fields are marked *