ಬಲಿಜ ಸಮುದಾಯ ಸಂಪೂರ್ಣವಾಗಿ ಪ್ರವರ್ಗ 2ಎ ಗೆ ಸೇರಿಸಬೇಕೆಂದು ಒತ್ತಾಯ

 ಮಧುಗಿರಿ : ಬಲಿಜ ಸಮುದಾಯವನ್ನು ಸಂಪೂರ್ಣವಾಗಿ ಪ್ರವರ್ಗ 2ಎ ಗೆ ಸೇರಿಸಬೇಕೆಂದು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಬಲಿಜ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಯೋಗಿ ನಾರೇಯಣ  ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಲಿಜ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ಈಗಾಗಲೇ ಸರ್ಕಾರ ನೀಡಿದೆ. ಆದರೆ  ಉದ್ಯೋಗಕ್ಕೂ ಪ್ರವರ್ಗ 2ಎ ಮೀಸಲಾತಿಯನ್ನು ಸರ್ಕಾರ ತಕ್ಷಣ ನೀಡಬೇಕೆಂದು ತಿಳಿಸಿದರು. ಸದ್ಗುರು ಯೋಗಿ ನಾರೇಯಣ ತಾತಯ್ಯ ಅವರ ತತ್ವ – ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ನಮ್ಮ ಸಮುದಾಯದ ಮುಖಂಡರುಗಳ ಹೋರಾಟದ ಫಲವಾಗಿ ಯೋಗಿ ನಾರೇಯಣ ಜಯಂತಿ ಆಚರಣೆ ಮಾಡಲು ಸರ್ಕಾರ ಘೋಷಣೆ ಮಾಡಿರುವುದು ಸಮುದಾಯಕ್ಕೆ ಸಂತಸ ತಂದಿದೆ ಎಂದರು.

ಪುರಸಭೆ ಸದಸ್ಯ ಎಂ.ಆರ್. ಜಗನ್ನಾಥ ಮಾತನಾಡಿ, ಬಲಿಜ ಜನಾಂಗ ಸಮಾಜದ ಎಲ್ಲಾ ಜಾತಿ ವರ್ಗದವರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಬೆರತು ಜೀವನ ನಡೆಸುತ್ತಿದ್ದಾರೆ. ತಾತಯ್ಯ ಅವರ ಜೀವನ ಸಮಾಜಕ್ಕೆ ಮಾದರಿಯಾಗಿದ್ದು, ಅವರ ತತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆದು ಇಡೀ ಸಮಾಜಕ್ಕೆ ಬಲಿಜ ಜನಾಂಗ ಮಾದರಿಯಾಗಬೇಕು ಮಾದರಿಯಾಗಬೇಕೆಂದು ತಿಳಿಸಿದರು.

ಪುರಸಭೆ ಸದಸ್ಯೆ ಸುಜಾತ ನಾರಾಯಣ ಮಾತನಾಡಿ, ಸಂಘದಲ್ಲಿ ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಂಡು ಸಂಘಟನೆಯನ್ನು ಬಲಪಡಿಸಬೇಕೆಂದು ತಿಳಿಸಿದರು. 

ಹೆಚ್ಚುವರಿ ತಹಶೀಲ್ದಾರ್ ಉಮೇಶ್, ಕಂದಾಯ ನಿರೀಕ್ಷಕ ಜಿ.ಜಯರಾಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮಯ್ಯ, ಖಜಾಂಚಿ ಆರ್.ಎಲ್.ಎಸ್.ರಮೇಶ್, ಸಮುದಾಯದ ಮುಖಂಡರುಗಳಾದ ಆರ್.ಎ.ನಾರಾಯಣ್, ಶ್ರೀನಿವಾಸ್, ಎಂ.ಜಿ.ಗೋಪಿನಾಥ್, ಉಮೇಶ್, ಎಂ.ವೆಂಕಟರಾಮು, ಶ್ರೀನಿವಾಸ್, ಅನಂತನಾರಾಯಣ ಬಾಬು, ಉಮೇಶ್, ಲಕ್ಷ್ಮೀನಾರಾಯಣ, ಎಸ್‍ಬಿಟಿ ರಾಮು, ಲಕ್ಷ್ಮಯ್ಯ, ಗಂಗಲಕ್ಷ್ಮೀ, ಲತಾ ರಾಜ್, ಕೃಷ್ಣಮೂರ್ತಿ, ದೋಲಿ ಬಾಬು, ಮೀನುಗಾರಿಕೆ ಇಲಾಖೆಯ ರಂಗಸ್ವಾಮಿ ಹಾಗೂ ಇತರರು ಇದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ

Leave a Reply

Your email address will not be published. Required fields are marked *