ವಾಣಜ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು, ಮಾರ್ಚ್ 30, (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಇತರೆ ಪರೀಕ್ಷೆಗಳು) ಮಲ್ಲೇಶ್ವರಂ, ಬೆಂಗಳೂರು ವತಿಯಿಂದ, ಜನವರಿ – 2022 ರ ಮಾಹೆಯಲ್ಲಿ ನಡೆಸಲಾದ  ವಾಣಜ್ಯ ಪರೀಕ್ಷೆಯ ಶೀಘ್ರಲಿಪಿಯ ಪ್ರವೀಣ ದರ್ಜೆ, ಪ್ರೌಢ ದರ್ಜೆ ಹಾಗೂ ಬೆರಳಚ್ಚು ಪ್ರೌಢ ದರ್ಜೆ ವಿಷಯಗಳ ಫಲಿತಾಂಶವನ್ನು ಮಾರ್ಚ್ 29 ರಂದು ಮಂಡಳಿಯ ಜಾಲತಾಣ https://sslc.karnataka.gov.in   ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *