ಅರ್ಕ ಧ್ಯಾನದ ಪ್ರೇರಕ ಯೋಗಿ ಶ್ರೀನಿವಾಸ ಅರ್ಕ

 ಬೆಳೆಯುವ ಪೈರು ಮೊಳಕೆಯಲ್ಲೇ ಎಂಬ ನಾಣ್ಣುಡಿಯೊಂದಿದೆ.

ಇ0ಥ ನಾಣ್ಣುಡಿ ಅರ್ಕ ಶ್ರೀನಿವಾಸ ಯೋಗಿಯಂಥವರನ್ನು ನೋಡಿಯೇ ರೂಪುಗೊಂಡಿದ್ದಿರಬೇಕು ಎನಿಸುತ್ತದೆ.

ಅರ್ಕ ಶ್ರೀನಿವಾಸ ಯೋಗಿಯವರು ಬಾಲ್ಯದಿಂದಲೇ ವಿಶಿಷ್ಠ ಪ್ರತಿಭಾವಂತ. ಆ ವಯಸ್ಸಿನಲ್ಲಿಯೇ ಅವರ ಅಂತ:ಶಕ್ತಿ ಅತ್ಯಂತ ಜಾಗೃತವಾಗಿತ್ತು.

ಯೋಗಿ ಶ್ರೀನಿವಾಸ ಅರ್ಕ ಅವರ ತಂದೆಯವರು ಸಿದ್ಧ ಪುರುಷರಾಗಿದ್ದರು. ಹಾಗೆ, ಯೋಗಿಜಿಯ ತಾಯಿಯ ತಾಯಿ ಅಂದ್ರೆ ಅವರ ಅಜ್ಜಿಯ ಕಡೆಯಿಂದಲೂ ಅರ್ಕ ಅವರಿಗೆ ಯೋಗಿತ್ವ ಹರಿದುಬಂದಿದೆ.

ಸಾಮಾನ್ಯವಾಗಿ ಮನೆಯವರ ಜೊತೆ ಯಾರದ್ದೇ ಮನೆಯ ಸಮಾರಂಭಕ್ಕೆ ಹೋದರೂ ಇವರು ಮನೆಯೊಳಗೆ ಹೋಗದೆ ಆ ಮನೆಯ ಮೆಟ್ಟಿಲ ಮೇಲೆ ಕುಳಿತುಬಿಡುತ್ತಿದ್ದರು. ಯಾವಾಗಲೂ ಅವರ ಕೈಯಲ್ಲೊಂದು ಬಿಳಿ ಹಾಳೆ ಪೆನ್ಸಿಲ್ ಇರುತ್ತಿತ್ತು.

ಯಾವುದೋ ಒಂದು ವಸ್ತು ಅವರ ಗಮನ ಸೆಳೆದರೆ ಅದರ ಚಿತ್ರವನ್ನು ಹಾಳೆಯ ಮೇಲೆ ಬಿಡಿಸುವುದು. ಹಾಗೆ ಬಿಡಿಸಿದಾಗ ಅವರ ಅಂತಃಪಟಲದ ಮೇಲೆ ಏನೇನೋ ವಿವರಗಳು ಮೂಡಿ ಬರುತ್ತಿದ್ದವು.

ಒಮ್ಮೆ ಹೀಗಾಯಿತಂತೆ…. ಯಾವುದೋ ಒಬ್ಬರ ಸಂಬ0ಧಿಕರ ಮನೆಗೆ ಹೋದಾಗ ಅರ್ಕ ಅವರು ಮಾಮೂಲಿನಂತೆ ಹೊರಗೇ ಉಳಿದುಬಿಟ್ಟರು. ಒಂದು ಜೊತೆ ಚಪ್ಪಲಿ ಅವರ ಗಮನ ಸೆಳೆಯಿತು, ಶ್ರೀನಿವಾಸ ಅರ್ಕ ಅದರ ಚಿತ್ರ ಬಿಡಿಸಿದರು. ಆ ಚಪ್ಪಲಿಯ ಮಾಲೀಕರ ಚಿತ್ರ ಯೋಗೀಜಿಯ ಅಂತಃಪಟಲದ ಮೇಲೆ ಮೂಡಿಬಂತು. ಅದನ್ನೂ ಬಿಡಿಸಿದರು. ಅವರ ವಿವರಗಳೆಲ್ಲ ಒಂದೊ0ದೇ ದಾಖಲಿಸಿದರು. ಅಷ್ಟು ಹೊತ್ತಿಗೆ ಆ ಚಪ್ಪಲಿಯ ಮಾಲೀಕರು ಹೊರಬಂದು ನೂರಾರು ಜೊತೆ ಚಪ್ಪಲಿಗಳು ನಡುವೆ ತಮ್ಮ ಚಪ್ಪಲಿ ಹುಡುಕತೊಡಗಿದರು. ತಕ್ಷಣ ಈ ಬಾಲಕ ಅವರ ಚಪ್ಪಲಿ ತೋರಿಸಿದರು. ಅವರಿಗೆ ಆಶ್ಚರ್ಯ! 

ನಿನಗೆ ಹೇಗೆ ಗೊತ್ತಾಯಿತು ಮಗೂ ನನ್ನ ಚಪ್ಪಲಿ ಎಂದರು. ಆಗ ಅರ್ಕಾಜಿ ಅವರು ತಾವು ವಿವರಗಳನ್ನು ದಾಖಲಿಸಿದ್ದ ಹಾಳೆ ಕೊಟ್ಟರು. ಅದನ್ನು ನೋಡಿ ಅವರು ಸ್ಥಂಭೀಭೂತರಾದರು. ತಮ್ಮ ಚಪ್ಪಲಿ, ತಮ್ಮ ಚಿತ್ರ ತಮ್ಮೆಲ್ಲ ವಿವರಗಳು ಆ ಹಾಳೆಯಲ್ಲಿ ದಾಖಲಾಗಿದ್ದವು.

ಇದು ಬಾಲ್ಯದ ಒಂದು ಉದಾಹರಣೆಯಷ್ಟೇ.

ಇನ್ನು ಅವರು ಸಾಧನೆಯ ಶಿಖರವನ್ನೇರಿದಂತೆಲ್ಲ ಇಂಥ ಹಲವಾರು ಘಟನೆಗಳು ನಡೆದ ಉದಾಹರಣೆಗಳಿವೆ. ಒಮ್ಮೆ ಅರ್ಕ ಗುರೂಜಿಯವರು ಮಸ್ಕಾಟ್‌ಗೆ ಹೋಗಿದ್ದರು. ಅಲ್ಲಿ ಅವರು ಯಾರ ಜೊತೆಗೋ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಓರ್ವ ಪೊಲೀಸ್ ಅಧಿಕಾರಿ ಬಂದರು. ಅವರು ಸ್ವಲ್ಪ ದರ್ಪದ ವ್ಯಕ್ತಿಯಾಗಿದ್ದು, ಅವರು ಗುರುಗಳನ್ನು ಕುರಿತು ನೀನೇನು ಜ್ಯೋತಿಷಿಯೋ? ಭವಿಷ್ಯ ಹೇಳುತ್ತೀಯೋ? ಎಂದು ಪ್ರಶ್ನಿಸಿದರು. ಗುರುಗಳು ಅಷ್ಟೇ ಶಾಂತವಾಗಿಯೇ ನಾನು ಜ್ಯೋತಿಷಿಯೂ ಅಲ್ಲ. ನನಗೆ ಭವಿಷ್ಯವೂ ಬರುವುದಿಲ್ಲ. ನಾವೇನೋ ಮಾತನಾಡುತ್ತಿದ್ದೇವಷ್ಟೆ ಎಂದರು.

ತನ್ನ ಜೋರು ಜರೂರತ್ತು ಅವರೆದುರು ನಡೆಯುವುದಿಲ್ಲವೆಂದು ಭಾವಿಸಿದ ಆ ಅಧಿಕಾರಿ ಅತ್ಯಂತ ಸೌಮ್ಯವಾಗಿ ತನ್ನ ಪತ್ನಿಗೆ ತುಂಬಾ ಅನಾರೋಗ್ಯವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳ ಸ್ಥಿತಿ ಹೇಗಿದೆ ಎಂದು ಕೇಳಿದನಂತೆ. ಹೆಣ್ಣು ಮಗಳು, ಅದೂ ಅಲ್ಲದೇ ಮಾನವೀಯತೆಯ ಪ್ರಶ್ನೆ. ಅಲ್ಲಿ ಯಾರಿದ್ದಾರೆ ಎಂದು ಗುರೂಜಿ ಕೇಳಿದರು. ತಮ್ಮ ಬಂಧು ನೋಡಿಕೊಳ್ಳುತ್ತಿದ್ದಾರೆ ಎಂದರು ಆ ಅಧಿಕಾರಿ. ಇನ್ನು 9 ನಿಮಿಷ ಬಿಟ್ಟು ವಿಚಾರಿಸಿ ಎಂದರು.

ಹಾಗೆ ವಿಚಾರಿಸಿದಾಗ ಅವರ ಆರೋಗ್ಯ ಸುಧಾರಿಸುತ್ತಿರುವುದಾಗಿ ತಿಳಿಯಿತು.

ನಿಮಗೆಷ್ಟು ದುಡ್ಡು ಬೇಕು ಎಂದು ಕೇಳಿದರಂತೆ. ಗುರೂಜಿ, ನನಗೇನೂ ಅಗತ್ಯವಿಲ್ಲ. ನಾನು ದುಡ್ಡು ಪಡೆದು ಇಂಥದ್ದನ್ನೆಲ್ಲ ಹೇಳುವುದಿಲ್ಲ ಎಂದರ0ತೆ.

ಇದಾದ ಸ್ವಲ್ಪ ಹೊತ್ತಿಗೆ ಶೇಖ್ ಅವರ ದೂರವಾಣಿ ಕರೆ ಬಂದಿತ್ತು.ಅದು ಅರಮನೆಗೆ ಯೋಗೀಜಿಗೆ ಆಹ್ವಾನ. ಅದನ್ನು ನೇರವಾಗಿ ನಿರಾಕರಿಸಿಬಿಟ್ಟರು. ನಂತರ ಅತ್ತಿಂದ ವಿನಯಪೂರ್ವಕ ದನಿ. ನೀವಿರುವಲ್ಲಿಗೆ ನಾನೇ ಬರಲು ಸಿದ್ಧ. ಆದರೆ ನಾನು ಬಂದರೆ ಇಡೀ ನಗರದ ಜನ ಅಲ್ಲಿರುತ್ತಾರೆ. ರಾತ್ರಿ 12 ಗಂಟೆಗೆ ಬರುತ್ತೇನೆ ಆಗಬಹುದೇ? ಆಗ ಗುರೂಜಿಯವರೇ ಶೇಖ್ ಅವರನ್ನು ಭೇಟಿಯಾದರು.

ಶ್ರೀನಿವಾಸ ಅರ್ಕ ಅವರು ಜಾಗತಿಕ ತತ್ವಜ್ಞಾನಿ. ಪ್ರೇರಣಾ ಗುರು (ಮೊಟಿವೇಷನಲ್ ಸ್ಪೀಕರ್) 

ಮನುಷ್ಯನ ಸಾಮರ್ಥ್ಯಗಳ ವಿಸ್ತಾರಕ, ಸ್ವಯಂಸ್ಫುರಣೆ, ಜ್ಞಾನ ವಿಸ್ತರಣೆ ಕಾರ್ಯಕ್ರಮ (ಇನ್.ಟ್ಯೂಟಿವ್ ಇಂಟಲಿಜೆನ್ಸ್ ಪ್ರೋಗ್ರಾಂ)ದ ರೂವಾರಿ, ಹಾಗೂ ಹತ್ತಾರು ದೇಶಗಳಲ್ಲಿ ಸೆಂಟರ್ ಫಾರ್ ಕಾನ್ಷಿಯಸ್ ಅವೇರ್ ನೆಸ್(ಸಿಸಿಎ) ಎನ್ನುವ ಕೇಂದ್ರಗಳ ಸ್ಥಾಪಕ, ಕಾದಂಬರಿಕಾರ, ಪ್ರಬಂಧಕಾರ, ಸಂಗೀತ ಸಂಯೋಜಕ. ಅರ್ಕ ಧಾಮದ ಸಂಸ್ಥಾಪಕ.

ನಮ್ಮ ಮಾನಸಿಕ, ಭೌತಿಕ ಮತ್ತು ಅಧ್ಯಾತ್ಮಿಕ ಸತ್ವ ಮತ್ತು ಚೈತನ್ಯದ ಕುರಿತು ಗಮನ ಸೆಳೆಯುವುದರ ಮೂಲಕ ನೆಮ್ಮದಿಯನ್ನು ಸಾಧಿಸುವುದು ಹೇಗೆ ಎಂಬುದರತ್ತ ನಿರಂತರವಾಗಿ ಶೋಧಿಸುತ್ತಿರುವ ಸಂಶೋಧಕ. ನಮ್ಮತನದ ನೈಜ ಅರಿವನ್ನು ಪಡೆಯುವುದಕ್ಕೆ ಅವರು ಅರ್ಕ ಧ್ಯಾನ ಮಾದರಿಯನ್ನು ಬಳಸುತ್ತಾರೆ. ಇದೊಂದು ಅವರೇ ರೂಪಿಸಿರುವ ವಿಶಿಷ್ಟ ಧ್ಯಾನವಾಗಿದೆ.

ಅವರು ಹುಟ್ಟಿದ್ದು ಕರ್ನಾಟಕದಲ್ಲಿ. ಇವರ ತಂದೆ ವಾಣಿಜ್ಯೋದ್ಯಮಿಯಾಗಿದ್ದು, ತಮ್ಮದೇ ಆದ ಕಂಪನಿಯೊ0ದನ್ನು ನಡೆಸುತ್ತಿದ್ದರು. ಸಾಮಾಜಿಕ ಪ್ರಜ್ಞೆ ಇದ್ದ ಇವರು, ಸಮಾಜಸೇವೆಯಲ್ಲಿ ಆಳವಾದ ಕಾಳಜಿ ಹೊಂದಿದ್ದರು. ಬಿಡುವಿಲ್ಲದ ಜೀವನದ ಮಧ್ಯೆಯೂ ನೆರವಿನ ಅಭಯಹಸ್ತ ಚಾಚುವುದರಲ್ಲಿ ಸದಾ ಉತ್ಸಾಹಿಯಾಗಿದ್ದರು. ಈ ಸೇವಾಗುಣ ವಾಹಿನಿ ಅರ್ಕ ಅವರಲ್ಲೂ ಹರಿದು ಬಂದಿದೆ.

ಅರ್ಕ ಅವರು ಕಿಶೋರಾವಸ್ಥೆಯಲ್ಲೇ ಜೀವನದ ಅರ್ಥದ ಕುರಿತು ಗಾಢವಾಗಿ ಆಲೋಚಿಸುತ್ತಿದ್ದರು. ತೀವ್ರ ಹುಡುಕಾಟದಲ್ಲಿ ತಲ್ಲೀನರಾಗಿರುತ್ತಿದ್ದರು. ಕಾಲದ ಹಂಗಿರುವ ಶರೀರದಲ್ಲಿ ಕಾಲಾತೀತ ಆತ್ಮದ ಕುರಿತು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿದ್ದರು. ಸಂದೇಹ, ನಂಬಿಕೆಯ ವ್ಯವಸ್ಥೆ ಮತ್ತು ಮನುಷ್ಯನ ಪ್ರಜ್ಞೆಯ ಕುರಿತು ಚಿಂತಿಸುತ್ತಿದ್ದರು.

ಸ0ಸ್ಕೃತ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಔಪಚಾರಿಕ ಶಿಕ್ಷಣ ಪಡೆದರು. ಮೈಸೂರು ವಿವಿಯಲ್ಲಿ ಸಂಸ್ಕೃತ ಪದವಿ ಹಾಗೂ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮನುಷ್ಯನ ಗುಣಗಳನ್ನು ಗಾಢ ಅರಿವು ಪಡೆಯುವುದಕ್ಕಾಗಿ ಅವರು ಪಾಶ್ಚಿಮಾತ್ಯ ತತ್ತ÷್ವಜ್ಞಾನವನ್ನು ಅಭ್ಯಾಸ ಮಾಡಿದರು.

ಮನುಷ್ಯ ತನ್ನ ವಿಕಾಸದ ಹಾದಿಗಳನ್ನು ಕಂಡುಕೊಳ್ಳಲು, ಸ್ವಯಂ ಸ್ಫುರಣೆಯ ಅಂತರ್ಜಲದ ಒರತೆಗಳನ್ನು ಹೆಚ್ಚು ಮಾಡಿಕೊಳ್ಳಲು ಅರ್ಕ ಅವರು ಕಳೆದ ಮೂರು ದಶಕಗಳಿಂದ ಹತ್ತಾರು ದೇಶಗಳಲ್ಲಿ ಉಪನ್ಯಾಸ ಮತ್ತು ಕಾರ್ಯಾಗಾರ (ವರ್ಕ್ಶಾಪ್) ಗಳನ್ನು ಮಾಡಿದ್ದಾರೆ. ಸಾವಿರಾರು ಜನರ ಪಾಲಿಗೆ ಮಾರ್ಗದರ್ಶಕರಾಗಿದ್ದಾರೆ. ವಿಶ್ವಸಂಸ್ಥೆ, ಬ್ರಿಟನ್ ಸಂಸತ್(ಹೌಸ್ ಆಫ್ ಕಾಮನ್ಸ್-2003ರಲ್ಲಿ) ನಲ್ಲಿಯೂ ಉಪನ್ಯಾಸ ನೀಡಿ, ಭಾರತೀಯ ಸಂಸ್ಕೃತಿಯ ಶಕ್ತಿ ಮತ್ತು ಬಹುತ್ವವನ್ನು ಸಾರಿದ್ದಾರೆ. ನಮ್ಮ ವಿಶಿಷ್ಟ ಗುಣ ಮತ್ತು ಶಕ್ತಿಗಳನ್ನು ಕಂಡುಕೊಳ್ಳುವುದು, ಅದರಿಂದ ವೈಯಕ್ತಿಕ ಪ್ರಗತಿ ಮತ್ತು ಸಮುದಾಯ ಪ್ರಗತಿಗೆ ದುಡಿಯುವುದು ಅರ್ಕ ಅವರ ಜೀವನ ಮತ್ತು ಚಿಂತನೆಯ ಧ್ಯೇಯ. ಲೆಕ್ಕಾಚಾರಕ್ಕಿಂತ ಆ ಕ್ಷಣದ ಸ್ಫುರಣೆ (ಇಂಟ್ಯೂಷನ್)ಯೇ ದಾರಿದೀಪ. ಇದನ್ನು ಆಳವಾದ ಧ್ಯಾನ, ಸಾವಧಾನ ಚಿಂತನೆಯಿ0ದ ಮೈಗೂಡಿಸಿಕೊಳ್ಳಬಹುದು ಎಂಬುದನ್ನು ಅವರು ವಿವಿಧ ವಿಧಾನ ಮತ್ತು ತರಬೇತಿಗಳಿಂದ ನಿರೂಪಿಸುತ್ತಾರೆ. ಇವರ ಈ ಆಶಯದ ಕಾರ್ಯಕ್ರಮಗಳು ಮತ್ತು ವಿಧಾನಗಳು ನೂರಾರು ಜನರಿಗೆ ತಮ್ಮ ಜೀವನ ಪಥಗಳನ್ನು ಸರಿಯಾಗಿ ಕಂಡುಕೊಳ್ಳಲು, ಕ್ಲೇಷಗಳನ್ನು ನಿವಾರಿಸಿಕೊಳ್ಳಲು, ಕ್ಷೆಭೆಗಳನ್ನು ಕಳೆದುಕೊಂಡು ಹಕ್ಕಿಯ ಲಾಘವ, ಹೂವಿನ ಹೊಸತನ, ಬೆಟ್ಟದ ದೃಢತೆ, ನದಿಯ ಚಲನಶೀಲತೆ, ಪರಿಶುಭ್ರತೆಯನ್ನು ಪಡೆಯಲು ಒತ್ತಾಸೆ ನೀಡಿದೆ. ಅಂತಃಸ್ಫುರಣೆಯ ಪ್ರತಿಪಾದಕರಾದ ಅರ್ಕ ಅವರು, ವಿವಿಧ ಮಾಧ್ಯಮ-ಪತ್ರಿಕೆ, ರೇಡಿಯೋ, ಟಿವಿ, ಯುಟ್ಯೂಬ್‌ಗಳಲ್ಲಿ ತಮ್ಮ ವಿಚಾರಗಳನ್ನು ಪ್ರಚಾರ ಮಾಡಿದ್ದಾರೆ. ಹಲವಾರು ದೇಶಗಳ ವಿಶ್ವವಿದ್ಯಾಲಯಗಳು, ಶಾಸನಸಭೆಗಳಲ್ಲಿಯೂ ಪ್ರೇರಣದಾಯಕ ಚಿಂತನೆಗಳನ್ನು ಹರಡಿದ್ದಾರೆ. ಯೋಗ, ಧ್ಯಾನ, ಸಂಗೀತ, ಸಾಮಾಜಿಕ ಕ್ರಿಯೆಗಳ ಸಂಯೋಜನೆಯ0ತಿರುವ ಅವರ ಅಧ್ಯಾತ್ಮ, ಕಾರ್ಯಕ್ರಮಗಳು ಪ್ರಾಕೃತಿಕವಾಗಿದ್ದೂ ಎಲ್ಲ ಧರ್ಮೀಯರೂ ಅಳವಡಿಸಿಕೊಳ್ಳುವಂತಿವೆ. ಅವರ ಮಾರ್ಗದರ್ಶನವನ್ನು ಪಡೆಯುತ್ತಿರುವವರಲ್ಲಿ ಕೂಡ ಯಾವುದೇ ಜಾತಿ, ಲಿಂಗ, ಅಂತಸ್ತು, ದೇಶದ ಗಡಿರೇಖೆಗಳಿಲ್ಲ. ಮೈಸೂರಿನ ಕಾರ್ಯಕೇಂದ್ರದ ಮೂಲಕ ಅವರು ಇಡೀ ಪ್ರಪಂಚವನ್ನು ಸುತ್ತಾಡುತ್ತಾ, ಶ್ರೇಷ್ಠ ಮೌಲ್ಯಗಳನ್ನು, ಜೀವನ ವಿವೇಕವನ್ನು ಬಿತ್ತುತ್ತಿದ್ದಾರೆ.

ಇವರ ಬರಹಗಳು, ಶೈಕ್ಷಣಿಕ ನಿಯತಕಾಲಿಕ, ದಿನಪತ್ರಿಕೆ ಮತ್ತು ವಾರ/ತಿಂಗಳ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ದೇಶೀಯ ಹಾಗೂ ಅಂತಾರಾಷ್ಟಿçಯ ಮಟ್ಟದ ಹಲವು ರೇಡಿಯೋ, ಟಿವಿ ವಾಹಿನಿಗಳಲ್ಲಿ ನೂರಾರು ಸಂದರ್ಶನಗಳು ನಡೆದಿದ್ದು, ಹಲವು ಕಾರ್ಯಕ್ರಮಗಳನ್ನು ಅರ್ಕ ನಡೆಸಿಕೊಟ್ಟಿದ್ದಾರೆ.

ಕಾರ್ಯಾಗಾರಗಳು, ಉಪನ್ಯಾಸಗಳು, ಮಾತುಕತೆಗಳು ಇಲ್ಲದೇ ಇರುವ ಸಮಯದಲ್ಲಿ ಇವರು ಕಾಲ್ಚೆಂಡು ಆಟ, ಟೆನ್ನಿಸ್, ಯೋಗ, ಮಾರ್ಷಲ್ ಆರ್ಟ್ನಲ್ಲಿ ನಿರತರಾಗಿರುತ್ತಾರೆ. ಸ್ಟಾö್ಯನಿಶ್ ಕಲಿಕೆಯಲ್ಲೂ ಅವರು ತೊಡಗಿರುತ್ತಾರೆ. ಪ್ರಸ್ತುತ ಅವರೀಗ ಮೈಸೂರಿನ ಅರ್ಕಧಾಮದಲ್ಲಿ ನೆಲೆಸಿದ್ದಾರೆ.

ತಮ್ಮ ಕೃತಿಗಳು, ಉಪನ್ಯಾಸ, ಚಿಂತನಾ ಕಾರ್ಯಾಗಾರಗಳಿಂದ ಅರ್ಕ ಅವರು, ಜನರಿಗೆ ಸ್ವಯಂ ಜಾಗೃತಿಯ ಕೀಲಿಯನ್ನು ತೆರೆಯಲು ಮತ್ತು ಅದನ್ನು ಬೆಳೆಸಿಕೊಳ್ಳಲು ಸ್ಫೂರ್ತಿ ನೀಡಿದ್ದಾರೆ.

ಸಹಜ, ಆಪ್ತ ಮಾತುಕತೆಯಿಂದ ಅರ್ಕ ಅವರು, ನಮ್ಮ ಆಳದ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ಮತ್ತು ಆ ಅನುಭವವನ್ನು ಅನುಭವಿಸಲು ಆಹ್ವಾನಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ವಿವೇಚನಾಶೀಲ ಮನಸ್ಸು ಮತ್ತು ಹೃದಯದಿಂದ ದೊರೆಯುವ ಸಾಕ್ಷಾತ್ಕಾರಕ್ಕೆ ನೆಲೆ ಒದಗಿಸುತ್ತಾರೆ. ಇದನ್ನು ‘ಅರ್ಕ ಧ್ಯಾನ’ ದ ಮೂಲಕ ಸಾಧಿಸಲು ಹೇಳಿಕೊಡುತ್ತಾರೆ.

ಲೆಕ್ಕಾಚಾರಕ್ಕಿಂತ ಆ ಕ್ಷಣದ ಸ್ಫುರಣೆ (ಇಂಟ್ಯೂಷನ್)ಯೇ ದಾರಿದೀಪ. ಇದನ್ನು ಆಳವಾದ ಧ್ಯಾನ, ಸಾವಧಾನ ಚಿಂತನೆಯಿ0ದ ಮೈಗೂಡಿಸಿಕೊಳ್ಳಬಹುದು ಎಂಬುದನ್ನು ಅವರು ವಿವಿಧ ವಿಧಾನ ಮತ್ತು ತರಬೇತಿಗಳಿಂದ ನಿರೂಪಿಸುತ್ತಾರೆ. 

ಮನುಷ್ಯರಾಗಿ ನಮ್ಮ ಪಾತ್ರವೇನು? ನಮ್ಮ ಸದ್ಯದ ಚಿಂತನೆ ಆಧಾರದ ಮೇಲೆ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು. ಪರಿಣಾಮಕಾರಿ ಕಲಿಕೆ ಹೇಗೆ ಎನ್ನುವುದರ ಕುರಿತ ತಾತ್ವಿಕ ಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ಅವರ ಜೀವನದ ಉನ್ನತ ಧ್ಯೇಯವಾಗಿದೆ.

ಅಂತಃಪ್ರಜ್ಞೆ ಜಾಗೃತಿ ಕೇಂದ್ರ (ಸೆಂಟರ್ ಫಾರ್ ಕಾನ್ಷಿಯಸ್ ಅವೇರ್‌ನೆಸ್-ಸಿಸಿಎ)

ಸಾಂಸ್ಕೃತಿಕ ಭಿನ್ನತೆಗಳಾಚೆಗೆ ಇರುವ ಮಾನವತೆಯನ್ನು ಅರಿಯುವುದಕ್ಕೆ ಮತ್ತು ಅಧ್ಯಯನ ಮಾಡುವುದಕ್ಕೆ ಸ್ಥಾಪಿಸಿರುವ ಸಂಸ್ಥೆಯೇ ಅಂತಃಪ್ರಜ್ಞೆ ಜಾಗೃತಿ ಕೇಂದ್ರ. ಇದು ಅಂತಾರಾಷ್ಟಿçಯ ಸಂಘಟನೆ. ಪರಸ್ಪರ ಗೌರವಿಸುವುದರ ಮೂಲಕ ಒಟ್ಟಿಗೆ ಸಾಮರಸ್ಯದಿಂದ ಜೀವಿಸುವುದು ಮತ್ತು ಸಂವಹನದ ಮಟ್ಟವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಎಲ್ಲೆಲ್ಲಿ: ಆಸ್ಟೆçಲಿಯಾ, ಕೆನಡಾ, ಬ್ರಿಟನ್, ನ್ಯೂಜಿಲೆಂಡ್, ಸ್ಪೇನ್, ಅಮೆರಿಕ

ಈ ಕೇಂದ್ರಗಳಲ್ಲಿ ಮಾನವ ಸಾಮರ್ಥ್ಯ ವೃದ್ಧಿಯ ಕೊಡುಗೆಗಳನ್ನು ಕಂಡುಕೊಳ್ಳುವ0ತೆ ಮಾಡುವ ಶ್ರೀನಿವಾಸ ಅರ್ಕ ಅವರು, ಅಂತರ್ಬೋಧೆ, ಜ್ಞಾನ ವಿಸ್ತರಣೆ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಾರೆ.

ತಮ್ಮ ಉಪನ್ಯಾಸ ಮತ್ತು ಕಾರ್ಯಾಗಾರ ಗಳಿಂದ ವಿಶ್ವದಾದ್ಯಂತ ವಿವಿಧ ವಯೋಮಾನ ಮತ್ತು ವಿಭಿನ್ನ ಸಮುದಾಯಗಳಿಗೆ ಸೇರಿದ ಜನರ ಹೃದಯಕ್ಕೆ ಅರ್ಕ ಅವರು ಲಗ್ಗೆ ಹಾಕಿದ್ದಾರೆ. ಸ್ಫೂರ್ತಿ ಮತ್ತು ಚೈತನ್ಯವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *