ಶ್ರೀ ಸನಾತನ ವೇದ ಪಾಠ ಶಾಲಾವತಿಯಿಂದ ಧಾರ್ಮಿಕ ಕಾರ್ಯಕ್ರಮ

 ಲೋಕ ಹಿತಕ್ಕಾಗಿ ಎರಡು ದಿನಗಳ ಕಾಲ ಶ್ರೀ ಸನಾತನ ವೇದ ಪಾಠ ಶಾಲಾವತಿಯಿಂದ ಶನಿವಾರ ಮತ್ತು ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರೆವೇರಿಸಲಾಗುವದು. ಶನಿವಾರ ಸಂಜೆ ದೀಪಾರಾಧನೆಯೊಂದಿಗೆ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ದುರ್ಗಾ ಸೂಕ್ತ, ಶ್ರೀ ಸೂಕ್ತ, ಮತ್ತು ಪಾವಗಡ ಪ್ರಕಾಶ್ ರವರಿಂದ ಪ್ರವಚನ ನಡೆಯಲಿದೆ.

ಭಾನುವಾರ ಬೆಳಿಗ್ಗೆ 8ಗಂಟೆ ಗೆ 108ಸುಮಂಗಲಿಯರಿಂದ ಲಕ್ಷ ಕುಂಕುಮಾರ್ಚನೆ ಶ್ರೀ ಲಲಿತಾ ಸಹಸ್ರನಾಮ ಹೋಮ, ಶ್ರೀ ಸೂಕ್ತ ಹೋಮಗಳು, ಗೋ ದಾನ, ಗೋ ಪೂಜೆ ಏರ್ಪಡಿಸಲಾಗಿದೆ. ವೇದ ಬ್ರಹ್ಮ ಶ್ರೀ. ಶ್ರೀನಿವಾಸನ್ (ಚೆಳ್ಳಕೆರೆ ಸಹೋದರರು )ಶ್ರೀ ವೇದ ಬ್ರಹ್ಮ ವೇಣು ಗೋಪಾಲ್ ರವರು ವೇದ ಪಾರಾಯಣ ಮಾಡಲಿದ್ದಾರೆ. ಹರೀಶ ಶರ್ಮ, ನಿರಂಜನ ಶಾಸ್ತ್ರೀ, ಗೌತಮ್ ನಾರಾಯಣ ರಾವ್ ರವರು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.

ಶ್ರೀ ಸನಾತನ ವೇದ ಪಾಠ ಶಾಲೆಯ ಆಡಳಿತ ಮಂಡಳಿಯ ಶ್ರೀ ಮತಿ /ಆಶಾ ನಾರಾಯಣ ಸ್ವಾಮಿ ಮತ್ತು ಶ್ರೀ ಕಂಠ ಬಾಲ ಗಂಚಿ ನೇತೃತ್ವವಹಿಸಲಿದ್ದಾರೆ.


Leave a Reply

Your email address will not be published. Required fields are marked *