56 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ

ಬೆಂಗಳೂರು, ಏಪ್ರಿಲ್ 25, (ಕರ್ನಾಟಕ ವಾರ್ತೆ) : ಅಧಿಸೂಚನೆ ಸಂ. HCRB/CJR-1/2022 ದಿನಾಂಕ: 22-04-2022ರನ್ವಯ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಕರ್ನಾಟಕ ನ್ಯಾಯಿಕ ಸೇವಾ (ನೇಮಕಾತಿ) ನಿಯಮಗಳು, 2004 ಮತ್ತು 2011, 2015 ಮತ್ತು 2016ರ ತಿದ್ದುಪಡಿ ನಿಯಮಗಳ ಅಡಿಯಲ್ಲಿ ನೇರ ನೇಮಕಾತಿಗಾಗಿ ಆನ್‍ಲೈನ್  ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಈ ಹುದ್ದೆಯ ವೇತನ ಶ್ರೇಣಿ ರೂ. 27700-44770/- ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿ / ಪ್ರವರ್ಗ –II (ಎ) / II (ಬಿ) / III (ಬಿ) ಅಭ್ಯರ್ಥಿಗಳು ರೂ. 500/- ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಪ್ರವರ್ಗ- I  ಕ್ಕೆ ಸೇರಿದ ಅಭ್ಯರ್ಥಿಗಳು ರೂ.250/- ಸಂದಾಯ ಮಾಡಬೇಕು. ಅರ್ಜಿಗಳನ್ನು  ಸಲ್ಲಿಸಲು ಮೇ 23, 2022 ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳು ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯವು ನೀಡುವ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೊಂದಣಿ ಆಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://karnatakajudiciary.kar.nic.in/recruitment.php ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *