ಮುನಿಸಿಪಲ್ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಸೋಮಶೆಖರ ರೆಡ್ಡಿಯಿಂದ ಭೂಮಿ ಪೂಜೆ

ಬಳ್ಳಾರಿ, ಮೇ.07:ಬಳ್ಳಾರಿ ನಗರದ ಮುನಿಸಿಪಲ್ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ತರಗತಿಗಳ ಕೊಠಡಿಗಳನ್ನು ನಿರ್ಮಿಸಲು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ 1,73,50,578/- ರೂ. ಗಳನ್ನು ಈ ಕಾಮಗಾರಿಗಾಗಿ ಮಂಜೂರು ಮಾಡಲಾಗಿದೆ. 11 ಹೆಚ್ಚುವರಿ ಮಾದರಿ ಕೊಠಡಿಗಳ ಜೊತೆ ಕಾಲೇಜಿನ ಹೊಸ ರೂಪುರೇಷೇಯನ್ನು ನಿರ್ಮಿಸಲು ನಿರ್ಣಯಿಸಲಾಗಿದೆ. 

ಕೇವಲ 11 ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ತೊಗರಿ ರಾಜೀವ್, ಜ್ಯೋತಿ ಪ್ರಕಾಶ್, ಗಿರಿಪ್ರಸಾದ್, ನೇಮಕಲ್‍ರಾವ್, ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್ ಕುಮಾರ್, ಮೋತ್ಕರ್ ಶ್ರೀನಿವಾಸ್, ಕಾಲೇಜು ಪ್ರಾಂಶುಪಾಲರಾದ ಕೆ.ವೆಂಕಟರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *