ಮಕ್ಕಳ ರಂಗ ಶಿಬಿರ

ಬೆಂಗಳೂರು, ಮೇ 16  (ಕರ್ನಾಟಕ ವಾರ್ತೆ) : ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ ಮತ್ತು ಸಾಂಸ್ಕøತಿಕ ಸಮಿತಿಯ ವತಿಯಿಂದ “ಮಕ್ಕಳ ರಂಗ ಶಿಬಿರ -2022” ಮಕ್ಕಳಿಂದ ಜಾತ್ರೆ ಮಕ್ಕಳ ಸಂತೆ ಮತ್ತು ರಥಯಾತ್ರೆ ವಿಶೇಷ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಮೇ 17 ರಂದು ಮಧ್ಯಾಹ್ನ 2.30 ಕ್ಕೆ ಜ್ಞಾನಭಾರತಿ ಆವರಣದ ಕಲಾಭವನ, ಪ್ರದರ್ಶನ ಕಲಾ ವಿಭಾಗದ ಮುಂಭಾಗದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮೆರವಣಿಗೆ, ಡೊಳ್ಳು ಕುಣಿತ, ಪಟ ಕುಣಿತ, ವಿಶೇಷವಾದ ಚಿಲಿಪಿಲಿ ಗೊಂಬೆಗಳು, ರಂಗಗೀತೆಗಳ ಗಾಯನ ಹಾಗೂ ಮಕ್ಕಳ ಸಂತೆಯಲ್ಲಿ ಹಳ್ಳಿ ತಿಂಡಿ ತಿನಿಸುಗಳ ಮಾರಾಟ, ಹಣ್ಣುಗಳ ಮಾರಾಟ, ತಂಪು ಪಾನೀಯಗಳ ಮಾರಾಟ, ಉತ್ತರ ಭಾರತದ ತಿಂಡಿ ತಿನಿಸುಗಳ ಮಾರಾಟ, ಕರ್ನಾಟಕದ ಪ್ರಾಂತೀಯ ತಿಂಡಿ ತಿನಿಸುಗಳ ಮಾರಾಟ, ಕರಕುಶಲ ವಸ್ತುಗಳ ಮಾರಾಟ, ಜಾನಪದ ಆಟಗಳು ವಿಶೇಷವಾಗಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *