ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “Civi – Tech 2022”

ಬಳ್ಳಾರಿ ಮೇ 26. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 27.05.2022 ರಿಂದ 29.05.2022 ವರೆಗೆ ಸಿವಿಲ್ ವಿಭಾಗದ ವತಿಯಿಂದ “Civi – Tech 2022” Technical information and exhibition on construction materials and technologies ಎಂಬುವ ಮೂರು ದಿನಗಳ  ಕಾರ್ಯಕ್ರಮವು ಜರುಗಲಿದೆ. 

 ಈ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಪದಾದಿಕಾರಿಗಳು – ಅಧ್ಯಕ್ಷರಾದ  ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ   ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ  ಗೋನಾಳ್ ರಾಜಶೇಖರ್ ಗೌಡರು, ಹಾಗೂ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯಕಾರಿ ಸಮಿತಿ ಸದಸ್ಯರು ಜಿ.ಎಂ. ಮಲ್ಲಿಕಾರ್ಜುನ ರೆಡ್ಡಿ , ಬಸವರಾಜ ರೂಪನಗುಡಿ , ಜಾನೆಕುಂಟೆ ಪಂಪನಗೌಡ, ಕೊರ್ಲಗುಂದಿ ಬಸವನಗೌಡ , ಹಲಕುಂದಿ ಸತೀಷ್ ಕುಮಾರ್ , ಇವರುಗಳು, ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲ  ಡಾ|| ಸವಿತಾ ಸೊನೋಳಿ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ|| ಮಲ್ಲಿಕಾರ್ಜುನ ಹೆಚ್.ಎಂ. ಸಿವಿಲ್ ವಿಭಾಗದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಲಿದ್ಧಾರೆ.

ಅಲ್ಲದೇ ಸಿವಿ-ಟೆಕ್ ಪ್ರದರ್ಶನವನ್ನು ಸಂಜೆ 6.00-9.00 ಗಂಟೆಯವರೆಗೆ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ಶಾ¯ ಆವರಣದಲ್ಲಿ, ಆಯೋಜಿಸಲಾಗಿರುತ್ತದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಇಂಜಿನೀಯರ್‍ಗಳು, ಉದ್ಯಮಿಗಳು ಆಗಮಿಸಿ ಇದರ ಉಪಯೋಗವನ್ನು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *