ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಜಾಗೃತಿ ಅಭಿಯಾನ:

“ವಿಶ್ವ ತಂಬಾಕು ನಿಷೇಧ ದಿನ’ದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಂಬಾಕು ಹಾಗೂ ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿಸುತ್ತಿರುವ ಜಾಗೃತಿ ಅಭಿಯಾನಕ್ಕೆ ಪಾಲಿಕೆ ಕೇಂದ್ರ ಕಛೇರಿ ಆವರಣ ಅನೆಕ್ಸ್ ಕಟ್ಟಡ-೦೩ ಮುಂಭಾಗ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ರವರು ಚಾಲನೆ ನೀಡಿದರು.

ಬಿಬಿಎಂಪಿ ಯಿಂದ ತಂಬಾಕು ಸೇವನೆಯಿಂದಾಗುವ ಮಾನವ, ಪರಿಸರ ಮತ್ತು ಪರೋಕ್ಷ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

“ತಂಬಾಕು: ನಮ್ಮ ಪರಿಸರಕ್ಕೆ ಮಾರಕ” ಎಂಬ ವಿಷಯದೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಿ, ತಂಬಾಕು ಸೇವನೆಯಿಂದ ಪರೋಕ್ಷ ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನದ ಅಂಗವಾಗಿ ರೇಡಿಯೊದಲ್ಲಿ ಜಾಗೃತಿ ಮೂಡಿಸಲು ರೇಡಿಯೋ ಟಾಕ್ ಶೋ ಮತ್ತು ಕಿರುನಾಟಕ ಪ್ರಸರಣ ಜೊತೆಗೆ ಮೀಸಲಾದ ಸಂದೇಶವನ್ನು ಆಟೋ ಪ್ರಚಾರದ ಅಭಿಯಾನವನ್ನು ಯೋಜಿಸಲಾಗಿದೆ. ಪ್ರಚಾರವು 3 ವಾರಗಳ ಕಾಲ ನಗರದಾದ್ಯಂತ ಮೀಸಲಾದ ಸಂದೇಶವನ್ನು ಪ್ರಸರಣ ಮಾಡುವುದನ್ನು ಒಳಗೊಂಡಿರುತ್ತದೆ.  

ತಂಬಾಕು ಹಾನಿಗಳ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮಗಳನ್ನು ವೈಟಲ್ ಸ್ಟ್ರಾಟಜೀಸ್(Vital Strategies)ನ “Partnership for Healthy Cities Initiative – Smoke-Free Bengaluru Initiative” ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಅಲ್ಲದೆ, ಸಮಾಲೋಚಕರೊಂದಿಗೆ 10 ಆಟೋಗಳ ಮೂಲಕ ಸಾರ್ವಜನಿಕ ಪ್ರದೇಶ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಜಾಗೃತಿ ಮೂಡಿಸುತ್ತವೆ ಮತ್ತು ಆಯ್ದ ಪ್ರದೇಶಗಳಲ್ಲಿ 2 ವಾರಗಳವರೆಗೆ ಡಿ-ಅಡಿಕ್ಷನ್ ಸೇವೆಗಳನ್ನು ಒದಗಿಸುತ್ತವೆ.

ತಂಬಾಕು ಸೇವನೆಯಿಂದ ಉಂಟಾಗುವ ಅಪಾಯವನ್ನು ಎತ್ತಿ ಹಿಡಿಯಲು ಪ್ರತಿ ವರ್ಷ “ವಿಶ್ವ ತಂಬಾಕು ರಹಿತ ದಿನ”ವನ್ನು ಆಚರಿಸಲಾಗುತ್ತದೆ. ಈ ವರ್ಷದ ಮುಖ್ಯ ಗಮನವು “ತಂಬಾಕು ಹಾನಿಯಿಂದ ಪರಿಸರವನ್ನು ರಕ್ಷಿಸುವುದು”. WHO ಪ್ರಕಾರ, ಪ್ರತಿ ವರ್ಷ ಸುಮಾರು 3.5 ಮಿಲಿಯನ್ ಹೆಕ್ಟೇರ್ ಭೂಮಿ ತಂಬಾಕು ಬೆಳೆಯಲು ನಾಶವಾಗುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ಜಗತ್ತಿನಲ್ಲಿ ಬೆಳೆಯುತ್ತಿರುವ ತಂಬಾಕು ಅರಣ್ಯನಾಶಕ್ಕೆ ಕೊಡುಗೆ ನೀಡುತ್ತದೆ. ತಂಬಾಕು ಪ್ರತಿ ವರ್ಷ 8 ಮಿಲಿಯನ್ ಜನರನ್ನು ಕೊಲ್ಲುತ್ತದೆ ಮತ್ತು ನಮ್ಮ ಪರಿಸರವನ್ನು ನಾಶಪಡಿಸುತ್ತದೆ, ಕೃಷಿ, ಉತ್ಪಾದನೆ, ವಿತರಣೆ, ಬಳಕೆ ಮತ್ತು ನಂತರದ ಗ್ರಾಹಕ ತ್ಯಾಜ್ಯದ ಮೂಲಕ ಮಾನವನ ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡುತ್ತದೆ.

ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *