2022-23ನೇ ಸಾಲಿನ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 08 (ಕರ್ನಾಟಕ ವಾರ್ತೆ) :ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೊಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.  ಕರ್ನಾಟಕ ಹಾಗೂ ಭಾರತದ ರಂಗ ತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ.  

ಈ ಶಿಕ್ಷಣದ ಅವಧಿ ಒಂದು ವರ್ಷದ ಅವಧಿಯಾಗಿದ್ದು, ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು.  ಪದವೀಧರರಿಗೆ ಆದ್ಯತೆ ನೀಡಲಾಗುವುದು.  ತರಬೇತಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.

 ಜುಲೈ 06, 07 ಮತ್ತು 08 ರಂದು ಸಂದರ್ಶನ ಏರ್ಪಡಿಸಿದ್ದು, ಅಭ್ಯರ್ಥಿಗಳು ಮೂರು ದಿನದ ಸಂದರ್ಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಜುಲೈ  15 ರಿಂದ ತರಗತಿಗಳು ಪ್ರಾರಂಭವಾಗುತ್ತವೆ.

ಆಸಕ್ತರು ಪ್ರವೇಶ ಅರ್ಜಿಗಳನ್ನು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-577515, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು ಅಥವಾ ವೆಬ್‍ಸೈಟ್ www.theatreschoolsanehalli.org   ನಲ್ಲಿ ಡೌನ್‍ಲೋಡ್ ಮಾಡಿ ಜೂನ್ 30 ರೊಳಗೆ ಅರ್ಜಿಯನ್ನು  ರಂಗಶಾಲೆಗೆ ಸಲ್ಲಿಸುವುದು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448398144  ಅಥವಾ 9482942394 ನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *