ಬೆಂಗಳೂರಿನ ಕೇವ್-ನ್-ಡೈನ್ ಪಾರ್ಟಿಹಾಲಿನಲ್ಲಿ ಸಾಹಿತ್ಯಾಸಕ್ತರು ಮೆಚ್ಚಿದ ಕವಿಗೋಷ್ಠಿ ಕಾರ್ಯಕ್ರಮ: ” ಬಿ ಟ್ರೆಂಡ್ಸ್ “

 ದಿನಾಂಕ 12 /6 /22ರ ಭಾನುವಾರದಂದು ಬಸವೇಶ್ವರನಗರ ಬೆಂಗಳೂರಿನ ಕೇವ್-ನ್-ಡೈನ್ ಪಾರ್ಟಿಹಾಲಿನಲ್ಲಿ ಸಾಹಿತ್ಯದ ರಸದೌತಣ ಉಣಬಡಿಸಿದ ” ಬಿ ಟ್ರೆಂಡ್ಸ್ “.

ತಮ್ಮ ಅನುಪಮ ಸಾಹಿತ್ಯ ಸೇವೆಯಿಂದ ಗುರುತಿಸಿಕೊಂಡಿರುವ ಬಿ ಟ್ರೆಂಡ್ಸ್ ಸಂಸ್ಥೆ   6ನೇ ವರ್ಷದ ವಿಶೇಷವಾಗಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಿ ಸುಮಾರು 28 ಕವಿಗಳಿಗೆ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿತ್ತು.

 ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಪ್ರತಿಭಾವಂತ ಕವಿಗಳ ಕವನ ವಾಚನ ನೆರೆದಿದ್ದ ಸಾಹಿತ್ಯಾಸಕ್ತರ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು.

 ಕವಿಗೋಷ್ಠಿಯ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಕವಯತ್ರಿ, ಅಖಿಲ ಭಾರತ ಕವಯತ್ರಿಗಳ ಸಂಘದ ಬೆಂಗಳೂರು  ವಲಯದ ಅಧ್ಯಕ್ಷೆಯಾದ ಶ್ರೀಮತಿ ಲಲಿತಾ ಬೆಳವಾಡಿ, ಹಿರಿಯ ಕವಿಗಳಾದ ಶ್ರೀಯುತ ಪದ್ಮನಾಭರವರು, ಸೃಜನಶೀಲ ಬರಹಗಾರರು,ಕವಯತ್ರಿಗಳಾದ ಶ್ರೀಮತಿ ಎಚ್. ವಿ ಮೀನಾ ಹಾಗೂ ಸೃಜನಶೀಲ ಬರಹಗಾರರು ಸಮಾಜಸೇವಕರಾದ ಶ್ರೀಮತಿ ಮಂಜುಳ ಬೆಳ್ಳೂರ್ ಗುಂಡೂರಾವ್ ರವರು ದೀಪ ಬೆಳಗುವುದರ ಮೂಲಕ ನೆರವೇರಿಸಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

 ಹಿರಿಯ ಲೇಖಕರಾದ ಶ್ರೀಯುತ ರಾಜೇಂದ್ರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ ಸಮಾರೋಪ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲೆ, ಸೃಜನಶೀಲ ಬರಹಗಾರರಾದ ಶ್ರೀಮತಿ ಕವಿತಾ ಮುಚ್ಚಂಡಿ, ಕನ್ನಡ ಕಥಾಗುಚ್ಛ ಸಾಹಿತ್ಯ ಬಳಗದ ನಿರ್ವಾಹಕಿಯರಾದ ಶ್ರೀಮತಿ ಉಮಾ ಲೋಕೇಶ್ , ಉದಯೋನ್ಮುಖ ಕವಿಗಳಾದ ಶ್ರೀಯುತ ಚನ್ನಕೇಶವ ಜಿ. ಲಾಲನಕಟ್ಟೆಯವರು ವೇದಿಕೆ ಹಂಚಿಕೊಂಡಿದ್ದರು.

 ಬಿ ಟ್ರೆಂಡ್ಸ್ ಕವಿಗೋಷ್ಠಿ ವೇದಿಕೆಯಲ್ಲಿ ಉಪಸ್ಥಿತರಿದ್ದ  ಎಲ್ಲಾ ಅತಿಥಿ ಮಹೋದಯರ ಸಮ್ಮುಖದಲ್ಲಿ ಶ್ರೀಮತಿ ಲಲಿತಾ ಬೆಳವಾಡಿಯವರ” ಉತ್ತರಧ್ರುವದಿಂ ದಕ್ಷಿಣಧ್ರುವಕೂ “ಕೃತಿ ಲೋಕಾರ್ಪಣೆಗೊಂಡಿತು.

ವಿವಿಧ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ಶ್ರೀಮತಿ ಕವಿತಾ ಮುಚ್ಚಂಡಿ, ಶ್ರೀಮತಿ ಉಮಾ ಲೋಕೇಶ್ ಹಾಗೂ ರೂಪದರ್ಶಿ ಕುಮಾರಿ ಸ್ವೀಝಲ್ ಫುರ್ಟಾಡೊ ರನ್ನು ಬಿ ಟ್ರೆಂಡ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

 ಶ್ರೀಮತಿ ಸುಜಾತ ಎಸ್ ಎನ್ ರೆಡ್ಡಿ ಹಾಗೂ ಶ್ರೀಮತಿ ವಾಣಿಯವರ ಸೊಗಸಾದ ನಿರೂಪಣೆ,

ಪ್ರಾರ್ಥನೆ ಗೀತೆ ನಿರ್ವಹಿಸಿದ ಶ್ರೀಮತಿ ಶಿಲ್ಪಾ ಸುನೀಲ್ ಹಾಗೂ ರಾಧಾ ಶಾನ್ ಭೋಗ್ ರವರ ಮಧುರವಾದ  ಆಲಾಪನೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಬಿ ಟ್ರೆಂಡ್ಸ್ ಸಂಚಾಲಕ ಶ್ರೀಯುತ ಹರೀಶ್ ಕುಮಾರ್ ರಾವ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಕವಿಗೋಷ್ಠಿಯ ಸಂಘಟಕರಾದ ಶ್ರೀಯುತ ಇರ್ಫಾನ್ ಹಸನ್ ಕುಟ್ಟಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

Leave a Reply

Your email address will not be published. Required fields are marked *