ಪಂದ್ಯ ವೀಕ್ಷಣೆಗೆ ಬಿಎಂಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ

ಬೆಂಗಳೂರು, ಜೂನ್ 16 (ಕರ್ನಾಟಕ ವಾರ್ತೆ) : ದಿನಾಂಕ: 19-06-2022 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಪ್ರಿಕಾ ನಡುವೆ ನಡೆಯಲಿರುವ ಟಿ- 20 ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಬಂದು- ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್ಸುಗಳ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಬಸ್ಸುಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ಸು ನಿಲ್ದಾಣ (ಹೆಚ್‍ಎಎಲ್ ರಸ್ತೆ), ಕಾಡುಗೋಡಿ ಬಸ್ಸು ನಿಲ್ದಾಣ (ಹೂಡಿ ರಸ್ತೆ), ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ), ಬನ್ನೇರುಘಟ್ಟ ಮೃಗಾಲಯ ಮತ್ತು ಕೆಂಗೇರಿ ಕೆ.ಹೆಚ್.ಬಿ ಕ್ವಾಟ್ರಸ್ (ಎಂಸಿಟಿಸಿ ನಾಯಂಡಹಳ್ಳಿ) ಮಾರ್ಗಗಳಲ್ಲಿ ಪ್ರಯಾಣಿಸಲಿವೆ.ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *