TTD ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ) ದಲ್ಲಿ “ಊಂಜಲ್ ಸಂಗೀತೋತ್ಸವ”

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (MALLESWARAM TTD) ದಲ್ಲಿ ಜೂನ್ 18, ಶನಿವಾರ ಏರ್ಪಡಿಸಿದ್ದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ಚೇತನಾ ನಾಗರಾಜ್ ಮತ್ತು ಡಾ|| ಶ್ರೀಮತಿ ಮಮತಾ ಸತೀಶ್ ಅವರು ತಾಳಪಾಕಂ ಅನ್ನಮಾಚಾರ್ಯರ ಕೀರ್ತನೆಗಳು, ಶ್ರೀ ಶಂಕರಾಚಾರ್ಯರ ಕೀರ್ತನೆಗಳು ಮತ್ತು ಹರಿದಾಸರ ಪದಗಳನ್ನು ಹಾಡಿದರು. 

ವಿ|| ಶಶಿಧರ್ ಪಿಟೀಲು ವಾದನದಲ್ಲಿ, ವಿ|| ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು. 

ಟಿ ಟಿ ಡಿ ಯ ಕಾರ್ಯಕ್ರಮ  ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗ ರಾವ್ ಅವರು ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *