ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಸಂಕೀರ್ಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಸಂಕೀರ್ಣದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21ನೇ ಜೂನ್ 2022 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸುಮಾರು 2500ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಕುಟುಂಬವರ್ಗದವರು  ಯೋಗಾಭ್ಯಾಸವನ್ನು ಅನುಸರಿಸಿದರು. ನಿರ್ದೇಶಕರು ,ಬೆಂಗಳೂರು ಸಂಕೀರ್ಣ,ಶ್ರೀ ವಿನಯ್ ಕುಮಾರ್ ಕತ್ಯಾಲ್ ಅವರ ಜೊತೆ ಪ್ರಧಾನ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು ಯೋಗಾಭ್ಯಾಸವನ್ನು ಮಾಡುವ ಮೂಲಕ ಭಾಗವಹಿಸಿದರು. ಯೋಗ ಶಪಥವನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.

ಭಾರತ್ ಎಲೆಕ್ಟ್ರಾನಿಕ್ಸ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಶ್ರೀ ಪಹುಜ ಪ್ರಧಾನ ವ್ಯವಸ್ಥಾಪಕರು ಇ ಎಸ್,, ಶ್ರೀ ಆರ್ ಪಿ ಮೋಹನ್ ಪ್ರಧಾನ ವ್ಯವಸ್ಥಾಪಕರು ಮಾನವ ಸಂಪನ್ಮೂಲಗಳು ಮತ್ತು ಶ್ರೀ ನರೇಶ್ ಕುಮಾರ್ ಪ್ರಧಾನ ವ್ಯವಸ್ಥಾಪಕರು ಕಂಪೋನೆಂಟ್ಸ್ ಅವರು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಲ್ಲಾ ಸ್ಪರ್ಧಾ ವಿಜೇತರಿಗೆ ಈ ಸಮಾರಂಭ ಸಂದರ್ಭದಲ್ಲಿ ಬಹುಮಾನ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸುಸೂತ್ರವಾಗಿ ಮತ್ತು ಸೊಗಸಾಗಿ ನೆರವೇರಿತು..

Leave a Reply

Your email address will not be published. Required fields are marked *