ಬಿಐಟಿಎಂ ಕಾಲೇಜಿನಲ್ಲಿ “ಎಕ್ಸ್‍ಪ್ಲೋರಿಕಾ 2ಕೆ22” ಟೆಕ್ನೋ-ಸಾಂಸ್ಕøತಿಕಉತ್ಸವ

ಬಳ್ಳಾರಿ, ಜೂನ್ 28: ಬಳ್ಳಾರಿ ಇನ್ಸ್‍ಟಿಟ್ಯೂಟ್ ಆಫ್‍ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ “ಎಕ್ಸ್‍ಪ್ಲೋರಿಕಾ 2ಕೆ22” ಟೆಕ್ನೋ-ಸಾಂಸ್ಕøತಿಕ ಉತ್ಸವವನ್ನು ಆಚರಿಸಲಾಯಿತು. ಈ ಉತ್ಸವದಲ್ಲಿ ಸಾಹಿತ್ಯ, ಲಲಿತಕಲೆಗಳು, ನಾಟಕ ಮತ್ತು ಶ್ರವ್ಯ-ದೃಶ್ಯ ಎಂಬ ಕ್ಲಬ್‍ಗಳ ಮೂಲಕ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಟೆಕ್ನಿಕಲ್‍ಪೇಪರ್ ಪ್ರೆಸೆಂಟೇಶನ್, ಸಾಮಾನ್ಯರಸಪ್ರಶ್ನೆ, ಚರ್ಚೆ, ಭಾಷಣ, ಕೋಡಿಂಗ್ ಮತ್ತುಡೀಬಗ್ಗಿಂಗ್,ಟ್ರೆಷರ್ ಹಂಟ್, ಪೇಂಟಿಂಗ್, ಪಾಟ್-ಪೇಂಟಿಂಗ್, ಮಾಡೆಲ್ ಮೇಕಿಂಗ್, ಫೇಸ್ ಪೇಂಟಿಂಗ್, ರಂಗೋಲಿ, ಮೆಹಂದಿ, ಬೆಸ್ಟ್‍ಔಟ್‍ಆಫ್ ಸ್ಕ್ರ್ಯಾಪ್, ಬೆಂಕಿಯಿಲ್ಲದೆ ಅಡುಗೆ, ಶಾರ್ಟ್ ಮೂವಿ ಮೇಕಿಂಗ್, ಡಾಕ್ಯುಮೆಂಟರಿ ಮತ್ತು ಪೋಟೋಗ್ರಫಿ ಹೀಗೇ ಹಲವಾರುಸ್ಪರ್ಧೆಗಳನ್ನು ಆಯೋಜಿಸಿಲಾಗಿತ್ತು. 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದರು. ಸಾಂಸ್ಕøತಿಕ ಕಾರ್ಯಕ್ರಮಗಳಾದ ನೃತ್ಯ, ಮೈಮ್, ಗಾಯನ ಮತ್ತು ಫ್ಯಾಷನ್ ಶೋ ಕಾರ್ಯಕ್ರಮಗಳನ್ನು ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಬಿಐಟಿಎಂ ನಿರ್ದೇಶಕರಾದ ಡಾ.ಯಶವಂತ್ ಭೂಪಾಲ್, ಉಪನಿರ್ದೇಶಕರಾದ ವೈ.ಜೆ.ಪೃಥ್ವಿರಾಜ್ ಭೂಪಾಲ್, ಪ್ರಾಚಾರ್ಯರಾದ ಡಾ.ಯಡವಳ್ಳಿ ಬಸವರಾಜ್ ಮತ್ತು ಎಲ್ಲಾ ಡೀನ್‍ಗಳು ವಿಭಾಗ ಮುಖ್ಯಸ್ಥರು ಅಭಿನಂದನೆಗಳನ್ನು ತಿಳಿಸಿದರು.

 

Leave a Reply

Your email address will not be published. Required fields are marked *