ಡಿಪ್ಲಮೋ ಇನ್ ಹ್ಯಾಂಡ್‍ಲೂಮ್ ಅಂಡ್ ಟೆಕ್ಸ್‍ಟೈಲ್ ಪ್ರವೇಶಕ್ಕೆ ಅವಧಿ ವಿಸ್ತರಣೆ

ಬೆಂಗಳೂರು, ಜುಲೈ 04 (ಕರ್ನಾಟಕ ವಾರ್ತೆ) : 2022-23ನೇ ಸಾಲಿಗೆ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕೈಮಗ್ಗ ಮತ್ತು ಜವಳಿ ಇಲಾಖೆ, ನರಸಾಪುರ, ಗದಗ-ಬೆಟಗೇರಿ ಇಲ್ಲಿ ಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲಮೋ ಇನ್ ಹ್ಯಾಂಡ್‍ಲೂಮ್ ಅಂಡ್ ಟೆಕ್ಸ್‍ಟೈಲ್ ಟೆಕ್ನಾಲಜಿ ಕೋರ್ಸಿನ ಪ್ರಥಮ ವರ್ಷದ ಪ್ರವೇಶಕ್ಕಾಗಿ ದಿನಾಂಕ:  11-07-2022ರ ವರೆಗೆ ಮುಂದೂಡಲಾಗಿರುತ್ತದೆ. ಅದರಂತೆ ಎಸ್.ಎಸ್.ಎಲ್.ಸಿ ಅಥವಾ ಸಮಾನ ವಿದ್ಯಾರ್ಹತೆವುಳ್ಳವರು ಅರ್ಜಿ ಸಲ್ಲಿಸಲು ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಎಸ್.ಜೆ.ಪಿ ಕಾಲೇಜ್ ಆವರಣ, ಕೆ.ಆರ್. ಸರ್ಕಲ್, ಬೆಂಗಳೂರು, ದೂರವಾಣಿ ಸಂ. 080-22341176ಗೆ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *