ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-ಶಾಮನೂರು ಶಿವಶಂಕರಪ್ಪ

 ಬಳ್ಳಾರಿ ಜುಲೈ 07. ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯು ಪ್ರತಿವರ್ಷದಂತೆ 2021-22ನೇ ಸಾಲಿನಲ್ಲಿಯೂ ಕೂಡ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡ 90 ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ “ಪ್ರತಿಭಾ ಪುರಸ್ಕಾರ” ನೀಡಿ ಪ್ರೋತ್ಸಾಹಿಸಿ, ಪುರಸ್ಕರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯ ಅಧ್ಯಕ್ಷರು ಶಾಮನೂರು ಶಿವಶಂಕರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಪ್ರತಿಭಾವಂತರು ವಿದ್ಯಾರ್ಥಿಗಳು ಸ್ವ-ವಿವರಗಳೊಂದಿಗೆ (ಇತ್ತೀಚಿನ ಒಂದು ಭಾವಚಿತ್ರ, ದೃಢೀಕರಿಸಿದ ಅಂಕಪಟ್ಟಿ ಮತ್ತು ಜಾತಿ ಪ್ರಮಾಣಪತ್ರ) ಅರ್ಜಿಯನ್ನು www.veerashaivamahasabha.in ಮಹಾಸಭೆಯ ವೆಬ್ ಸೈಟ್ ನಲ್ಲಿ Online ಮೂಲಕ ದಿನಾಂಕ: 07-07-2022 ರಿಂದ 20-07-2022ರೊಳಗೆ ಸಲ್ಲಿಸುವುದು, Online ಮೂಲಕ ಬಂದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು, ಅಂಚೆ, ಕೊರಿಯ ಅಥವಾ ಖುದ್ದಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *