ಗಿಡಮರಗಳು ಮುಂದೊ0ದು ದಿನ ಪುಸ್ತಕದ ಪಠ್ಯಗಳಾದಾವು !!!

ಬಳ್ಳಾರಿ ಜುಲೈ 11. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಜಗದ್ಗರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆ ಹಾಗೂ ಗ್ರಾಮ ಪಂಚಾಯತಿ ಕಿರೇಸೂರ ಮತ್ತು ಸರಕಾರಿ ಪ್ರೌಢ ಶಾಲೆ ಕಿರೇಸೂರ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷವೃಕ್ಷಯಜ್ಞ’ಯೋಜನೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. 

 ದಿನಾಂಕ 11.07.2022 ಸೋಮವಾರದಂದು ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷವಾಗಿ ಔಷಧಿಯ ಸಸ್ಯಗಳನ್ನು ನೆಡುವುದರ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ವಿನೂತನ ರೀತಿಯಲ್ಲಿ ಹೊಣೆಗಾರಿಕೆ ನೀಡಿದ್ದಾರೆ, ಒಬ್ಬೊಬ್ಬ ವಿದ್ಯಾರ್ಥಿ ಒಂದೊAದು ಸಸಿಗಳನ್ನು ಪೋಷಿಸಿ ಉತ್ತಮ ರೀತಿಯಲ್ಲಿ ಬೆಳೆಸಿದವರಿಗೆ ಬಹುಮಾನ ನೀಡಲಾಗುವುದೆಂದು ಘೋಷಿಸಿಲಾಯಿತು. 

 ಕಾರ್ಯಕ್ರಮವನ್ನು ಉದ್ಧೇಶಿಸಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸನಗೌಡ ಪಾಟೀಲ ಮಾತನಾಡಿದರು.ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಈಶ್ವರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗ್ರಾಮ ಪಂಚಾಯತ ಸದಸ್ಯರಾದ ಮಂಜನಾಥ ಹುಬ್ಬಳ್ಳಿ ಮಂಜುನಾಥ ಹುಲಿಕಟ್ಟಿ ಮಹಾದೇವಪ್ಪ ಹುಬ್ಬಳ್ಳಿ.ಮುಖ್ಯೋಪಾಧ್ಯಯರಾದ ಶ್ರೀಮತಿ ಸುಮನ ಉಪಸ್ಥಿತರಿದ್ದರು.ಕುಮಾರಿ ರಕ್ಷಿತಾ ಪಾಟೀಲ ನಿರೂಪಿಸಿದರು.

Leave a Reply

Your email address will not be published. Required fields are marked *