ಡಾ|| ಹೆಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡ ಸಾಹಿತ್ಯ ಪರಿಷತ್ತುಅಖಿಲ ಕರ್ನಾಟಕ ಮಕ್ಕಳ ಕೂಟ (ರಿ.)ಬೆಂಗಳೂರು ಇವರು ಸಹಭಾಗಿತ್ವದಲ್ಲಿ ದಿನಾಂಕ ೧೬-೦೭-೨೦೨೨ರ ಶನಿವಾರದಂದು ಸಂಜೆ ೫.೩೦ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಡಾ|| ಹೆಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.


ವಿಸ್ತಾರ ನ್ಯೂಸ್ ಮುಖ್ಯ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ ಅವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮೇಲ್ಕಂಡ ೨೦೨೨ನೆಯ ಸಾಲಿನ ಈ ದತ್ತಿ ಪ್ರಶಸ್ತಿಗೆ ಶ್ರೀ ರಮೇಶ್ ಮುದಿಗೆರೆ ಅವರು ಭಾಜನರಾಗಿದ್ದಾರೆ. ರಾಜ್ಯ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಲತಾಕುಮಾರಿ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಖಿಲ ಕರ್ನಾಟಕ ಮಕ್ಕಳ ಕೂಟ (ರಿ.)ಇದರ ಅಧ್ಯಕ್ಷರಾದ ಶ್ರೀ ಕೆ. ಮೋಹನ್‌ದೇವ್ ಆಳ್ವ ಹಾಗೂ ರಮಣ ಮಹ ಋಷಿ ಅಂಧರ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ ಟಿ.ವಿ. ಶ್ರೀನಿವಾಸನ್ ಅವರುಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದತ್ತಿ ದಾನಿಗಳಾದ ಡಾ. ಎಚ್. ವಿಶ್ವನಾಥ ಅವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

Your email address will not be published. Required fields are marked *