ಬಿಬಿಎಂಪಿ ಅರಣ್ಯ ಘಟಕ ವತಿಯಿಂದ ಸಸಿಗಳನ್ನು ಉಚಿತವಾಗಿ ವಿತರಣೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ “8X12” ಅಳತೆಯ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಬೆಂಗಳೂರು ನಗರವನ್ನು ಹಸಿರೀಕರಣ ಮಾಡಲು ಸಾರ್ವಜನಿಕರ ಸಹಯೋಗವನ್ನು ಬಯಸಿ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಸ್ಯಕ್ಷೇತ್ರಗಳ ವಿವರ:

1. ಕೂಡ್ಲು – 9480685039

2. ಅಟ್ಟೂರು – 9480685196

3. ಜ್ಞಾನಭಾರತಿ ಆವರಣ – 9164042566

4. ಮಲ್ಲತ್ತಹಳ್ಳಿ – 9164042566

5. ಕೆಂಪಾಪುರ – 9480685541

6. ದೊಡ್ಡಬಸ್ತಿ – 9480685541

Leave a Reply

Your email address will not be published. Required fields are marked *