PACKAGE TOUR : ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಮಾರ್ಗದ ಪ್ಯಾಕೇಜ್ ಟೂರ್

ಬೆಂಗಳೂರು, ಜುಲೈ 21 (ಕರ್ನಾಟಕ ವಾರ್ತೆ) :      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ  ಅನುಕೂಲಕ್ಕಾಗಿ “ಬೆಂಗಳೂರು – ಸೋಮನಾಥಪುರ – ತಲಕಾಡು -ಮಧ್ಯರಂಗ – ಭರಚುಕ್ಕಿ – ಗಗನಚುಕ್ಕಿ” ಮಾರ್ಗದಲ್ಲಿ ಕರ್ನಾಟಕ ಸಾರಿಗೆ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಪ್ಯಾಕೇಜ್ ಟೂರನ್ನು ಜುಲೈ 23, 2022 ರಿಂದ ಪ್ರಾರಂಬಿಸಲಾಗುತ್ತಿದ್ದು, ಬೆಂಗಳೂರಿನಿಂದ ಬೆಳಿಗ್ಗೆ 6.30 ಗಂಟೆಗೆ ನಿರ್ಗಮಿಸಿ ಗಗನಚುಕ್ಕಿಗೆ 5.15 ಗಂಟೆಗೆ ತಲುಪಲಿದೆ. (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ)

ಪ್ಯಾಕೇಜ್ ಟೂರ್ ಪ್ರಯಾಣದರ ವಯಸ್ಕರಿಗೆ ರೂ. 400/- ಹಾಗೂ ಮಕ್ಕಳಿಗೆ ರೂ. 250/- ನಿಗದಿಪಡಿಸಲಾಗಿದೆ.


ನಿಗಮದ ಮುಂಗಡ ಟಿಕೇಟ್ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

 ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26252625/ 7760990287 ಅಥವಾ ವೆಬ್‍ಸೈಟ್  ksrtc.karnataka.gov.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *