ಡಾ. ಸುವರ್ಣ ಮೋಹನ್ ತಂಡದಿಂದ ಪಾಂಡುರಂಗನ ಸನ್ನಿಧಿಯಲ್ಲಿ ಭಜನಾ ಗೋಷ್ಠಿ

ಮೈಸೂರು ಸಮೀಪದ ಮಂಟಿ ಗ್ರಾಮದ ದಕ್ಷಿಣ  ಕಾನಡ ವಿಠಲ ಧ್ಯಾನ ಮಂದಿರದ ರುಕ್ಮಿಣಿ ಸಹಿತ ಶ್ರೀ ಪಾಂಡುರಂಗ ವಿಠಲನ ಸನ್ನಿಧಿಯಲ್ಲಿ ಬೆಂಗಳೂರಿನ ಶ್ರೀಪುರಂದರ ಇಂಟರ್ನ್ಯಾಷನಲ್ ಟ್ರಸ್ಟ ಸದಸ್ಯರು ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು .

ಗುರು  ಡಾ .ಸುವರ್ಣ ಮೋಹನ್ ನೇತೃತ್ವದಲ್ಲಿ ನಡೆದ ಭಜನಾ ಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು .

ವಿಠ್ಠಲ ಸೇವಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಹರಿದಾಸ ಸೇವಕ ಸುಬ್ಬರಾವ್ ದಾಸರು, ನಿವೃತ್ತ ಪ್ರಾಚಾರ್ಯ ಎನ್ . ಮೋಹನ್ ರವರು ತಂಡದ ಸದಸ್ಯರನ್ನು ಗೌರವಿಸಿದರು .

ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ ನ ನಿರ್ದೇಶಕರಾದ ಕೆ .ಅಪ್ಪಣ್ಣಚಾರ್ ಮಾರ್ಗದರ್ಶನದಲ್ಲಿ ಭಜನಾ  ಸಮಾವೇಶದ ರೂವಾರಿ ಸುಬ್ಬರಾವ್ ದಾಸರ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆಗೊಂಡಿರುವ ಭವ್ಯ ಆಲಯದಲ್ಲಿ ಪ್ರತಿನಿತ್ಯ ಹರಿನಾಮ ಸಂಕೀರ್ತನೆ ,ಭಜನಾ ಕಮ್ಮಟ ನಡೆಯುತ್ತದೆ.*

Leave a Reply

Your email address will not be published. Required fields are marked *