ನಾಗರಪಂಚಮಿ ತರಕಾರಿ ಹೆಚ್ಚುವುದು, ಭೂಮಿ ಅಗೆಯುವ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?

 ನಾಗರಪಂಚಮಿಯಂದು ತರಕಾರಿ ಹೆಚ್ಚುವುದು, ಭೂಮಿಯನ್ನು ಅಗೆಯುವಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ಆದರೆ ವರ್ಷವಿಡೀ ಈ ಕೃತಿಗಳನ್ನು ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾದರೆ ನಾಗರಪಂಚಮಿಯಂದು ಈ ಕೃತಿಗಳನ್ನು ನಿಷೇಧಿಸಿರುವ ಕಾರಣ ಮತ್ತು ಅವುಗಳನ್ನು ಮಾಡುವುದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ.


ನಾಗದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯ

ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ (ಅಂದರೆ ಇಚ್ಛೆಗೆ ವೇಗ ನೀಡುವ) ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು.


ಅಧ್ಯಾತ್ಮದಲ್ಲಿ ನಾಗರಪಂಚಮಿಗೆ ಇರುವ ಮಹತ್ವ

ಅ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ.

ಆ. ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ.


ನಾಗರಪಂಚಮಿಯಂದು ಕೆಲವು ಕೃತಿಗಳನ್ನು ನಿಷೇಧಿಸಿರುವ ಕಾರಣ

ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತಿಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣವು ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಅಡಚಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳನ್ನು ಮಾಡುವುದರಿಂದ ಪಾಪ ತಗಲಬಹುದು. ನಾಗರಪಂಚಮಿಯ ತುಲನೆಯಲ್ಲಿ ಇತರ ದಿನಗಳಂದು ಇಂತಹ ದೇವತಾಜನ್ಯ ಇಚ್ಛಾಲಹರಿಗಳು ಭೂಮಿಯತ್ತ ಬಾರದಿರುವುದರಿಂದ ಇಂತಹ ಕೃತಿಗಳನ್ನು ಮಾಡುವುದರಿಂದ ಸಮಷ್ಟಿ ಪಾಪ ತಗಲುವ ಪ್ರಮಾಣವೂ ಕಡಿಮೆಯಿರುತ್ತದೆ. ಈ ಕಾರಣದಿಂದಲೇ ಆಯಾ ದಿನದಂದು ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಕ್ಕನುಗುಣವಾಗಿ ಆಯಾ ದಿನದಂದು ಆ ದೇವತೆಯ ಉತ್ಸವ ಅಥವಾ ಹಬ್ಬವನ್ನು ಆಚರಿಸಲು ಹಿಂದೂ ಧರ್ಮವು ಕಲಿಸುತ್ತದೆ. ಹಿಂದಿನ ಕಾಲದಲ್ಲಿ ಗೆಡ್ಡೆ-ಗೆಣಸು ಹುರಿದು, ಅಥವಾ ಬೇಯಿಸಿ ತಿನ್ನುವ ರೂಢಿಯಿತ್ತು. ಇದರಲ್ಲಿ ಹೆಚ್ಚುವ, ಕೊಯ್ಯುವ ಮತ್ತು ಕರಿಯುವ ಕೃತಿಗಳು ಇರುತ್ತಿರಲಿಲ್ಲ. ಆದುದರಿಂದ ಪಾಪ ತಗಲುವ ಪ್ರಮಾಣವೂ ಕಡಿಮೆಯಿತ್ತು.


ಕಲಿಯುಗದಲ್ಲಿ ಪ್ರತಿಯೊಂದು ಕೃತಿಯನ್ನು ನಾಮಜಪದೊಂದಿಗೆ ಮಾಡುವ ಮಹತ್ತ್ವ


ಕಲಿಯುಗದಲ್ಲಿ ಹಿಂದಿನ ಕಾಲದ ಪರಂಪರೆಗಳನ್ನು ಪಾಲಿಸುವುದು ಕಠಿಣವಾಗಿರುವುದರಿಂದ ಪ್ರತಿಯೊಂದು ಕೃತಿಯಿಂದ ನಿರ್ಮಾಣವಾಗುವ ಪಾಪವು ನಷ್ಟ ಮಾಡಲು ಆ ಕೃತಿಯನ್ನು ಸಾಧನೆಯ ರೂಪದಲ್ಲಿ ಅಂದರೆ ನಾಮಜಪದೊಂದಿಗೆ ಮಾಡುವುದು ಆವಶ್ಯಕವಾಗಿದೆ.


(ಸೂಚನೆ : ತರಕಾರಿಗಳನ್ನು ಹಿಂದಿನ ದಿನ ಹೆಚ್ಚಿಡಬಹುದು. ಮತ್ತು ನಾಗರಪಂಚಮಿಯ ದಿನ ಅವುಗಳನ್ನು ಬಳಸಿ ಪದಾರ್ಥಗಳನ್ನು ತಯಾರಿಸಬಹುದು.)


ನಾಗರಪಂಚಮಿಯಂದು ನಿಷಿದ್ಧ ಕೃತಿಗಳನ್ನು ಮಾಡುವುದರಿಂದ ಆಗುವ ಪರಿಣಾಮಗಳು

೧. ನಾಗರಪಂಚಮಿಯಂದು ವಾಯುಮಂಡಲದಲ್ಲಿ ಚೈತನ್ಯ ಮತ್ತು ಶಕ್ತಿ ‘ಕಣಗಳ’ ರೂಪದಲ್ಲಿ ಇರುತ್ತವೆ.

೨. ನಾಗರಪಂಚಮಿಯಂದು ಹೆಚ್ಚುವ ಅಥವಾ ಕೊಯ್ಯುವ ಕೃತಿಯಿಂದ ಚೂರಿಯಿಂದ ಅಥವಾ ಈಳಿಗೆಯ ಘರ್ಷಣೆಯಿಂದ ತಮೋಗುಣದ ಲಹರಿಗಳು ನಿರ್ಮಾಣವಾಗುತ್ತವೆ. ಇದರಿಂದ ಯಾವು ವಸ್ತುವನ್ನು ಹೆಚ್ಚುತ್ತಿದ್ದೇವೆ, ಅದರ ಸುತ್ತಲೂ ತಮೋಗುಣದ ವಲಯ ನಿರ್ಮಾಣವಾಗಿ

೩. ಅದರಿಂದ ವಾತಾವರಣದಲ್ಲಿ ತಮೋಗುಣದ ವಲಯ ಪ್ರಕ್ಷೇಪಿತವಾಗುತ್ತವೆ. ವಾತಾವರಣದಲ್ಲಿ ತಮೋಗುಣದ ಕಪ್ಪು ಕಣಗಳು ಹರಡುತ್ತವೆ.

ಇಂತಹ ಕೃತಿಗಳಿಂದ ರಜ-ತಮ ಪ್ರಧಾನ ಸ್ಪಂದನಗಳು ನಿರ್ಮಾಣವಾಗಿ ಇದರ ಪರಿಣಾಮ ವ್ಯಕ್ತಿಯ ಮೇಲೆಯೂ ಆಗುತ್ತದೆ. ಆದುದರಿಂದ ನಾಗರಪಂಚಮಿಯ ದಿನ ಈ ಕೃತಿಗಳನ್ನು ಮಾಡಬಾರದು.

ಆಧಾರ : ಸನಾತನ ನಿರ್ಮಿಸಿದ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’.

ಸಂಗ್ರಹ : ಶ್ರೀ ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ

Leave a Reply

Your email address will not be published. Required fields are marked *