ಮಾನವ ಸಂಕುಲದ ಸಮಗ್ರ ಅಭಿವೃಧ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆಪ್ಟೆಂಬರ್ 05 (ಕರ್ನಾಟಕ ವಾರ್ತೆ) :

ಮಾನವ ಸಂಕುಲದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ-2022 ರ ಉದ್ಘಾಟನೆ ಹಾಗೂ ರಾಜ್ಯ ಪ್ರಶಸ್ತಿ ಪುರಷ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ಭಾರತದ ಎರಡನೆ ರಾಷ್ಟ್ರಪತಿಯಾಗಿ ಮತ್ತು ಮೊದಲ ಉಪರಾಷ್ಟ್ರÀಪತಿಯಾಗಿ ಸೇವೆ ಸಲ್ಲಿಸಿದರು ಸಹ ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸಿ ಗೌರವಿಸುತ್ತಿದ್ದ  ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತಂದ ದೇಶಕಂಡ ಪ್ರಪ್ರಥಮ ಶ್ರೇಷ್ಠ ಶಿಕ್ಷಕಿ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಇವರನ್ನು ಸ್ಮರಿಸಬೇಕಾದದು ನಮ್ಮ ಕರ್ತವ್ಯ ಎಂದರು.


     ಬುದ್ಧಿಯಿಂದ ಜ್ಞಾನ, ಜ್ಞಾನದಿಂದ ಭಾಷೆ, ಭಾಷೆಗಿಂತ ಮೊದಲು ಅಕ್ಷರ, ಅಕ್ಷರಕ್ಕಿಂತ ಮೊದಲು ಭಾವನೆ, ಭಾವನೆಯಿಂದ ಅಕ್ಷರ, ಅಕ್ಷರದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಶ ಬೆಳವಣಿಗೆ, ಇಷ್ಟು ದೊಡ್ಡ ಬೆಳವಣಿಗೆಗೆ ಶಿಸ್ತು, ವ್ಯವಸ್ಥೆ, ರೂಪು ರೇಷೆ ಬಂದಿದ್ದು, ಶಿಕ್ಷಣದಿಂದ. ಶಿಕ್ಷಣದ ಜೀವಾಳವೆ ಶಿಕ್ಷಕರಾಗಿದ್ದು, ಶಿಕ್ಷಕರು ಇಲ್ಲದೆ ಶಿಕ್ಷಣ ರೂಪಿಸುವುದು ಅಸಾಧ್ಯ ಎಂದರು.


    ಸೃಷ್ಟಿಯ ಅದ್ಬುತ ಒಬ್ಬರ ತರ ಮತ್ತೊಬ್ಬರು ಇರುವುದಿಲ್ಲ.  ಇಂತಹವರಿಗೆ ಶಿಕ್ಷಣ ಕಲಿಸುವುದು ಅತ್ಯಂತ ಕಠಿಣ ಕೆಲಸವಾಗಿದ್ದು, ಅಕ್ಷರ ಕಲಿಸಿ, ಜ್ಞಾನಾರ್ಜನೆಯಿಂದ ತಂತ್ರಾಂಶ ಕಲಿಸಿದ ಗುರುಗಳಿಗೆ ನಮನ ಸಲ್ಲಿಸುತ್ತೇನೆ.   ಒಬ್ಬ ವ್ಯಕ್ತಿಗೆ ಜ್ಞಾನ, ಪಾಪ – ಪುಣ್ಯ, ಸರಿ ತಪ್ಪುಗಳ ವಿಚಾರಗಳು ತಿಳಿದು ಬರುವುದೇ ಶಿಕ್ಷಕರು ನೀಡುವ ಜ್ಞಾನಾರ್ಜನೆಯಿಂದ ಎಂದರು.

   ಮನೆಯಲ್ಲಿ  ತಪ್ಪು ಮಾಡಿದಾಗ ತಾಯಿ ಮೊದಲ ಗುರುವಾಗಿ ತಿದ್ದುತ್ತಾಳೆ.  ಎರಡನೇ ಗುರುವಾಗಿ ಶಿಕ್ಷಕರು ತಿದ್ದುತ್ತಾರೆ.   ಚಾರಿತ್ರ್ಯ ಕಟ್ಟುವಂತ ಕೆಲಸಗಳನ್ನು ಗುರುಗಳು ಮಾಡುತ್ತಿದ್ದಾರೆ. ಇದರ ಪರಿಣಾಮ ಜಾಸ್ತಿ ಇರುವುದರಿಂದ ಚಾರಿತ್ರ್ಯ ಉಳಿಸಿಕೊಳ್ಳಲು ಬೋಧನೆ ಮಾಡಬೇಕು ಎಂದರು.


     ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ  ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಹಲವಾರು ವರ್ಷಗಳಿಂದ ಇರುವ ನ್ಯೂನತೆಗಳನ್ನು ತೆಗೆದು ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ, ಗುರುಗಳು ಮತ್ತು ಮಕ್ಕಳಲ್ಲಿ ಅಮೂಲಾಗ್ರ ಬದಲಾವಣೆ ತರಲು ಚಿಂತನೆ ಮಾಡಲಾಗುತ್ತಿದೆ ಎಂದರು.

ಶಿಕ್ಷಣಕ್ಕೆ ಸುಮಾರು 25 ಸಾವಿರ ಕೋಟಿ ನೀಡಲಾಗಿದ್ದು, 23 ಸಾವಿರ ಶಾಲಾ ಕಟ್ಟಡ ನಿರ್ಮಿಸಲು ಅಂದಾಜಿಸಲಾಗಿದೆ. ಪ್ರಾಥಮಿಕ  ಹಂತದಲ್ಲಿ 8 ಸಾವಿರ ಉತ್ತಮ ಶಾಲಾ ಕಟ್ಟಡ ನಿರ್ಮಿಸಲಾಗುವುದು.   ಮುಂದಿನ ಆಗಸ್ಟ್ ಮಾಹೆಯೊಳಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುವುದು ಎಂದರು.

      ಶಿಕ್ಷಕರಿದ್ದರೆ ಶಾಲೆ ಎಂಬುದನ್ನು ಅರಿತಿರುವ ಸರ್ಕಾರ ಮುಂದಿನ ದಿನಗಳಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.  ಶಿಕ್ಷಕರ ನಿವೃತ್ತಿಯ ದಿನವೆ,  ಮತ್ತೊಬ್ಬ ಶಿಕ್ಷಕರನ್ನು ನೇಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.  ಶಿಕ್ಷಕರ ಸಂಘದಿಂದ ಮನವಿಯನ್ನು ಸಲ್ಲಿಸಿದ್ದು,  ಮುಂದಿನ ದಿನಗಳÀಲ್ಲಿ ಸಹಾನುಭೂತಿಯಿಂದ ಪರಿಗಣಿಸಿ ಪರಿಹರಿಸುವ ಕೆಲಸ ಮಾಡಿತ್ತೇನೆ.  ಶಿಕ್ಷಕರಲ್ಲಿ ನಾನು ಸಹ ಒಬ್ಬ ಶಿಕ್ಷಕನಾಗಿ ಕೆಲಸ ಮಾಡುತ್ತೇನೆ ಎಂದರು.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ಮಾತನಾಡಿ, ಈ ಸಾಲಿನಲ್ಲಿ  ಯಾರ ಪ್ರಭಾವವಿಲ್ಲದೆ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಿಗೆ ಹೊಸ ಸಲಹೆಗಳು ಬಂದಿವೆ.  ಅದೇ ರೀತಿ ಖಾಸಗಿ ಶಾಲೆಯಲ್ಲಿ ಉತ್ತಮ ಕೆಲಸ ಮಾಡುವ ಶಿಕ್ಷಕರನ್ನು ತೆಗೆದುಕೊಳ್ಳುವಂತೆ ಸಲಹೆಗಳು ಬಂದಿದ್ದು, ಅದನ್ನು ಸಹ ಪರಿಶೀಲಿಸಲಾಗುವುದು ಎಂದರು.


ಕೋವಿಡ್-19 ಮಹಾಮಾರಿಯ ಕಾರಣ ಕಲಿಕಾ ನಷ್ಟವನ್ನು ಸರಿದೂಗಿಸಲು ಸರ್ಕಾರ ‘ಕಲಿಕಾ ಚೇತರಿಕೆ’ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಕಲಿಕಾ ಹಿನ್ನೆಡೆ ಸರಿದೂಗಿಸಲೆಂದು ಶಾಲೆಗಳನ್ನು 15 ದಿನಗಳ ಮೊದಲೇ ಆರಂಭಿಸಿ, ಶಿಕ್ಷಕರ 15 ದಿನ ರಜೆ ಕಡಿಮೆ ಮಾಡಿದಾಗಲು ಸಹ ಶಿಕ್ಷಕರು ಕೆಲಸ ಮಾಡಿದ್ದಾರೆ ಅವರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

  ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನಕ್ಕೆ, ಮಕ್ಕಳ ಕಲಿಕಾ ನಷ್ಟ ಸರಿದೂಗಿಸಲು ಶಿಕ್ಷಕ ಸಮುದಾಯ ಶ್ರಮಿಸುತ್ತಿದೆ.  ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಕೇಂದ್ರದಿಂದ ಮೆಚ್ಚುಗೆ ದೊರೆತಿದ್ದು, ಇತರೆ ರಾಜ್ಯಗಳಿಗೆ ಕರ್ನಾಟಕವೇ ಮಾದರಿ ಎಂದು ಘೋಷಿಸಿರುವುದು ರಾಜ್ಯ ಶಿಕ್ಷಣ ಇಲಾಖೆಯ ಗೌರವ ಹೆಚ್ಚಿದೆ ಎಂದರು.

   

ಕಳೆದ ಮೂರು ವರ್ಷಗಳಿಂದ ನಿಂತಿದ್ದ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ 23 ಸಾವಿರ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.  ನಿಂತು ಹೋಗಿದ್ದ ಬಡ್ತಿಯನ್ನು ಸಹ ಕೌನ್ಸಿಲಿಂಗ್ ಮೂಲಕ ನೀಡಲಾಗಿದೆ.  ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಸಹ ಬಡ್ತಿ ನೀಡುವ ಬಗ್ಗೆ ಶಿಕ್ಷಕರ ಸಂಘದಿಂದ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಬಡ್ತಿ ನೀಡಲಾಗುವುದು ಎಂದರು.  

    ಹಿಂದುಳಿದ ವರ್ಗದವರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಬೇಕು ಎನ್ನುವುದು ಹಲವರ ಕನಸಾಗಿದ್ದು, ನಿಮ್ಮ ಸಹಕಾರದಿಂದ ಅದನ್ನು ಸಹ ಜಾರಿಗೊಳಿಸಲಾಯಿತು.  ಅನೇಕ ಸರ್ಕಾರಿ ಶಾಲೆಗಳನ್ನು ಒತ್ತುವರಿ ಮಾಡಲಾಗಿದ್ದು, ಕಳೆದ ಮೂರು ತಿಂಗಳಲ್ಲಿ  ನಾಲ್ಕು ಶಾಲೆಗಳ ರೆಕಾರ್ಡ್ ಸರಿ ಮಾಡಲಾಗಿದೆ.  ಉಳಿದಂತೆ ಶಿಕ್ಷಣ ಇಲಾಖೆಯು ಸರಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಸಾರ್ವಜನಿಕ ಶಿಕ್ಷ ಇಲಾಖೆಯ ಆಯುಕ್ರಾದ ಡಾ.ವಿಶಾಲ್ ಆರ್., ಪ್ರೊ.ಎನ್.ಆರ್. ದೊರೆಸ್ವಾಮಿ ಪ್ರಶಸ್ತಿ ಪುರಸ್ಕøತ ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

2022-23 ನೇ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ವಿವರ:

1. ಟಿ.ಪಿ, ಉಮೇಶ್, ಸಹಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಪುರ, ಹೊಳಲ್ಕೆರೆ

2. ಶ್ರೀಮತಿ ಪೋನ್ ಸಂಕ್ರಿ, 1. ಜೀವಶಾಸ್ತ್ರ ಶಿಕ್ಷಕರು, ಕೇಂದ್ರೀಯ ವಿದ್ಯಾಲಯ, ತುಮಕೂರು, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ.

2022-23 ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಿರುವ ಶಿಕ್ಷಕರ / ಮುಖ್ಯ ಶಿಕ್ಷಕರ ವಿವರಗಳು:

1.ಮಂಜುನಾಥ ಶಂಕರಪ್ಪ ಮಂಗಣಿ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಬೆನ್ನೂರ, ನವಲಗುಂದ ತಾಲ್ಲೂಕು, ಧಾರವಾಡ ಜಿಲ್ಲೆ.

2.ಅಮಿತಾನಂದ ಹೆಗ್ಡೆ, ಶಿಕ್ಷಕರು, ಸರ್ಕಾರಿ (ದ.ಕ.ಜಿ.ಪಂ.) ಹಿರಿಯ ಪ್ರಾಥಮಿಕ ಶಾಲೆ, ಬಂಗಾಡಿ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.

3.ಚಂದ್ರಶೇಖರ್, ಹೆಚ್.ಎಲ್. ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಗಿಮಾಕಲಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ

4. ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ, ಮುಖ್ಯ ಶಿಕ್ಷಕರು, ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತುಕ್ಕಾನಟ್ಟಿ, ಮೂಡಲಗಿ ತಾಲ್ಲೂಕು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ.

5. ಶಿವಾನಂದಪ್ಪ ಬಿ., ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರಗುವಳ್ಳಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

6. ಹುರೇನಸಾಬ್, ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಸನಾಳ, ಕಲಬುರಗಿ ದಕ್ಷಿಣ ವಲಯ, ಕಲಬುರಗಿ ಜಿಲ್ಲೆ

7 ಸುದರ್ಶನ್, ಕೆ.ವಿ. ಮುಖ್ಯ ಶಿಕ್ಷಕರು, ಕನ್ನಡ ಮತ್ತು ತಮಿಳು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕ್ಲೀವ್ ಲ್ಯಾಂಡ್ ಟೌನ್, ಬೆಂಗಳೂರು ಉತ್ತರ ವಲಯ-3, ಬೆಂಗಳೂರು ಉತ್ತರ ಜಿಲ್ಲೆ.

8. ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ, ಮುಖ್ಯ ಶಿಕ್ಷಕರು, ಬಾಲಕರ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂದಿಗನೂರು, ಹಾವೇರಿ ತಾಲ್ಲೂಕು, ಹಾವೇರಿ ಜಿಲ್ಲೆ.

9. ಸಂಜೀವ ದೇವಾಡಿಗ, ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಿಯೂರು, ಬಂಗ್ಲೆಗುಡ್ಡೆ, ಕೆರ್ವಾಶೆÀ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ.

10. ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೊದಲಬಾಗಿ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ,

11. ಶ್ರೀಮತಿ ಚಂದ್ರಕಲಾ, ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾಲಭಾವಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ.

12. ನಿರಂಜನ, ಪಿ.ಜೆ., ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 76, ವೆಂಕಟಾಪುರ ಕ್ಯಾಂಪ್, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ,

13 ಶ್ರೀಮತಿ ಸುಶೀಲಬಾಯಿ ಲಕ್ಷ್ಮೀಕಾಂತ್ ಗುರುವ, ಶಿಕ್ಷಕರು, ಕನ್ನಡ ಸರ್ಕಾರಿ ಹಿರಿಯ ಪಾಥಮಿಕ ಶಾಲೆ, ನಂ. 15. ವಡಗಾವಿ, ಬೆಳಗಾವಿ, ನಗರ, ಬೆಳಗಾವಿ ಜಿಲ್ಲೆ.

14. ಶ್ರೀಮತಿ ವಿದ್ಯಾ ಕೆಂಪಾಪೂರ ಮಠ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆರಬೆಂಚಿ, ಕುಷ್ಟಗಿ ತಾಲೂಕು, ಕೊಪ್ಪಳ ಜಿಲ್ಲೆ.

15. ಬಸವರಾಜ ಜಾಡರ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳೂರು (ಇ.ಜೆ.), ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ,

16. ಗಂಗಾಧರಪ್ಪ, ಬಿ.ಆರ್., ಮುಖ್ಯ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮೆಣಸೆ, ಶೃಂಗೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

17. ಚಂದ್ರಶೇಖರರೆಡ್ಡಿ, ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆ.ರಾಂಪುರ, ಪಾವಗಡ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.

18. ಸುಧಾಕರ ಗಣಪತಿ ನಾಯಕ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಚನಹಳ್ಳಿ, ಯಲ್ಲಾಪುರ ತಾಲ್ಲೂಕು, ಶಿರಸಿ ಶೈಕ್ಷಣಿಕ ಜಿಲ್ಲೆ.

19.ಈಶ್ವರಪ್ಪ ಅಂದಾನಪ್ಪ ರೇವಡಿ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಕೊಪ್ಪ, ರೋಣ ತಾಲ್ಲೂಕು, ಗದಗ ಜಿಲ್ಲೆ.

20. ಶ್ರೀಮತಿ ಕವಿತ, ಈ., ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೋರಪ್ಪನಗುಡಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

2022-23 ನೇ ಸಾಲಿನಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಿರುವ ಶಿಕ್ಷಕರ / ಮುಖ್ಯ ಶಿಕ್ಷಕರ / ವಿಶೇಷ ಶಿಕ್ಷಕರ ವಿವರಗಳು:

1. ಮಹೇಶ್, ಕೆ.ಎನ್., ವಿಜ್ಞಾನ ಶಿಕ್ಷಕರು, ಶ್ರೀ ಆಂಜನೇಯಸ್ವಾಮಿ ಪ್ರೌಢ ಶಾಲೆ, ಕಡ್ಲೆಗುದ್ದು, ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

2.ಇಬ್ರಾಹಿಂ, ಎಸ್.ಎಂ., ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ನೇರುಗಳಲೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.

3. ರಘು ಬಿ.ಎಂ., ವಿಜ್ಞಾನ ಶಿಕ್ಷಕರು, ರಾಷ್ಟ್ರೀಯ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ.

4. ಭೀಮಪ್ಪ, ವಿಜ್ಞಾನ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಮಸ್ಕಿ, ಲಿಂಗಸೂಗೂರು ವಲಯ, ಮಸ್ಕಿ ತಾಲ್ಲೂಕು, ರಾಯಚೂರು ಜಿಲ್ಲೆ.

5. ರಾಧಾಕೃಷ್ಣ, ಟಿ., ವಿಜ್ಞಾನ ಶಿಕ್ಷಕರು, ಸರ್ಕಾರಿ (ದ.ಕ.ಜಿ.ಪಂ.) ಪದವಿಪೂರ್ವ ಕಾಲೇಜು, (ಪ್ರೌಢ ಶಾಲಾ ವಿಭಾಗ), ಕೊಯ್ಯೂರು, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.

6. ನಾರಾಯಣ ಪರಮೇಶ್ವರ ಭಾಗ್ವತ, ಕನ್ನಡ ಶಿಕ್ಷಕರು, ಶ್ರೀ ಮಾರಿಕಾಂಬ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಿರಸಿ, ಶಿರಸಿ ಶೈಕ್ಷಣಿಕ ಜಿಲ್ಲೆ.

7. ಶ್ರೀಮತಿ ಅರುಣಾ ಜೂಡಿ, ಹಿಂದಿ ಶಿಕ್ಷಕರು, ಸರ್ಕಾರಿ ಪದವಿಪೂರ್ವ ಕಾಲೇಜು, (ಪ್ರೌಢ ಶಾಲಾ ವಿಭಾಗ), ಕಿನ್ನಾಳ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ.

8. ಸುನೀಲ ಪರೀಟ, ಹಿಂದಿ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಲಕ್ಕುಂಡಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.

9. ಬಾಲಸುಬ್ರಮಣ್ಯ ಎಸ್.ಟಿ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1, ಸರ್ಕಾರಿ ಪ್ರೌಢ ಶಾಲೆ, ಕೊಕ್ಕರೆಬೆಳ್ಳೂರು, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

10.ಡಾ| ಚೇತನ ಬಣಕಾರ, ಹಿಂದಿ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಹರಪನಹಳ್ಳಿ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ,

11. ಶ್ರೀಮತಿ ಕೀರ್ತಿ ಬಸಪ್ಪ ಲಗಳಿ, ಸಂಗೀತ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಮಿಟ್ಟೇಮರಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

2022-23ನೇ ಸಾಲಿನ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ.

1. ನಾಗಣ್ಣ, ಜಿ, ಪ್ರಾಂಶುಪಾಲರು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಪಿ.ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು ದಕ್ಷಿಣ.

2. ಸತೀಶ್ ಬೊಮ್ಮಯ್ಯ ನಾಯಕ್, ಪ್ರಾಂಶುಪಾಲರು, ಹೆಚ್.ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲ್ಲಿಕೆರೆ, ಕುಮಟ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ

2022-23ನೇ ಸಾಲಿನ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ಉತ್ತಮ ಉಪನ್ಯಾಸಕರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ.

1.ಆರ್.ಬಿ. ಚಂದ್ರಶೇಖರ್, ಭೂಗೋಳಶಾಸ್ತ್ರ ಉಪನ್ಯಾಸಕರು, ಎಂಪ್ರೆಸ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಶೋಕ ರಸ್ತೆ, ತುಮಕೂರು.

2. ಉಮೇಶ ಎಂ.ಎನ್., ಇತಿಹಾಸ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು,  ಯಲಹಂಕ, ಬೆಂಗಳೂರು ಉತ್ತರ.

3. ಮಹಾವೀರ ಸಿಂಗ್ ಬಿ ರಜಪೂತ್, ರಾಜ್ಯಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ವಿಜಯಪುರ.

4. ಶ್ರೀಮತಿ ಕೆ.ಮಲ್ಲಮ್ಮ, ಅರ್ಥಶಾಸ್ತ್ರ ಉಪನ್ಯಾಸಕರು, ಎಸ್.ಪಿ.ಕೆ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜು, ಹಲಸೂರು, ಬಸವಕಲ್ಯಾಣ, ಬೀದರ್ ಜಿಲ್ಲೆ.

5. ಶಿವಾನಂದ ಎಂ. ಕಲ್ಲೂರು, ಭೌತಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ಧಲಿಂಗ ನಗರ, ಗದಗ

6. ಶ್ರೀಶೈಲ ಕೋಲಾರ, ಸಮಾಜಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆರೂರು, ಚಿಕ್ಕೋಡಿ.

7.ಉದಯ ಕುಮಾರ್ ಎಂ.ಪಿ., ಗಣಿತಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ,

8. ಸದಾನಂದ, ಆರ್, ಆಂಗ್ಲಭಾμÁ ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹುಣಸೂರು, ಮೈಸೂರು ಜಿಲ್ಲೆ.


Leave a Reply

Your email address will not be published. Required fields are marked *