ಗೆಜೆಟೆಡ್ ಪ್ರೊಬೇಷನರಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ


ಬೆಂಗಳೂರು, ಸೆಪ್ಟೆಂಬರ್ 06 (ಕರ್ನಾಟಕ ವಾರ್ತೆ) :

ಕರ್ನಾಟಕ ಲೋಕಸೇವಾ ಆಯೋಗವು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳ (ಆರ್.ಪಿ.ಸಿ 94 ಮತ್ತು ಹೆಚ್.ಕೆ 12) ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‍ಆಪ್ ಅಂಕಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಸೆಪ್ಟೆಂಬರ್ 5 ರಂದು ಆಯೋಗದ ಜಾಲತಾಣ http://kpsc.kar.nic.in/list  ನಲ್ಲಿ  ಪ್ರಕಟಿಸಲಾಗಿದೆ.

ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾದ ಏಳು ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು ಇವರ ವಿಳಾಸಕ್ಕೆ ಅಂಚೆ ಮುಖಾಂತರ ಅಥವಾ ಇ-ಮೇಲ್ ವಿಳಾಸ   kpsc-ka@nic.in     ಮುಖಾಂತರ ಸಲ್ಲಿಸಬಹುದು. ನಿಗಧಿತ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *