ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಗಂಗಾಧರಮೂರ್ತಿ ಅಸ್ತಂಗತ

ಗೌರಿಬಿದನೂರು ತಾಲ್ಲೂಕಿನ ಎ.ಇ.ಎಸ್ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಲೇಖಕರು, ಚಿಂತಕರು ಹಾಗೂ ವಿದುರಾಶ್ವತ್ಥದ ವೀರಸೌಧ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದ ಪ್ರೊ.ಬಿ.ಗಂಗಾಧರಮೂರ್ತಿ(78) ರವರು ಇಂದು (ಸೆ.10, ಶನಿವಾರ) ಸಂಜೆ ಚಿಕ್ಕಬಳ್ಳಾಪುರ ನಗರದ ಜೈನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅಪಾರ ಶಿಷ್ಯವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *