ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಬೆಂಗಳೂರು, ಸೆಪ್ಟೆಂಬರ್ 19 (ಕರ್ನಾಟಕ ವಾರ್ತೆ):  ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ,  ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,  ಅಲೆಮಾರಿ/ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ ನಿಗಮಗಳ ವ್ಯಾಪ್ತಿಗೆ ಬರುವ ಜನಾಂಗದ ಫಲಾಪೇಕ್ಷಿಗಳಿಗೆ ನಿಗಮದಿಂದ ಅನುμÁ್ಠನಗೊಳಿಸುತ್ತಿರುವ ಸ್ವಯಂ ಉದ್ಯೋಗ ಯೋಜನೆ (ನೇರಸಾಲ), ಐ.ಎಸ್.ಬಿ ಯೋಜನೆ (ಇ.ವಿ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ, ಸರಕು, ವಾಹನ ಖರೀದಿ ಹಾಗೂ ಇತರೆ ಚಟುವಟಿಕೆಗಳಿಗೆ ಬ್ಯಾಂಕುಗಳ ಸಹಯೋಗದೊಂದಿಗೆ) ಎಂ.ಸಿ.ಎಫ್ (ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆಯಡಿ’ ಮತ್ತು 2022-23 ನೇ ಸಾಲಿಗೆ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಬೇಕಾದ ಅರ್ಹ ಫಲಾಪೇಕ್ಷಿಗಳು ಬೆಂಗಳೂರು ಒನ್/ ಕರ್ನಾಟಕ ಒನ್/ ಸೇವಾಸಿಂಧುವಿನಲ್ಲಿ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಸಲು ದಿನಾಂಕ: 15-09-2022 ಕ್ಕೆ ನಿಗಧಿಪಡಿಸಿದ ಕೊನೆಯ ದಿನಾಂಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕರಿಸದೇ ಇರುವ ಪ್ರಯುಕ್ತ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಂ.214, 12ನೇ ಮುಖ್ಯ ರಸ್ತೆ, ಸಮುದಾಯ ಭವನದ ಎದುರು, ರಾಜಾಜಿನಗರ 6ನೇ ಬ್ಲಾಕ್,       ಬೆಂಗಳೂರು-560 010 ನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *