2021-22ನೇ ಸಾಲಿನ ವರ್ಣಶ್ರೀ ಪುರಸ್ಕಾರಕ್ಕೆ ಆಯ್ಕೆ

ಬೆಂಗಳೂರು, ಅಕ್ಟೋಬರ್ 08 (ಕರ್ನಾಟಕ ವಾರ್ತೆ) : ಕರ್ನಾಟಕ ಲಲಿತಕಲಾ ಅಕಾಡೆಮಿಯು 2021-22ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ, ಮಂಗಳೂರಿನ ಶ್ರೀಮತಿ ವೀಣಾ ಶ್ರೀನಿವಾಸನ್, ಬಾಗಲಕೋಟೆಯ ಪರಮೇಶ ಜೋಳದ, ರಾಯಚೂರಿನ ಪಿ.ಎ.ಬಿ.ಈಶ್ವರ, ಪೂಣೆಯ ಕುಡಲಯ್ಯಾ ಹಿರೇಮಠ, ತುಮಕೂರಿನ ಅಶೋಕ ಕಲ್ಲಶೆಟ್ಟಿ, ವಿಜಯಪುರದ ನಂದಬಸಪ್ಪ ವಾಡೆ, ರಾಮನಗರದ ಕೆ.ಜಿ.ಲಿಂಗದೇವರು, ಮಡಿಕೇರಿಯ ಮಹೇಶ.ಬಿ, ಹುಬ್ಬಳ್ಳಿಯ ಶಕುಂತಲಾ ವರ್ಣೇಕರ, ಬಳ್ಳಾರಿಯ ಮಂಜುನಾಥ ಜಿ. ಕಲಾವಿದರು ಆಯ್ಕೆಯಾಗಿದ್ದಾರೆ.


ಮೊದಲ ಬಾರಿಗೆ ಆಯ್ಕೆಯಾದ 10 ಜನ ಕಲಾವಿದರಿಗೆ ರೂ. 25 ಸಾವಿರಗಳ ನಗದಿನೊಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ರಾಜ್ಯದ ಚಿತ್ರಕಲಾ ಕ್ಷೇತ್ರದಲ್ಲಿ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಪಡೆಯದೇ ಎಲೆಮರೆಯ ಕಾಯಿಯಂತೆ ಸಾಧನೆ ಮಾಡುತ್ತಿರುವ ಕಲಾವಿದರನ್ನು ಗುರುತಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವರ್ಣಶ್ರೀ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *