ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು

ಬೆಂಗಳೂರು, ಅ. 14 (ಕರ್ನಾಟಕ ವಾರ್ತೆ): : ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಯೋಜನೆಯಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಸೆಪ್ಟೆಂಬರ್ 05 ರ ಆದೇಶದಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ಪ್ರಸ್ತುತ ಸರ್ಕಾರವು ಸೆಪ್ಟೆಂಬರ್ 29 ರ ಆದೇಶದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆಗೆ ಸಂಬಂಧಿಸಿದಂತೆ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಚಿಸಿದ್ದು, ಸರ್ಕಾರದ ಈ ಆದಶದಲ್ಲಿ ವಾರ್ಷಿಕ ರೂ. 3.50 ಲಕ್ಷಗಳ ಆಲ ಮಂಜೂರು ಮಾಡಲು ಅನುಮತಿಸಿ ಸಾಲದ ಮೊತ್ತಕ್ಕೆ ವಾರ್ಷಿಕ ಶೇಕಡ 2ರ ಬಡ್ಡಿದರ ವಿಧಿಸಿ ಆದೇಶಿಸಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ

 
ಬೆಂಗಳೂರು, ಅ. 14 (ಕರ್ನಾಟಕ ವಾರ್ತೆ):  
ಬೆಂಗಳುರು ದಂಡು-ಬೆಂಗಳೂರು ನಗರ ರೈಲ್ವೇ ನಿಲ್ದಾಣಗಳ ಮಧ್ಯೆ ರೈಲ್ವೇ ಕಿ.ಮೀ.ನಂ. 352/100-200 ರಲ್ಲಿ ಅಕ್ಟೋಬರ್ 12ರಂದು ಸುಮಾರು 35 ರಿಂದ 40 ವರ್ಷ ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ. ಮೃತನು ಯಾವುದೋ ಚಲಿಸುವ ರೈಲುಗಾಡಿಗೆ ಸಿಕ್ಕಿ ಮೃತಪಟ್ಟಿದ್ದು, ಮೃತನ ಎತ್ತರ 5.6ಅಡಿ, ಸಾಧಾರಣ ಶರೀರ, ಮೃತನ ಮುಖ ಮೂಗಿನಿಂದ ಹಿಡಿದು ತಲೆಯ ಮಧ್ಯದ ವರೆಗೆ ರೈಲುಗಾಡಿಗೆ ಸಿಕ್ಕಿ ಜಜ್ಜಿ ಮುಖ ಗುರುತು ಸಿಗದಂತೆ ಆಗಿರುತ್ತದೆ. ಗೋಧಿ ಮೈಬಣ್ಣ, ಮೃತನ ತಲೆಯಲ್ಲಿ ಸುಮಾರು 1 ಇಂಚು ಕಪ್ಪು ಕೂದಲು, ಎಡಗೈ ಮೊಣಕೈ ಮೇಲೆ MLB*SB ಅಂತ ಆಂಗ್ಲ ಭಾಷೆಯಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾನೆ.
 
ಡಾರ್ಕ್ ಬ್ರೌನ್ ಕಲರಿನ ತುಂಬುತೋಳಿನ ಷರ್ಟ್, ಹಳದಿ ಬಣ್ಣದ ತುಂಬು ತೋಳಿನ ಟೀ-ಷರ್ಟ್, ಕಪ್ಪು ಬಣ್ಣದ ಸೆಕ್ಯೂರಿಟಿ ಪ್ಯಾಂಟು ಅದರ ಜೊತೆಗೆ ಕಪ್ಪು ಬಣ್ಣದ ಸೆಕ್ಯೂರಿಟಿ ಬೆಲ್ಟ್ ಹಾಕಿದ್ದು, ಬಕ್ಕಲ್ ಮೇಲೆ ಎಸ್ ಅಂತ ಇರುತ್ತದೆ. ಮೃತನ ಕೊರಳಿನಲ್ಲಿ ಕೆಂಪು ದಾರ ಇದೆ. ಅಪರಿಚಿತ ಗಂಡಸಿನ ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇದುವರೆಗೂ ಅಪರಿಚಿತನ ಗಂಡಸಿನ ವಾರಸುದಾರರು ಪತ್ತೆಯಾಗಿರುವುದಿಲ್ಲ. ವಾರುಸುದಾರರು ಯಾರಾದು ಇದ್ದಲ್ಲಿ ಪೊಲೀಸ್ ಸಬ್ ಇನ್ಸ್‍ಫೆಕ್ಟರ್, ಕಂಟೋನ್ಮೆಂಟ್ ರೈಲ್ವೇ ಪೊಲೀಸ್ ಸ್ಟೇಷನ್, ಬೆಂಗಳೂರು ಇವರನ್ನು ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.  

Leave a Reply

Your email address will not be published. Required fields are marked *