ಭಾರತ ಕುಟುಂಬ ಉದ್ಯಮ ಶೃಂಗಸಭೆ – 2022

ಬೆಂಗಳೂರು, ಅ. 18 (ಕರ್ನಾಟಕ ವಾರ್ತೆ) : ನಿರಂತರ ಜ್ಞಾನದ ಭಾಗವಾಗಿ (ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (FICCI) ಕೌಟುಂಬಿಕ ಉದ್ಯಮದಿಂದ ಉದ್ಯಮ ಕೌಟುಂಬದ ಪಯಣ ಎಂಬ ಬೃಹತ್ ಕಾರ್ಯಕ್ರಮವನ್ನು ಆಕ್ಟೋಬರ್ 21, 2022 ರಂದು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ.

ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸುವ, ಮಾಹಿತಿ ಹಂಚಿಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕುಟುಂಬ ಉದ್ಯಮದಿಂದ ಉದ್ಯಮ ಕುಟುಂಬಕ್ಕೆ ಪಯಣ, ಬ್ಯಾಂಡ್ ಹುಟ್ಟು ಹಾಕುವುದರೊಂದಿಗೆ ಸಣ್ಣ ವ್ಯಾಪಾರ ವಹಿವಾಟು ಮೂಲಕ ಹೇಗೆ ಯಶಸ್ಸು ಸಾಧಿಸಬಹುದು, ಕುಟುಂಬ ವ್ಯವಹಾರದಲ್ಲಿ ಉತ್ತರಾಧಿಕಾರ ಮತ್ತು ಪರಂಪರೆ, ತೆರಿಗೆ – ಒಂದು ವರವೇ ಅಥವಾ ಶಾಪವೇ?
ಭಾರತ ದೇಶದಲ್ಲಿ 91 ಪ್ರತಿಶತದಷ್ಟು ಪಟ್ಟಿಮಾಡಿದ ಕಂಪನಿಗಳು ಕುಟುಂಬದ ಒಡೆತನದಲ್ಲಿವೆ ಅಥವಾ ಅವುಗಳ ನಿಯಂತ್ರಣದಲ್ಲಿದೆ ಎಂದರೆ ತಪ್ಪಾಗಲಾರದು, ಭಾರತೀಯ ಉದ್ಯಮದ ಇತಿಹಾಸವು ಜಾಗತಿಕವಾಗಿ ಅನೇಕ ದೇಶಗಳಂತೆಯೇ ಇದೆ, ಕುಟುಂಬ-ಒಡೆತನದ ವ್ಯವಹಾರಗಳಿಂದ ನಡೆಯುವ ಪಯಣವಾಗಿದೆ. ಯುರೋಪ್, ಜಪಾನ್, ಅಮೆರಿಕ ಅಥವಾ ಏμÁ್ಯದ ಉಳಿದ ಭಾಗಗಳಂತೆ ಭಾರತದಲ್ಲಿ, ಆರ್ಥಿಕತೆ ಮತ್ತು ವ್ಯವಹಾರದಲ್ಲಿ ಕುಟುಂಬ ನಿಯಂತ್ರಣದ ಪ್ರಾಬಲ್ಯವು ಹೆಚ್ಚಾಗಿದೆ. ಕೌಟುಂಬಿಕ ವ್ಯವಹಾರಗಳು, ವಿಶ್ವದ ಕಂಪನಿಗಳಲ್ಲಿ 190 ಪ್ರತಿಶತಕ್ಕಿಂತಲೂ ಹೆಚ್ಚು, ಅದು ವಾಲ್‍ಮರ್ಟ್ ನಿಂದ ವಾಲ್ ಸ್ಟ್ರೀಟ್ ಜರ್ನಲ್ ವರೆಗೆ, ಫೆÀರಾರಿಯಿಂದ ಫೆರೆÀರೋ ರೋಚರ್, ಅಂಬಾನಿಯಿಂದ ಅದಾನಿಗೆ ಬಿರ್ಲಾದಿಂದ ಬಜಾಜ್ ಮತ್ತು ಪಿರಮಾಲ್‍ನಿಂದ ಪ್ಯಾರಾಗಾನ್‍ವರೆಗೆ ಕಾಣಬಹುದು. ಭಾರತೀಯ μÉೀರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಹೆಚ್ಚಿನ ಕಂಪನಿಗಳು ಎಲ್ಲಾ ಕುಟುಂಬ ಒಡೆತನದ ಅಥವಾ ಕುಟುಂಬ ನಿರ್ವಹಣೆಯಲ್ಲಿರುವ ಕಂಪೆನಿಗಳಾಗಿವೆ.
ಕುಟುಂಬದ ವ್ಯವಹಾರಗಳ ಕಥೆಯು ಪ್ರಮುಖ ಕಾಪೆರ್Çರೇಟ್ ಕಂಪೆನಿಗಳ ಬಗ್ಗೆ ಮಾತ್ರವಲ್ಲ, ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕೂಡ ವ್ಯಾಪಿಸಿದ್ದು, ಪ್ರಬಲ ಪಾತ್ರವನ್ನು ವಹಿಸುತ್ತವೆ. ಇದು ಸರ್ವವ್ಯಾಪಿ ಸಣ್ಣ, ಕುಟುಂಬದ ಮಾಲೀಕತ್ವದ ಅಥವಾ ಸ್ವತಂತ್ರ ವ್ಯಾಪಾರದ ಅಂಗಡಿಗಳಿಂದ ಹಿಡಿದು ಸಾಂಪ್ರದಾಯಿಕ ಜವಳಿ ಮತ್ತು ಅತ್ಯಾಧುನಿಕ ಆರ್ಥಿಕತೆಯನ್ನು ಸಹ ಒಳಗೊಂಡಿದೆ.
ಇಂತಹ ಕುಟುಂಬ ವ್ಯವಹಾರಗಳ ನಿರಂತರ ಉಪಸ್ಥಿತಿಗೆ ನಿರ್ಣಾಯಕವಾದ ನಂಬಿಕೆ ಮತ್ತು ನಿμÉ್ಠಯ ಎಳೆಗಳು ಅಲ್ಪಾವಧಿಯ ಕೆಲಸಗಾರನ ಸಂಬಂಧಿಯಲ್ಲಿನ ನಂಬಿಕೆಯಿಂದ ಉಂಟಾಗುತ್ತದೆ. ಆದರೆ, ನಂತರ, ಉದ್ಯಮದ ವಿಸ್ತರಣೆಯ ಮೇಲೆ ಗಮನಹರಿಸದೆ ಅಥವಾ ತಲೆಮಾರುಗಳವರೆಗೆ ವ್ಯವಹಾರದ ಶಾಶ್ವತತೆಯನ್ನು ಕಾಪಾಡುವ ಬಯಕೆಯಿಲ್ಲದಿದ್ದರೆ, ಉದ್ಯಮಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರತಿಭೆ ಪಡೆಯಲಾರರು.
ಇಂದು, ಕುಟುಂಬದ ವ್ಯವಹಾರಗಳು ಕೇವಲ ಹೆಚ್ಚು ಸ್ಪರ್ಧಾತ್ಮಕ ಮಟ್ಟದಲ್ಲಿ ಕಾರ್ಯನಿರ್ವಹಿಸುವುದು ಮಾತ್ರವಲ್ಲ, ಹಲವಾರು ಸ್ಥಾಪಿತ ಸ್ಟಾರ್ಟ್ ಅಪ್‍ಗಳೊಂದಿಗೆ ಪೈಪೆÇೀಟಿ ನಡೆಸುತ್ತಿವೆ, ಕೆಲವು ನಿರ್ಣಾಯಕ ಕೇಂದ್ರೀಕೃತ ಕೊಡುಗೆಗಳನ್ನು ಗ್ರಾಹಕರಿಗೆ ನೀಡುವುದರೊಂದಿಗೆ ಮೌಲ್ಯಮಾಪನ ಗಡಿಗಳನ್ನು ಮೀರಿ ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಇದು ಇಂದು ಗ್ರಾಹಕರಲ್ಲಿ ವೇಗವಾಗಿ ಬದಲಾಗುತ್ತಿರುವ ಆದ್ಯತೆಗಳು, ಡಿಜಿಟಲೀಕರಣಗೊಂಡಿರುವ ದೊಡ್ಡ ದೊಡ್ಡ ಕಂಪೆನಿಗಳ ಜೊತೆ ಖರೀದಿಸುವ ಶಕ್ತಿ, ಪದೇ ಪದೇ ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳು ಮತ್ತು ಇಂತಹ ಪರಿಸರ ವ್ಯವಸ್ಥೆಯೊಳಗೆ ನಿರಂತರವಾಗಿ ಇಂದಿನ ಕಾಲಕ್ಕೆ ತಕ್ಕಂತೆ ಮರು ಮಾದರಿ ಉದ್ಯಮದ ಮಾದರಿಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಗಳು ಸಾಗುತ್ತಲೇ ಇವೆÉ ಎಂದು ಎಫ್‍ಐಸಿಸಿಐ ಕರ್ನಾಟಕ ಅಧ್ಯಕ್ಷ ಉಲ್ಲಾಸ್ ಕಾಮತ್ ಹೇಳುತ್ತಾರೆ.
ದೊಡ್ಡ ಮಟ್ಟದ ವ್ಯಾಪಾರಗಳು ಹಿಂದೆ ಮತ್ತು ಇಂದು ಹೇಗೆ ಪ್ರತಿಕ್ರಿಯಿಸಿದ್ದವು ಮತ್ತು ಪ್ರತಿಕ್ರಿಯಿಸುತ್ತಿವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ, ಏಕೆಂದರೆ ಪ್ರತಿಯೊಂದು ವಿಷಯದಲ್ಲಿಯೂ ಹೆಚ್ಚಿನ ಅಪಾಯವಿದೆ. ದೊಡ್ಡ ಕಾರ್ಪೋರೇಟ್‍ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಪರಿಣಾಮ ಮತ್ತು ಇವುಗಳಲ್ಲಿ, ಯಾವುದಾದರೊಂದು ವ್ಯವಸ್ಥೆಯ ಕುಸಿತವು ಅವರು ಕಾರ್ಯನಿರ್ವಹಿಸುವ ಸ್ಥಳಗಳ ಮೇಲೆ ಉಂಟುಮಾಡಬಹುದಾದ ಏರಿಳಿತದ ಪರಿಣಾಮವು ಮುಖ್ಯವಾಗಿರುತ್ತದೆ.
1991 ರಲ್ಲಿ ಹೊಸ ಆರ್ಥಿಕ ನೀತಿಯ ನಂತರ ಕುಟುಂಬ-ಮಾಲೀಕತ್ವದ ವ್ಯವಹಾರಕ್ಕೆ ಬಹಳಷ್ಟು ನಷ್ಟವಾಗಿದೆ. ಅಂದು ಹೆಚ್ಚೆಚ್ಚು ಆವಿμÁ್ಕರ, ಸಂಶೋಧನೆಗೆ ಒಳಗಾಗುವ ಅಗತ್ಯವಿರದಿದ್ದ ಸಂಸ್ಥೆಗಳು ಈಗ ಹೊಸ ಉದ್ಯಮಶೀಲತೆ ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಉದ್ಯಮಕ್ಕೆ ಪರವಾನಗಿ ಪಡೆಯಲು ರಾಜ್ಯದ ಅಧಿಕಾರಶಾಹಿಯ ಬಳಿ ಕಸರತ್ತು ಮಾಡಲು ಕಲಿತ ಕುಟುಂಬಗಳಿಗೆ ಗ್ರಾಹಕರ ಮೇಲೆ ಕೇಂದ್ರೀಕರಿಸುವುದು ಅಥವಾ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಹೇಗೆ ಎಂದು ತಿಳಿದಿರಲಿಲ್ಲ.
1990 ರ ದಶಕದ ಆರಂಭದಲ್ಲಿ ದೇಶದ ಪ್ರಮುಖ 50 ವ್ಯಾಪಾರ ಸಂಸ್ಥೆಗಳ ಪೈಕಿ ಥಾಪರ್, ಮಫತ್‍ಲಾಲ್, ಲಾಲ್‍ಭಾಯ್, ಶ್ರೀರಾಮ್ (DCM) ಮತ್ತು ಶಾ (ಮುಕುಂದ್) ನಂತಹ ಕುಟುಂಬ ಆಧಾರಿತ ಉದ್ಯಮ ಸಂಸ್ಥೆಗಳು ಅದಾನಿ, ಡಾ ರೆಡ್ಡೀಸ್, ಮಿತ್ತಲ್ಸ್ (ಭಾರತಿ) ಮತ್ತು ಶಾಂಘ್ವಿ (ಸನ್ ಫಾರ್ಮಾ)ನಂತರ ಕುಟುಂಬಗಳ ಹೊಸ ಉದ್ಯಮಶೀಲ ಸಂಸ್ಥೆಗಳ ಎದುರು ಸೋತವು, ಉನ್ನತ ವ್ಯಾಪಾರ ಸಂಸ್ಥೆಗಳಾದ ಟಾಟಾ, ಬಿರ್ಲಾ, ಅಂಬಾನಿ (RIL)) ಬಜಾಜ್, ಮಹೀಂದ್ರಾದಂತಹ ಕಂಪೆನಿಗಳು ಉಳಿಯಲು ತಮ್ಮನ್ನು ತಾವು ಮರುಸಂಶೋಧನೆ ಮಾಡಿಕೊಳ್ಳಬೇಕಾಗಿ ಬಂತು.
 2000 ದಶಕದ ಆರಂಭದಲ್ಲಿ ಡಿಜಿಟಲೀಕರಣ ಮತ್ತು ಮಾಹಿತಿ ತಂತ್ರಜ್ಞಾನ ಆಗಮನದ ನಂತರ, ಕುಟುಂಬ-ನೇತೃತ್ವದ ಉದ್ಯಮಗಳು ಬೇರೂರಲು ಪ್ರಾರಂಭಿಸಿದವು. ಆಧುನಿಕ ಸೇವೆಗಳ ವಲಯದಲ್ಲಿ ಪ್ರಾಬಲ್ಯವನ್ನು ಗಳಿಸಿದವು. ಅದು ಟೆಲಿಕಾಂ, ಐಟಿ, ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಇರಲಿ, ಜಾಗತಿಕ ಮಟ್ಟದ ಕಂಪೆನಿಗಳ ಜೊತೆ ಪೈಪೆÇೀಟಿ ನಡೆಸುವುದು ಮಾತ್ರವಲ್ಲದೆ ಹಲವಾರು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮೀರಿಸುತ್ತಿವೆ.
ಇಂದು ಭಾರತದ ಇಂತಹ ಕಂಪೆನಿಗಳು ಕಡಿಮೆ ಜಾಗತೀಕರಣಗೊಂಡಿದೆ. ಕಡಿಮೆ ಸಮಾನತೆಯಲ್ಲಿದೆ. ಎಂಬ ಮಾತುಗಳನ್ನಾಡಿದರೆ ಕೊಂಚ ಸಂದೇಹವುಂಟಾಗುತ್ತದೆ. ಹೆಚ್ಚೆಚ್ಚು ಡಿಜಿಟಲೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಮರು ಸಂಶೋಧನೆ, ಕಂಪೆನಿಗಳು ಭವಿಷ್ಯದ ಉಳಿವಿಕೆಗಾಗಿ ಸ್ಪರ್ಧಾತ್ಮಕತೆ, ಪೈಪೆÇೀಟಿಗೆ ಇಳಿಯಬೇಕೆನ್ನುವುದರಲ್ಲಿ ಸಂದೇಹವಿಲ್ಲ.
ಈಗ ಬೇಕಾಗಿರುವುದು, ಇಂದಿನ ಅಗತ್ಯತೆ ನಾಯಕತ್ವ ಮತ್ತು ಆಡಳಿತ, ಇಂದಿನ ಪರಿಸ್ಥಿತಿಗೆ ಉಳಿದುಕೊಂಡು, ಹೊಂದಿಕೊಂಡು ಬೆಳೆದುಕೊಂಡು ಹೋಗುವ ಕುಟುಂಬದ ಮಾತೃಪ್ರಧಾನ ಅಥವಾ ಪಿತೃಪ್ರಧಾನ’ ಆಧಾರಿತ ಕಂಪೆನಿಗಳು ಮತ್ತು ಕಂಪೆನಿಗಳು ಸ್ಪಷ್ಟ ಮತ್ತು ಪ್ರಬುದ್ಧ ನಾಯಕತ್ವವನ್ನು ಹೊಂದಿರುತ್ತಾರೆ. ಅವರು ಉತ್ತಮ ಕುಟುಂಬ ವ್ಯವಹಾರ ಅಡಳಿತ ಕಾರ್ಯವಿಧಾನದೊಂದಿಗೆ ಎಲ್ಲರನ್ನೂ ಒಟ್ಟುಗೂಡಿಸಬಹುದು.

Leave a Reply

Your email address will not be published. Required fields are marked *