ಮಕ್ಕಳ ಹಕ್ಕುಗಳ ಮಾಸೋತ್ಸವದ-2022ರ ಉದ್ಘಾಟನಾ ಕಾರ್ಯಕ್ರಮ
ದ.ಕ ಜಿಲ್ಲೆಯಲ್ಲಿ 2002 ರಿಂದ, ಮಕ್ಕಳಹಕ್ಕುಗಳಮಾಸೋತ್ಸವ ಸಮಿತಿ, ಪಡಿ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟವು ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಎಸ್.ಡಿ.ಎಮ್,ಸಿ ಸಂಘಟನೆಗಳು ಇವರೆಲ್ಲರ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಮಕ್ಕಳಹಕ್ಕುಗಳ ಮಾಸೋತ್ಸವನ್ನು ನಡೆಸುತ್ತಾ ಬಂದಿರುತ್ತದೆ.
ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮಕ್ಕಳು ಅನೇಕ ಹೊಸಹೊಸ ಸಮಸ್ಯೆಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈನಿಟ್ಟಿನಲ್ಲಿ ಮಕ್ಕಳ ಹಕ್ಕುಗಳನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ 2022-2023 ಸಾಲಿನ ಮಕ್ಕಳ ಹಕ್ಕುಗಳ ಮಾಸೊತ್ಸವನ್ನು (ನವಂಬರ್-ಡಿಸಂಬರ್) ಮಾಸಾದ್ಯಂತ ವಿವಿಧ ನಾಗರಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಈ ಸಲದ ಮಕ್ಕಳ ಹಕ್ಕುಗಳ ಮಾಸೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ: 28/10/2022 ಪೂರ್ವಾಹ್ನ 10 ಗಂಟೆಗೆ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯದ ಸಭಾಂಗಣ, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ.