ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದೀರಾ..? ಈ ಶುಭ ಬದಲಾವಣೆಗಳು ಖಚಿತ..!

ವಯಸ್ಸಾದವರನ್ನು ಅಥವಾ ಹಿರಿಯರನ್ನು ನೋಡಿದಾಕ್ಷಣ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡದುಕೊಳ್ಳುವುದು ನಮ್ಮ ಪ್ರಾಚೀನ ಸಂಪ್ರದಾಯವಾಗಿದೆ. ಇದು ಹಿರಿಯರಿಗೆ ನಾವು ನೀಡುವ ಗೌರವದ ಸಂಕೇತವಾಗಿದೆ. ಪಾದವನ್ನು ಮುಟ್ಟಿ ಆಶೀರ್ವಾದ ಪಡದುಕೊಳ್ಳುವುದು ಅತ್ಯಂತ ಹಳೆಯ ಸಂಪ್ರದಾಯವಾದರೂ ಇಂದಿಗೂ ಅದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಪಾದಗಳನ್ನು ಮುಟ್ಟಿ ಆಶೀರ್ವಾದವನ್ನು ಪಡೆದುಕೊಳ್ಳುವುದರಿಂದ ಅನೇಕ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳಿವೆ. ಯಾರಾದರೂ ನಮ್ಮ ಪಾದವನ್ನು ಮುಟ್ಟಿದಾಗ ನಾವೇನು ಮಾಡಬೇಕು..? ಇದರ ಪ್ರಯೋಜನವೇನು..? ಅರಿಯಿರಿ.

ದೇವರ ಬಳಿ ಕ್ಷಮೆಯಾಚಿಸಿ

ಯಾವುದೇ ಓರ್ವ ವ್ಯಕ್ತಿ ಮಹಿಳೆ ಅಥವಾ ಪುರುಷರ ಪಾದಗಳನ್ನು ಮುಟ್ಟಿದಾಗ ಅವರು ಶುದ್ಧ ಮನಸ್ಸಿನಿಂದ ಆಶೀರ್ವಾದ ಮಾಡಬೇಕು. ಹಾಗೂ ಪಾದವನ್ನು ಸ್ಪರ್ಶಿಸುವಾಗ ಪ್ರಧಾನ ದೇವತೆಯನ್ನು ಮನದಲ್ಲಿ ನೆನೆಯಬೇಕು. ಯಾರಾದರೂ ನಮ್ಮ ಪಾದಗಳನ್ನು ಮುಟ್ಟಿದಾಗ ನಾವು ಅವರ ಬಗ್ಗೆ ಕೀಳಾಗಿ ನೋಡಬಾರದು. ಅವರು ನಮ್ಮನ್ನು ಗೌರವಿಸಿ ಪಾದವನ್ನು ಸ್ಪರ್ಶಿಸುವಂತೆ ನಾವು ಅವರನ್ನು ಗೌರವಿಸಿ ಆಶೀರ್ವಾದವನ್ನು ಮಾಡಬೇಕು. ಒಂದು ವೇಳೆ ನೀವು ಅಗೌರವವನ್ನು ಸೂಚಿಸಿದ್ದರೆ ತಪ್ಪದೇ ದೇವರ ಬಳಿ ಕ್ಷಮೆಯನ್ನು ಕೇಳಿ.

​ಸನಾತನ ಧರ್ಮದಲ್ಲಿ ಪಾದ ಸ್ಪರ್ಶ

ಹಿರಿಯರನ್ನು ಗೌರವಿಸಲು ಅವರ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆದುಕೊಳ್ಳುವ ಸಂಪ್ರದಾಯ ಶತಮಾನಗಳಿಂದಲೂ ರೂಢಿಯಲ್ಲಿದೆ. ಸನಾತನ ಧರ್ಮದಲ್ಲಿ ಪಾದಗಳನ್ನು ಸ್ಪರ್ಶಿಸುವುದು ಹಿರಿಯರ ಗೌರವಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಿರಿಯರ ಪಾದವನ್ನು ಸ್ಪರ್ಶಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಿರಿಯರ ಪಾದ ಸ್ಪರ್ಶವು ಹಿರಿಯರ ಗೌರವವರನ್ನು ಹೆಚ್ಚಿಸುವುದರೊಂದಿಗೆ ನಮ್ಮ ಗೌರವವನ್ನು ಕೂಡ ಹೆಚ್ಚಿಸುತ್ತದೆ.

​ಧನಾತ್ಮಕ ಶಕ್ತಿಯು ಆಶೀರ್ವಾದದ ರೂಪದಲ್ಲಿ ಸಿಗುವುದು

ಪಾದ ಸ್ಪರ್ಶವೆಂದರೆ ಸಂಪೂರ್ಣ ಭಕ್ತಿಯಿಂದ ಯಾರಿಗಾದರೂ ನಮಸ್ಕಾರ ಮಾಡುವುದು ಎಂದರ್ಥ. ಇದು ವಿನಮ್ರತೆಯನ್ನು ಮತ್ತು ಮಾನಸಿಕ ಶಾಂತಿಯನ್ನು ತರುತ್ತದೆ. ಅಷ್ಟು ಮಾತ್ರವಲ್ಲ, ಪಾದ ಸ್ಪರ್ಶವನ್ನು ಮಾಡುವುದರಿಂದ ಇನ್ನೊಬ್ಬರು ಕೂಡ ನಮ್ಮ ಆಚರಣೆಯಿಂದ ಪ್ರಭಾವಿತಗೊಳ್ಳುತ್ತಾರೆ. ನಾವು ಗೌರವಾನ್ವಿತ ವ್ಯಕ್ತಿಗಳ ಪಾದವನ್ನು ಮುಟ್ಟಿದಾಗ ಆಶೀರ್ವಾದದೊಂದಿಗೆ ಅವರ ಕೈ ನಮ್ಮ ತಲೆಯನ್ನು ಮತ್ತು ನಮ್ಮ ಕೈ ಅವರ ಪಾದವನ್ನು ಮುಟ್ಟುತ್ತದೆ. ಆಗ ಆ ಗೌರವಾನ್ವಿತ ವ್ಯಕ್ತಿಯಲ್ಲಿನ ಸಕಾರಾತ್ಮಕ ಶಕ್ತಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ ಎನ್ನುವ ನಂಬಿಕೆಯಿದೆ. ಇದು ನಮ್ಮ ಆಧ್ಯಾತ್ಮಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ.

​ಆಯಸ್ಸು, ವಿದ್ಯಾ, ಖ್ಯಾತಿ ಮತ್ತು ಶಕ್ತಿ ಪ್ರಾಪ್ತವಾಗುತ್ತದೆ

ದಿನನಿತ್ಯ ಗುರು – ಹಿರಿಯರ,  ತಾಯಿ ತಂದೆಗಳ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಳ್ಳುವುದರಿಂದ ಆಯಸ್ಸು, ವಿದ್ಯಾ, ಖ್ಯಾತಿ ಮತ್ತು ಶಕ್ತಿ ಪ್ರಾಪ್ತವಾಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ, ನ್ಯೂಟನ್‌ ನಿಯಮದ ಪ್ರಕಾರ ಪ್ರಪಂಚದ ಪ್ರತಿಯೊಂದು ವಸ್ತುಗಳು ಗುರುತ್ವಾಕರ್ಷಣೆ ನಿಯಮಕ್ಕೆ ಬದ್ಧವಾಗಿದೆ. ಅದೇ ನಿಯಮ ನಮ್ಮ ದೇಹಕ್ಕೂ ಕೂಡ ಅನ್ವಯವಾಗುತ್ತದೆ. ತಲೆಯನ್ನು ಉತ್ತರ ಧ್ರುವವೆಂದು ಮತ್ತು ಕಾಲುಗಳನ್ನು ದಕ್ಷಿಣ ಧ್ರುವವೆಂದು ಪರಿಗಣಿಸಲಾಗುತ್ತದೆ.

​ಆಶೀರ್ವಾದದ ವೈಜ್ಞಾನಿಕ ಅಂಶ

ನ್ಯೂಟನ್‌ ನಿಯಮದ ಪ್ರಕಾರ, ಧನಾತ್ಮಕ ಶಕ್ತಿಯು ಉತ್ತರ ಧ್ರುವದಿಂದ ದೇಹಕ್ಕೆ ಪ್ರವೇಶಿಸುತ್ತದೆ. ಅಂದರೆ ತಲೆಯಿಂದ ಧನಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸಿ ದಕ್ಷಿಣ ಧ್ರುವದಿಂದ ಅಂದರೆ ಪಾದದತ್ತ ಹರಿಯುತ್ತದೆ. ಈ ಧನಾತ್ಮಕ ಶಕ್ತಿಯನ್ನು ದಕ್ಷಿಣ ಧ್ರುವದಲ್ಲಿ ಅನಿಯಮಿತ ಪ್ರಮಾಣದಲ್ಲಿ ಸ್ಥಿರಗೊಳಿಸಲಾಗುತ್ತದೆ. ಯಾರಾದರೂ ಓರ್ವ ವ್ಯಕ್ತಿಯ ಪಾದವನ್ನು ಸ್ಪರ್ಶಿಸಿದಾಗ ಆತನಲ್ಲಿದ್ದ ಧನಾತ್ಮಕ ಅಂಶದ ಸ್ವಲ್ಪ ಭಾಗವನ್ನು ಪಡೆಯುತ್ತಾನೆ. ಈ ಶಕ್ತಿಯನ್ನೇ ಧಾರ್ಮಿಕ ದೃಷ್ಟಿಕೋನದಲ್ಲಿ ಆಶೀರ್ವಾದವೆಂದು ಕರೆಯಬಹುದು. ಹಾಗೂ ಹಿಂದು ಸಂಪ್ರದಾಯದಲ್ಲಿ ಇದನ್ನು ಪಾದ ಸ್ಪರ್ಶ ಎನ್ನಲಾಗುತ್ತದೆ.

​ಚರಣ ಸ್ಪರ್ಶ ಅಥವಾ ಚರಣ ವಂದನಾ ಸಭ್ಯತೆಯ ಪ್ರತೀಕ

ಚರಣ ಸ್ಪರ್ಶ ಮತ್ತು ಚರಣ ವಂದನಾವು ಭಾರತೀಯ ಸಂಸ್ಕೃತಿಯಲ್ಲಿ ನಾಗರೀಕತೆಯ ಹಾಗೂ ಸದ್ಗುಣಗಳ ಸಂಕೇತವಾಗಿದೆ. ಶಕ್ತಿಯು ಕಾಲ್ಬೆರಳುಗಳಿಂದ ಹರಿಯುತ್ತದೆ ಅಥವಾ ಸಂಚರಿಸುತ್ತದೆ ಎನ್ನುವ ನಂಬಿಕೆಯಿದೆ. ಹಿರಿಯರ ಪಾದಗಳನ್ನು ನಿಯಮಿತವಾಗಿ ಸ್ಪರ್ಶಿಸುವ ಮೂಲಕ ಅನೇಕ ದುಷ್ಪರಿಣಾಮವನ್ನುಂಟು ಮಾಡುವ ಗ್ರಹಗಳು ಕೂಡ ಅನುಕೂಲಕಾರಿ ಪರಿಣಾಮವನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ನಾವು ಗುರು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಮತ್ತು ಅವರನ್ನು ಗೌರವದಿಂದ ನೋಡಬೇಕು.

​ಸೂಕ್ಷ್ಮ ವ್ಯಾಯಾಮವಾಗಿದೆ

ನಿಯಮಿತವಾಗಿ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ಕೂಡ ಒಂದು ರೀತಿಯ ವ್ಯಾಯಾಮವಾಗಿದೆ. ಪಾದ ಸ್ಪರ್ಶವು ದೈಹಿಕ ವ್ಯಾಯಾಮಕ್ಕೆ ಕಾರಣವಾಗುತ್ತದೆ. ತಲೆಯನ್ನು ಬಗ್ಗಿಸಿ ಪಾದ ಸ್ಪರ್ಶ ಮಾಡುವುದರಿಂದ ತಲೆಗೆ ಉತ್ತಮ ರೀತಿಯಲ್ಲಿ ರಕ್ತಸಂಚಾರವಾಗುವುದು. ತಲೆಯನ್ನು ಬಗ್ಗಿಸಿ ನಮಸ್ಕಾರ ಮಾಡುವುದರಿಂದ ನಮ್ಮಲ್ಲಿನ ಅಹಂಕಾರ ನಾಶವಾಗುತ್ತದೆ.

​ಜೀವನದಲ್ಲಿ ಉನ್ನತಿ ಪಡೆಯಬಹುದು

ವಿಶೇಷ ಶಕ್ತಿಯು ಕಾಲ್ಬೆರಳುಗಳಿಂದ ಹರಡುತ್ತದೆ. ನಿಯಮಿತವಾದ ಹಿರಿಯರ ಪಾದ ಸ್ಪರ್ಶದಿಂದ ಪಡೆಯುವ ಆಶೀರ್ವಾದವು ವ್ಯಕ್ತಿಯ ಪ್ರಗತಿಗೆ ಕಾರಣವಾಗುತ್ತದೆ. ಕಪಿಲಾ ಎನ್ನುವ ಹಸುವನ್ನು ದಾನ ಮಾಡುವುದರಿಂದ ದೊರೆಯುವ ಫಲವನ್ನು ಮತ್ತು ಕಾರ್ತಿಕ ಮತ್ತು ಜ್ಯೇಷ್ಠ ಮಾಸದಲ್ಲಿ ಪುಷ್ಕರ ಸ್ನಾನ, ದಾನ, ಸದ್ಗುಣ ಇತ್ಯಾದಿಗಳನ್ನು ಮಾಡಿದ ಫಲವನ್ನು ಹಿರಿಯರ ಪಾದ ಸ್ಪರ್ಶದಿಂದ ಪಡೆದುಕೊಳ್ಳಬಹುದು.

Source : What’sapp

Leave a Reply

Your email address will not be published. Required fields are marked *