ಭಾರತೀಯ ಆಡಳಿತಾತ್ಮಕ ಫೆಲೋಶಿಪ್‌ ಪೂರ್ಣಗೊಳಿಸಿದವರಿಗೆ ರಾಜ್ಯಪಾಲರಿಂದ ಸನ್ಮಾನ

ಬೆಂಗಳೂರು 12.12.2022: ಕರ್ನಾಟಕದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ನಡ್ಜ್ ಸಂಸ್ಥೆ ವತಿಯಿಂದ ರಾಜಭವನದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ದಿ-ನಡ್ಜ್ ಸಹಯೋಗದಲ್ಲಿ 18 ತಿಂಗಳ ಭಾರತೀಯ ಆಡಳಿತಾತ್ಮಕ ಫೆಲೋಶಿಪ್‌ ಅನ್ನು ಪೂರ್ಣಗೊಳಿಸಿದವರನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು  ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ನಡ್ಜ್ ಒಂದು ಕ್ರಿಯಾಶೀಲ ಸಂಸ್ಥೆಯಾಗಿದ್ದು, ಅದರ ವಿವಿಧ ಪಾಲುದಾರರೊಂದಿಗೆ ಬಡತನ ಮುಕ್ತ ಭಾರತಕ್ಕಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯು ಸರ್ಕಾರಗಳು, ಮಾರುಕಟ್ಟೆಗಳು ಮತ್ತು ನಾಗರಿಕ ಸಮಾಜದೊಂದಿಗೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕೇಂದ್ರ, ಗ್ರಾಮೀಣಾಭಿವೃದ್ಧಿ ಕೇಂದ್ರ ಮತ್ತು ಸಾಮಾಜಿಕ ಆವಿಷ್ಕಾರ ಕೇಂದ್ರದ ಮೂಲಕ ಎಲ್ಲರಿಗೂ ದೊಡ್ಡ ಪ್ರಮಾಣದ ಜೀವನೋಪಾಯವನ್ನು ಸೃಷ್ಟಿಸಲು ಪಾಲುದಾರಿಕೆ ಹೊಂದಿದೆ ಎಂದರು.
ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಫೆಲೋಶಿಪ್ ಕಾರ್ಪೊರೇಟ್ ವಲಯದಿಂದ ಹಿರಿಯ ಅಧಿಕಾರಿಗಳು (ಫೆಲೋಗಳು) ಸರ್ಕಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ದಿ ನಡ್ಜ್‌ನ ಸಹಕಾರಿಯಾಗಿದೆ. ಆಡಳಿತದಲ್ಲಿ ದಕ್ಷತೆಯನ್ನು ತರಲು ಮತ್ತು ಸರ್ಕಾರದ ಬದ್ಧತೆಗಳನ್ನು ಪೂರೈಸಲು ಸಾರ್ವಜನಿಕ-ಖಾಸಗಿ ಸಂಸ್ಥೆಗಳಿಂದ ಸಹಕಾರ ಪಡೆಯುವಲ್ಲಿ ಕರ್ನಾಟಕ ಸರ್ಕಾರವು ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ.
ಅಕ್ಟೋಬರ್ – 2020 ರಲ್ಲಿ, ನಡ್ಜ್ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಕೆಲಸ ಮಾಡಲು ಅವಕಾಶವನ್ನು ಕಲ್ಪಿಸಲಾಯಿತು. ಜುಲೈ 2021 ರಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಭಾರತೀಯ ಆಡಳಿತಾತ್ಮಕ ಫೆಲೋಶಿಪ್ ಕಾರ್ಯಕ್ರಮವು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕಾಗಿ ಒಂದು ನವೀನ ಪ್ರಯತ್ನವಾಗಿದೆ. ಕರ್ನಾಟಕ ಸರ್ಕಾರ ಮತ್ತು ಹಿರಿಯ ಆಡಳಿತ ಅಧಿಕಾರಿಗಳ ಮಾರ್ಗದರ್ಶನ ಈ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಿದೆ.ರಾಜ್ಯದ 10 ಪ್ರಮುಖ ಇಲಾಖೆಗಳಲ್ಲಿನ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸಲು ಹಿರಿಯ ಕಾರ್ಪೊರೇಟ್ ಅಧಿಕಾರಿಗಳು ರಾಜ್ಯದ ಹಿರಿಯ ಆಡಳಿತ ಅಧಿಕಾರಿಗಳಿಗೆ ನಡ್ಜ್ ಮೂಲಕ ಬೆಂಬಲವನ್ನು ಒದಗಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದರು.
18 ತಿಂಗಳ ಫೆಲೋಶಿಫ್ ಅವಧಿಯಲ್ಲಿ ಅನೇಕ ಸಕರಾತ್ಮಕ ಫಲಿತಾಂಶಗಳು ದೊರಕಿದ್ದು,  ಹಿರಿಯ ಆಡಳಿತಾತ್ಮಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸರ್ಕಾರಿ ಯೋಜನೆಗಳನ್ನು ತಲುಪಲು ಮತ್ತು ಅನುಷ್ಠಾನಕ್ಕೆ ತರುವಲ್ಲಿ ಶ್ಲಾಘನೀಯ ಕೊಡುಗೆಗಳನ್ನು ನೀಡಲಾಗಿದೆ. ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಮುಖ ಇಲಾಖೆಗಳು ಸೇರಿದಂತೆ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಚಿಂತನೆಗಳು, ನಾವೀನ್ಯತೆ, ದಕ್ಷತೆ ಮತ್ತು ತಂತ್ರಜ್ಞಾನ ಇತ್ಯಾದಿ ಯೋಜನೆಗಳಲ್ಲಿ 20 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಫೆಲೋಗಳು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರದ ಈ ಮಾದರಿಯನ್ನು ನೀತಿ ಆಯೋಗ ಇದನ್ನು ಮೆಚ್ಚಿದೆ ಮತ್ತು ದೇಶದ ಇತರ ರಾಜ್ಯಗಳು ಸಹ ಈ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ದೇಶದ ಪ್ರಧಾನಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಜೊತೆ ಕೆಲಸ ಮಾಡುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್‌ಗಳು ಮತ್ತು ಸ್ಟ್ಯಾಂಡ್‌ಅಪ್‌ಗಳ ಮೂಲಕ ಶ್ರೇಷ್ಠ ಭಾರತ ಮತ್ತು ಆತ್ಮನಿರ್ಭರ ಭಾರತವನ್ನು ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಮುಂದಿನ 25 ವರ್ಷಗಳ ಪ್ರಯಾಣವು ನವ ಭಾರತ ನಿರ್ಮಾಣಕ್ಕೆ ಸುವರ್ಣಯುಗವಾಗಿದೆ. ಈ ಅಮೃತಕಾಲದಲ್ಲಿ ನಮ್ಮ ಸಂಕಲ್ಪಗಳ ಸಾಧನೆಯು ನಮ್ಮನ್ನು ಸ್ವಾತಂತ್ರ್ಯದ 100 ವರ್ಷಗಳವರೆಗೆ ಕೊಂಡೊಯ್ಯುತ್ತದೆ. ದೇಶವು ಈ ವರ್ಷ ಜಿ-20 ನ ಅಧ್ಯಕ್ಷತೆ ವಹಿಸುತ್ತಿರುವುದು ಕಾಕತಾಳೀಯವಾಗಿದೆ. ಜಿ-20 ಅಧ್ಯಕ್ಷ ಸ್ಥಾನದ ಮೂಲಕ, ವಿಶ್ವದಾದ್ಯಂತದ ದೇಶಗಳ ಮುಂದೆ ಭಾರತದ ಪ್ರಬಲ ಸ್ಥಾನವನ್ನು ಪ್ರದರ್ಶಿಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್ (SRLM)-ಅರುಣ ಸಂಪಿಗೆ, ಕರ್ನಾಟಕ ಆಡಳಿತಾತ್ಮಕ ಸುಧಾರಣೆಗಳು ಆಯೋಗ-2 -ಬಾಲಸುಬ್ರಮಣ್ಯ ಆರ್, ತೋಟಗಾರಿಕೆ ಇಲಾಖೆ- ಗಾಯತ್ರಿ ಸ್ವಾಹರ್, ಶಿಕ್ಷಣ, ಸಾಕ್ಷರತೆ ಇಲಾಖೆ- ಗಿರಿ ಬಾಲಸುಬ್ರಮಣ್ಯಂ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ರಾಮಚಂದ್ರನ್ ನಾರಾಯಣಸ್ವಾಮಿ, ಕೃಷಿ ಇಲಾಖೆ- ರವಿ ತ್ರಿವೇದಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ರೋಹಿತ್ ಮಲ್ಹೋತ್ರ, ಪಂಚಾಯತ್ ರಾಜ್ -ಶೋಭಾ ಆನಂದ್ ರೆಡ್ಡಿ, ಮೂಲಭೂತಸೌಕರ್ಯ ಅಭಿವೃದ್ಧಿ ಇಲಾಖೆ ಸುನಿಲ್ ಕುಮಾರ್ ವಯ, ಕರ್ನಾಟಕದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ- ಶ್ರೀನಿವಾಸ ಮಡೇನಹಳ್ಳಿ ಅವರು ಫೆಲೋಶಿಪ್ ಮಾಡಿದ್ದು, ಪ್ರಮಾಣ ಪತ್ರ ವಿತರಿಸಲಾಯಿತು.
ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಸಾಮಾಜಿಕ ನಾವೀನ್ಯತೆ ಕೇಂದ್ರದ ಸಿಇಓ ಸುಧಾ ಶ್ರೀನಿವಾಸನ್, ನಡ್ಜ್ ನ ಸಂಸ್ಥಾಪಕ ಮತ್ತು CEO, ಶ್ರೀ. ಅತುಲ್ ಸತೀಜ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *