ವಾರ್ತಾಜಾಲ,ಶಿಡ್ಲಘಟ್ಟ : NPS ರದ್ದುಪಡಿಸಿ ನಿಶ್ಚಿತ ಪಿಂಚಣಿಯನ್ನು ಜಾರಿಗೆ ತರುವುದು. OPS ಪಡೆದೇ ತೀರುವ ಸಂಕಲ್ಪದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ) ಬೆಂಗಳೂರು ವತಿಯಿಂದ ಇದೇ ಡಿಸೆಂಬರ್ 19 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ “ಮಾಡು ಇಲ್ಲವೇ ಮಡಿ” ಅನಿರ್ಧಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ನೌಕರರ ನ್ಯಾಯಯುತ ಬೇಡಿಕೆಯ ಈ ಹೋರಾಟದಲ್ಲಿ ನಮ್ಮ ಶಿಡ್ಲಘಟ್ಟ ತಾಲ್ಲೂಕಿನಿಂದಲೂ NPS-OPS ಎಂಬ ಬೇಧ ಭಾವವಿಲ್ಲದೇ ಒಂದು ಸಾವಿರಕ್ಕೂ ಹೆಚ್ಚು ನೌಕರರು ಈ ಹೋರಾಟದಲ್ಲಿ ಭಾಗವಹಿಸಿ ಎಂದರು ತಿಳಿಸಿದರು.
ನೌಕರನ ಮೂಲ ವೇತನ ಮತ್ತು ತುಟಿಭತ್ಯೆಯಲ್ಲಿ 14 ಕಟ್ ಮಾಡಿ ಅದಕ್ಕೆ ಸರ್ಕಾರ 14% ಸೇರಿಸಿ ಈ ಮೊತ್ತವನ್ನು ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತದೆ. ಷೇರುಪೇಟೆ, ಕುಸಿದಾಗ ನೌಕರನ ಖಾತೆಯಲ್ಲಿರುವ ಹಣಕ್ಕೆ ಭದ್ರತೆಯಿಲ್ಲದೆ ಒಂದೇ ದಿನದಲ್ಲ. 50 ರಿಂದ 60ಸಾವಿರ ರೂ. ಕಳೆದುಕೊಂಡಿರುವ ಉದಾಹರಣೆಗಳಿವೆ.
ಇತ್ತೀಚೆಗೆ NPS ಯೋಜನೆಯಲ್ಲಿ ನಿವೃತ್ತರಾದ ನೌಕರರು ಕೇವಲ ರೂ. 800 ರಿಂದ ರೂ. 2,000 ದೊಳಗೆ, ಪಿಂಚಣಿ ಪಡೆಯುತ್ತಿದ್ದು, ನಿವೃತ್ತ ನೌಕರನ ಪಿಂಚಣಿ ವೃದ್ಧಾಪ್ಯ ವೇತನಕ್ಕಿಂತಲೂ ಕಡಿಮೆ ಇರುವುದು ದುರಂತವೇ ಸರಿ. ನೌಕರನ ಸಂಧ್ಯಾ ಕಾಲದ ಬದುಕಿಗೆ ನೆಮ್ಮದಿ, ಭದ್ರತೆ ಇಲ್ಲದ ಈ ಅವೈಜ್ಞಾನಿಕ ಯೋಜನೆಯ ಕರಾಳತೆಯನ್ನು ಮನಗಂಡಿರುವ ರಾಜಸ್ಥಾನ, ಛತ್ತೀಸ್‌ಗಡ, ಪಂಜಾಬ್ ಮತ್ತು ಜಾರ್ಖಾಂಡ್ ರಾಜ್ಯಗಳು, ಓಟ, ಯೋಜನೆಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣಿ (OPS) ಯನ್ನು ಜಾರಿಗೊಳಸಿವೆ. ಪಶ್ಚಿಮ ಬಂಗಾಳ ರಾಜ್ಯವು NPS ಯೋಜನೆಯನ್ನು ಇದುವರೆಗೂ ಜಾರಿಗೊಳಿಸಿರುವುದಿಲ್ಲ. ಇತ್ತೀಚೆಗೆ ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲೂ OPS ಜಾರಿಗೊಳಸುವ ಬಗ್ಗೆ ಅಲ್ಲಿನ ಸರ್ಕಾರಗಳನ್ನು ಭರವಸೆ ನೀಡಿವೆ.