ಡಿಸೆಂಬರ್ 22 ರಂದು “ ರಾಷ್ಟ್ರೀಯ ಗಣಿತ ದಿನಾಚರಣೆ ”

ಬೆಂಗಳೂರು, ಡಿಸೆಂಬರ್ 21 (ಕರ್ನಾಟಕ ವಾರ್ತೆ) :  ಆಚಾರ್ಯ ಪಾಠಶಾಲಾ ಕಲಾ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು ಗಣಿತ ವಿಭಾಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಟ್ಯಾಕ್ಟ್-ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‍ನ ಸಹಯೋಗದೊಂದಿಗೆ ಡಿಸೆಂಬರ್ 22 ರಂದು ಬೆಳಿಗ್ಗೆ 10.30 ರಿಂದ “ರಾಷ್ಟ್ರೀಯ ಗಣಿತ ದಿನಾಚರಣೆ” ಯನ್ನು ಎ.ಪಿ.ಎಸ್. ಕಾಲೇಜಿನಲ್ಲಿ “ಇನ್ಫಿನಿಟಿ” (ಅನಂತ) ಎಂಬ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ.

ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಅಧಿಕಾರಿ ಡಾ. ವೈ.ಬಿ. ವೆಂಕಟೇಶ್ ಭಾಗವಹಿಸಲಿದ್ದಾರೆ.   ಖ್ಯಾತ ಗಣಿತ ಹಾಗೂ ವಿಜ್ಞಾನ ಸಂವಹನಕಾರರಾದ ವಿ.ಶಿವಶಂಕರ ಶಾಸ್ತ್ರಿ ರವರು “ಭಾರತದ ಸಂಸ್ಕøತಿಯಲ್ಲಿ ಮಾಯಾಚೌಕಗಳು” ಕುರಿತು ವಿಷಯ ಮಂಡಿಸಲಿದ್ದಾರೆ. ಸಂಸ್ಥಾಪಕರಾದ ಬಿ.ಎಸ್. ಕೃಷ್ಣಮೂರ್ತಿ ಅವರು “ಗಣಿತ ನೃತ್ಯ” ಗಣಿತ ಕಲಿಯುವ ಬಗ್ಗೆ ವಿಷಯ ಮಂಡಿಸಲಿದ್ದಾರೆ  ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *