ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು, ಡಿಸೆಂಬರ್ 21 (ಕರ್ನಾಟಕ ವಾರ್ತೆ) :       ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ನವೆಂಬರ್ 2022ರ ಮಾಹೆಯಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 21 ರಂದು ಮಧ್ಯಾಹ್ನ 3.00 ಗಂಟೆಗೆ  ಜಾಲತಾಣ https://sslc.karnataka.gov.in  ನಲ್ಲಿ ಪ್ರಕಟಿಸಿದ್ದು, ಡಿಸೆಂಬರ್ 22 ರಂದು ಪರೀಕ್ಷಾ ಕೇಂದ್ರದÀ ಲಾಗಿನ್‍ನಲ್ಲಿ ಪ್ರಕಟಿಲಾಗುವುದು. ಫಲಿತಾಂಶವನ್ನು ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪ್ರಕಟಣಾ ಫಲಕದಲ್ಲಿ ಪ್ರಕಟಿಸುವಂತೆ ನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *