ಶೈಕ್ಷಣಿಕ ಕ್ಷೇತ್ರದ ಆಸ್ತಿ ಸಭಾಪತಿ ಬಸವರಾಜ ಹೊರಟ್ಟಿಯವರು –ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ): ಹೋರಾಟಗಳ ಮೂಲಕವೇ ರಾಜ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಹೊರಟ್ಟಿಯವರು ದೇಶದಲ್ಲಿಯೇ ಅತ್ಯಂತ ಹಿರಿಯ ಸದಸ್ಯ ಎಂಬ ಹಿರಿಮೆಗೆ ಪಾತ್ರರಾದ ಸಭಾಪತಿ ಬಸವರಾಜ ಹೊರಟ್ಟಿಯವರ ಹೋರಾಟವೇ ನಮಗೆಲ್ಲ ಸ್ಪೂರ್ತಿ ಇಂತಹವರನ್ನು ಗೌರವಿಸುವುದು ಎಂದರೆ ನಮಗೆಲ್ಲ ಹೆಮ್ಮೆ ಎಂದು ಹೇಳಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೊರಟ್ಟಿಯವರನ್ನು ಗೌರವಿಸಿ ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಡಾ.ಬಸವರಾಜ ಧಾರವಾಡ, ಶಂಕ್ರೇಗೌಡ, ಅಶೋಕ ಜೈನ್, ಜಿ.ಆರ್.ಭಟ್, ಶ್ಯಾಮ ಮಲ್ಲನಗೌಡ್ರ ಎಸ್.ಎಂ.ಹುದ್ದಾರ, ರಾಜೇಂದ್ರರೆÀಡ್ಡಿ ರಾಜಣ್ಣ ಕೊರವಿ, ರಾಮಣ್ಣ ಮುಳ್ಳೂರ, ಪ್ರಾಣೇಶ, ವಿಜಯ ಹಬೀಬ, ಎಚ್.ಟಿ.ಬಣಕಾರ, ಬೆಟ್ಟಳ್ಳಿಯವರ ಸೇರಿದಂತೆ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದ ವರೆಗಿನ ವಿವಿಧ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *