ಮೈನವಿರೇಳಿಸುವ “ಮಕ್ಕಳ ನೃತ್ಯ ಹಬ್ಬ”

 ಪ್ರಣವಾಂಜಲಿ ಸಂಸ್ಥೆಯು ನಗರದ ಮಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಡಿಸೆಂಬರ್ 31ರಂದು ಮಕ್ಕಳಿಗಾಗಿ ಆಯೋಜಿಸಿದ್ದ ವಿಶಿಷ್ಟ ನೃತ್ಯ ಹಬ್ಬ ಚಿಣ್ಣರ ನೃತ್ಯ ಸಂಹಿತ  ಅದ್ಭುತವಾಗಿ ಮೂಡಿಬಂತು. ವಿಧವಿಧವಾದ ನೃತ್ಯಗಳ ಸಮಾಗಮವು ನೋಡುಗರ ಮನ ಸೂರೆಗೊಂಡಿತು. ನಾಟ್ಯ ತರಂಗ ನೃತ್ಯ ಸಂಸ್ಥೆ, ಜತಿನ್ ಅಕಾಡೆಮಿ ಫಾರ್ ಡಾನ್ಸ್, ವೈಷ್ಣವಿ ನಾಟ್ಯ ಶಾಲ, ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್, ನೃತ್ಯ ಧಾಮ ಟೆಂಪಲ್ ಅಫ್ ಫೈನ್ ಆರ್ಟ್ಸ್ ಹಾಗೂ ಪ್ರಣವಾಂಜಲಿ ನೃತ್ಯ ಸಂಸ್ಥೆಯ ಮಕ್ಕಳು 

ಬಹಳ ಸುಂದರವಾಗಿ ಎಲ್ಲಾ ನೃತ್ಯಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿದುಷಿ ಶ್ರೀಮತಿ ಪದ್ಮಿನಿ ಅಚ್ಚಿ ಹಾಗು ವಿದುಷಿ ಶ್ರೀಮತಿ ಸ್ನೇಹ ಕಪ್ಪಣ ನವರು ಮಾತನಾಡಿ, ಉದಯೋನ್ಮುಖ ಕಲಾವಿದರಿಗೆ ಇಂತಹ ವೇದಿಕೆಗಳ ಅವಶ್ಯಕತೆ ಇದೆ, ಕಲಾ ಪೋಷಕರಿಗೆ ಎಲ್ಲರು ಪ್ರೋತ್ಸಾಹ  ನೀಡಬೇಕು ಹೀಗೆ ಸಾಕಷ್ಟು ನೃತ್ಯ ಹಬ್ಬಗಳನ್ನು ಮಾಡಿ ಯುವ ಪ್ರತಿಭೆಗಳಿಗೆ ವೇದಿಕೆ ನೀಡಬೇಕಾಗಿ ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪವಿತ್ರ ಪ್ರಶಾಂತ್ ಹಾಗು ಶ್ರೀಮತಿ ಗಾಯತ್ರಿ ಮಯ್ಯ ರವರಿಗೆ ಶುಭ ಕೋರಿದರು. ಸುಮಾರು 60 ಕ್ಕು ಹೆಚ್ಚು ಕಲಾವಿದರು ಪಾಲ್ಗೊಂಡಿದ್ದ ಈ ನೃತ್ಯ ಹಬ್ಬದಲ್ಲಿ ಎಲ್ಲಾ ಕಲಾವಿದರಿಗೂ ಪ್ರಶಸ್ತಿ ಪತ್ರವನ್ನು ಕೊಟ್ಟು ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಯಿತು.

Leave a Reply

Your email address will not be published. Required fields are marked *