ರಾಷ್ಟ್ರೀಯ ಖೋ ಖೋ ಚಾಂಪಿಯನ್ ಶಿಪ್ ನಲ್ಲಿ ಚಿತ್ರಕೂಟ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡಗಳು*

ಬೆಂಗಳೂರು.ಜ.02 : ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿವೆ. ಬಾಲಕಿಯರ ತಂಡವು ಈ ಹಿಂದೆಯೂ ಸಹ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ವಿಜಯಶಾಲಿಯಾಗಿತ್ತು. ಆದರೆ ಈ ಬಾರಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಎರಡೂ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


 ಪಂಜಾಬ್ ನ ಲೆಹ್ರಗಾಗ ಜಿಲ್ಲೆಯ ಡಾ. ಡಿ.ಎ.ವಿ ಪಬ್ಲಿಕ್ ಶಾಲೆಯಲ್ಲಿ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲಿ ಜಯಗಳಿಸಿ, ರಾಷ್ಟ್ರದ 24,000 ಸಿ.ಬಿ.ಎಸ್.ಸಿ ಶಾಲೆಗಳ ಪೈಕಿ ಈ ಸಾಧನೆ ಮಾಡಿದ ಮೊದಲ ಶಾಲೆಯಾಗಿದ್ದು ವಿಶೇಷ. 19 ವರ್ಷ ವಯಸ್ಸಿನ ಕ್ರೀಡಾಳುಗಳೇ ಹೆಚ್ಚಿದ್ದ ಇತರ ರಾಜ್ಯದ ತಂಡಗಳ ವಿರುದ್ಧ 11 ರಿಂದ 16 ವರ್ಷದವರಿದ್ದ ಚಿತ್ರಕೂಟ ಶಾಲೆಯ ಕ್ರೀಡಾಳುಗಳು ಸೆಣಸಿ ಜಯಿಸಿದ್ದು ನಿಜಕ್ಕೂ ಅಸಾಧಾರಣ ಸಾಧನೆ. ಈ ಐತಿಹಾಸಿಕ ಗೆಲುವಿಗಾಗಿ ಮಕ್ಕಳು ಪ್ರತಿದಿನ ಬೆಳಗಿನ ಜಾವ 4.30ಕ್ಕೆ ದಿನವನ್ನು ಆರಂಭಿಸಿ, ತರಬೇತಿ ಪಡೆದಿದ್ದು ಪಂಜಾಬ್ ನ ವಿಪರೀತ ಚಳಿಯನ್ನು ಎದುರಿಸಲು ಸಹಕಾರಿಯಾಯಿತು. 22 ಬಾಲಕರ ಹಾಗೂ 18 ಬಾಲಕಿಯರ ತಂಡಗಳನ್ನು ಹಿಂದಿಕ್ಕಿ ಚಾಂಪಿಯನ್ ಆದ ತಂಡವನ್ನು ಹೃತ್ವಿಕ್ ಆರ್ ಗೌಡ ಹಾಗೂ ವೇದಿತ ಕೆ ಮುನ್ನಡೆಸಿದರು. ಪಂಜಾಬ್ ನ ಡಾ. ದೇವರಾಜ್ ಡಿ.ಎ.ವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳಾದ ಪ್ರವೀಣ್ ಖೋಖರ್ ಮತ್ತು ಸಿ.ಬಿ.ಎಸ್.ಇ ಸದಸ್ಯರಾದ ಸಂಜಯ್ ಗಾಂಧಿರವರು ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 
ಪ್ರಶಸ್ತಿ ಗೆದ್ದ ಬಾಲಕಿಯರ ತಂಡ- ದಿಶಾ.ಕೆ, ಚಿನ್ಮಯಿ ಎಂ ಕುಮಾರ್, ಸುಶ್ರುತಾ ಎಂ ಎಸ್, ಧನ್ಯತಾ ಜನಾರ್ದನ್, ಸುಕೃತಿ ಸಾಗರ್, ಉನ್ನತಿ ಬಿ ಹೊಸಮನಿ, ಪ್ರಗತಿ ಪ್ರಶಾಂತ್ ದೇಸಾಯಿ, ವಂಶಿಕಾ ಕೆ, ಜಾಹ್ನವಿ ವೈ, ಮಾನ್ಯ ವಿ, ಸುದೀಪ್ತಿ ಸಾಗರ್, ವೇದಿತ ಕೆ.
ಪ್ರಶಸ್ತಿ ಗೆದ್ದ ಬಾಲಕರ ತಂಡ –
ಸಹಜ್ ಎಸ್, ಗೌತಮ್ ಗೌಡ ಪಿ, ಯಶಸ್ ಎನ್ ಗೌಡ, ಪವನ್ ತನಯ್ ಜೆ, ಆರ್ಯನ್ ಸಿ ಕೆ, ಅಶ್ವಿನ್ ಜಿ, ಮೋಹಿತ್ ಜಿ, ಪ್ರಣವ್ ಆರ್, ಅಚಿಂತ್ಯ ಎಸ್ ಕಷ್ಯಪ್, ಭಾರ್ಗವ್ ಡಿ, ಪವನ್ ಗೌಡ ಪಿ, ಋತ್ವಿಕ್ ಆರ್ ಗೌಡ.
 ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಚೈತನ್ಯರವರು ಈ ಗೆಲುವಿನ ಶ್ರೇಯವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ರಂಗನಾಥ್ ಮತ್ತು ಸಂಗೀತಾ, ಕ್ರೀಡಾ ಸಂಯೋಜಕಿ ಅನಿತಾ ರೈ, ಪ್ರಾಂಶುಪಾಲರಾದ ಜೋಯಿತಾ ಚಟರ್ಜಿ ಮತ್ತು ಮಕ್ಕಳ ಪೋಷಕರಿಗೆ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *