ಗೌರವ ಡಾಕ್ಟರೇಟ್ ಹಾಗೂ ಮಹಾಮಹೋಪಾಧ್ಯಾಯ ಪ್ರಶಸ್ತಿ ಘೋಷಣೆ

ಆಫ್ರಿಕಾ ದೇಶದ ಬೆನಿನ್ ರಾಜ್ಯದ ಮೈಲ್ಸ್ ಲೀಡರ್ ಶಿಪ್ಸ್ ವಿಶ್ವವಿದ್ಯಾಲಯವು, ಕರ್ನಾಟಕದ ‘ರಾಷ್ಟ್ರ ಪ್ರಶಸ್ತಿ’ ವಿಜೇತರೂ, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರೂ ಆದ ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ ಇವರಿಗೆ ‘ಗೌರವ ಡಾಕ್ಟರೇಟ್’ ಹಾಗೂ ‘ಮಹಾಮಹೋಪಾಧ್ಯಾಯ’ ಪ್ರಶಸ್ತಿ ಘೋಷಿಸಿದ್ದು, ಈ ಸಮಾರಂಭವು ಗಿರಿನಗರದಲ್ಲಿರುವ ಶ್ರೀ ಭಾಗವತಾಶ್ರಮದಲ್ಲಿ ಜನವರಿ 15, ಭಾನುವಾರ ಸಂಜೆ 6 ಗಂಟೆಗೆ ಉಪಕುಲಪತಿಗಳಾದ ಪ್ರೊ|| ಡಾ|| ಕೆ. ರವಿ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರದಾನ ಮಾಡಲಾಗುವುದು. 


ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ  ರವಿ ಸುಬ್ರಮಣ್ಯ (ಶಾಸಕರು, ಬಸವನಗುಡಿ ಕ್ಷೇತ್ರ),  ಪಿ.ಎಸ್. ದಿನೇಶ್ ಕುಮಾರ್ ( ನ್ಯಾಯಾಧೀಶರು, ಉಚ್ಛನ್ಯಾಯಾಲಯ ಕರ್ನಾಟಕ ಸರ್ಕಾರ), ಕೆ.ಟಿ. ರಾಜೇಂದ್ರ ಕುಮಾರ್ (ಡೀನ್, ಮೈಲ್ಸ್ ಲೀಡರ್ಶಿಪ್ ಯೂನಿವರ್ಸಿಟಿ) ಮತ್ತು  ಡಾ|| ವಿಠ್ಠಲ್ ಜೋಶಿ (ಸಂಯೋಜಕರು, ಮೈಲ್ಸ್ ಲೀಡರ್ಶಿಪ್ ಯೂನಿವರ್ಸಿಟಿ) ಇವರುಗಳು ಆಗಮಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *