ಬೆಂಗಳೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ

 ಬಿ.ಎಂ.ಎಸ್. ಕಾಲೇಜ್ ಆಫ್ ಲಾ ಕಾನೂನು ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಸಂಸ್ಥೆಯಾಗಿದೆ ಮತ್ತು ೫೮ ವರ್ಷಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕರ್ನಾಟಕ ಕಾನೂನು ಸುಧಾರಣಾ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

 ಈ ಸಂದರ್ಭದಲ್ಲಿ ಶ್ರೀ ದ್ವಾರಕನಾಥ ಬಾಬು, ನಿರ್ದೇಶಕರು, ಹಾಗು ಶ್ರೀ ರೇವಯ್ಯ ಒಡೆಯರ್, ಸಂಶೋಧನಾ ಮುಖ್ಯಸ್ಥರು, ಕರ್ನಾಟಕ ಕಾನೂನು ಸುಧಾರಣಾ ಸಂಸ್ಥೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

 ಶ್ರೀ ದ್ವಾರಕನಾಥ ಬಾಬುರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಸಂಜೆ ೪.೩೦ಕ್ಕೆ ನಡೆದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಸನ್ಮಾನ್ಯ ಶ್ರೀ ಜೆ. ಸಿ. ಮಾಧುಸ್ವಾಮಿ, ಸಂಸದೀಯ ವ್ಯವಹಾರಗಳ ಸಚಿವರು, ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.  ಡಾ. ಅನಿತಾ ಎಫ್. ಎನ್. ಡಿಸೋಜಾ, ಪ್ರಾಂಶುಪಾಲರು ಉಪಸ್ಥಿತ ಗಣ್ಯರನ್ನು ಉದ್ದೇಶಿಸಿ ಸ್ವಾಗತ ಭಾಷಣವನ್ನು ಮಾಡಿದರು. ಶ್ರೀ ರಾಜೀವ ಗೋಪಿನಾಥ ಸಹಾಯಕ ಪ್ರಾಧ್ಯಾಪಕ ವಂದನಾರ್ಪಣೆಯನ್ನು ಮಾಡಿದರು.

 ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಾಜೀವ ಗೋಪಿನಾಥ, ಶ್ರೀ ರುದ್ರಗೌಡ ಎಂ. ಎಚ್. ಮತ್ತು ಶ್ರೀ ನಮನ್ ವಂಕದಾರಿ, ಶ್ರೀಮತಿ ರಮ್ಯಾ ಕೆ., ಶ್ರೀಮತಿ ವೀಣಾ ಟಿ. ಎನ್ ಹಾಗು ಶ್ರೀಮತಿ ಗುರ್ವಿಂದರ್ ಕೌರ್ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *