ದೇವರನಾಮ ಉಚಿತ ಕಲಿಕಾ ಶಿಬಿರ _ ಅನುಗ್ರಹ ಸಂಗೀತ ಮಹಾವಿದ್ಯಾಲಯ ಆಯೋಜನೆ

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಖ್ಯಾತ ವಿದ್ವಾಂಸ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಂಗಳೂರು ಶಾಖೆ ಜ. 19ರಿಂದ ಫೆ. 3ರವರೆಗೆ 24ನೇ ವರ್ಷದ ದೇವರನಾಮ ಕಲಿಕಾ ಉಚಿತ ತರಬೇತಿ ಶಿಬಿರ ಆಯೋಜಿಸಿದೆ.

15 ದಿನಗಳಕಾಲ ಮಾತೆಯರಿಗೆ ಮತ್ತು ಪುರುಷರಿಗೆ ತರಬೇತಿ ಶಿಬಿರ ನಗರದ ಬನಶಂಕರಿ ಒಂದನೇ ಹಂತದ ಪಿಇಎಸ್ ಪದವಿ ಕಾಲೇಜು ಹಿಂಭಾಗದಲ್ಲಿರುವ ‘ಸ್ವಾಮಿ ವಿವೇಕಾನಂದ ವಿದ್ಯಾಶಾಲಾ’  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 5.30ರಿಂದ 6.30ರ ವರೆಗೆ ಶಿಬಿರ ನಡೆಯಲಿದೆ. ಭಾಗವಹಿಸಲು ಆಸಕ್ತಿ ಇರುವವರಿಗೆ ಯಾವುದೇ ವಯೋಮಾನದ ಮಿತಿ ಇಲ್ಲ. ಶಾಸ್ತ್ರೀಯ ಸಂಗೀತದ ಪ್ರಾಥಮಿಕ ಪರಿಚಯದ ಅಗತ್ಯವೂ ಇಲ್ಲ. ದೇವರನಾಮ ಕಲಿಯುವ ಶ್ರದ್ಧೆ ಮತ್ತು ಆಸಕ್ತಿ ಇದ್ದರಷ್ಟೇ ಸಾಕು. (ಶಿಬಿರದಲ್ಲಿ ಕಲಿತ ದೇವರನಾಮಗಳನ್ನು ಸಂಸ್ಥೆ ವತಿಯಿಂದ ಫೆ. 4 ಮತ್ತು 5 ರಂದು ನಡೆಯಲಿರುವ ಶ್ರೀ ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಏಕಕಂಠದಲ್ಲಿ ಹಾಡಲು ವೇದಿಕೆ ಕಲ್ಪಿಸಲಾಗುವುದು.) ಶಿಬಿರಕ್ಕೆ  ಹೆಸರು ನೋಂದಣಿ ಮತ್ತು ವಿವರಗಳಿಗೆ 88612 13567  ಅಥವಾ 94485 33347 ಸಂಪರ್ಕಿಸಬಹುದು ಎಂದು ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *