ಯಲಹಂಕ: ವಿಪ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನ

ಬೆಂಗಳೂರುರಿನ ಯಲಹಂಕ ಉಪನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ವತಿಯಿಂದ, ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ರವರ ಸಹಕಾರದಿಂದ ಮುಖ್ಯಮಂತ್ರಿಗಳ 1 ಲಕ್ಷ ಮನೆಗಳ ಯೋಜನೆಯಡಿಯಲ್ಲಿ, ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಪತ್ರಗಳನ್ನು ನೀಡಲಾಯಿತು.

 ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ ಅಡಿಯಲ್ಲಿ 10ನೇ ತರಗತಿಯಲ್ಲಿ ಮೊದಲನೇ ಮೂರು ಸ್ಥಾನ ಪಡೆದ 54 ವಿಪ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, 14 ಜನ ವಿಪ್ರ ಸಾಧಕರಿಗೆ ವಿಪ್ರಶ್ರೀ ಹಾಗೂ ವೇದ ಮಾತ ಗಾಯತ್ರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುಯಿತು,10 ಗಾಯಿತ್ರಿ ಸ್ವಸಹಾಯ ಸಂಘಗಳಿಗೆ ತಲಾ 1,00,000 ರೂಪಾಯಿ ಮೂಲ ಬಂಡವಾಳವಾಗಿ ಉಚಿತವಾಗಿ ನೀಡಲಾಯಿತು, ಶ್ರೀ ಎಸ್.ಆರ್.ವಿಶ್ವನಾಥ್ ಶಾಸಕರು ಯಲಹಂಕ ವಿಧಾನ ಸಭಾ ಕ್ಷೇತ್ರ, ಅಧ್ಯಕ್ಷರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಸದಸ್ಯರು ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ಹಾಗೂ ಡಾ||ವಾಣಿಶ್ರೀ ವಿಶ್ವನಾಥ್ ಅಧ್ಯಕ್ಷರು, ರೈತ ಸೇವಾ ಸಹಕಾರ ಸಂಘ ನಿಯಮಿತ (ಸಿಂಗನಾಯಕನಹಳ್ಳಿ) ಇವರಿಗೆ “ವಿಶ್ವ ವಿಪ್ರ ಪ್ರಿಯ” ಪ್ರಶಸ್ತಿ ‌ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಜಸ್ಟಿಸ್ ಎನ್.ಕುಮಾರ್ ವಿಶ್ರಾಂತ ನ್ಯಾಯಮೂರ್ತಿಗಳು ಉಚ್ಚ ನ್ಯಾಯಾಲಯ ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಂಡಳಿಯ ನಿರ್ದೇಶಕರಾದ ವಿ.ಪವನ್ ಕುಮಾರ್, ಜಗನ್ನಾಥ್ ಕುಲಕರ್ಣಿ, ಜಗದೀಶ್ ಹುನಗುಂದ, ಸುಬ್ರಾಯ ಹೆಗಡೆ, ವತ್ಸಲ ನಾಗೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *