ಜೀವ ಹಿಂಡುತ್ತಿರುವ ವಾಯು ಮಾಲಿನ್ಯ
ಕಾಡು ಬೆಳಸಿ ನಾಡು ಉಳಿಸಿ ಎಂಬ ಗಾದೆ ನಮ್ಮೆಲ್ಲರಿಗೆ ಮನದಟ್ಟಾಗಿದ್ದರೂ ಸಹಿತ ನಗರಗಳನ್ನು ಬೆಳೆಸುವ ಭರದಲ್ಲಿ ನಾವು ಪರಿಸರ ನಾಶ ಮಾಡುತ್ತಿದ್ದೇವೆ ಇದಕ್ಕೆ ಪೂರಕವೆಂಬಂತೆ ನಾಡಿನಲ್ಲಿ ಪ್ರಮುಖವಾದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಮನಸೋ ಇಚ್ಛೆ ಪರಿಸರ ಹದಗೆಡುಸುತ್ತಿವೆ, ಅದರಲ್ಲೂ ರಾಯಚೂರು ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ವಾಯು ಮಂಡಲಕ್ಕೆ ಹಾರು ಬೂದಿ ಮತ್ತು ವಿಷ ಅನಿಲಗಳಾದ SO2,CO2, CO, PM2.5, PM10 ಮುಂತಾದವುಗಳನ್ನು ಮಿತಿ ಮೀರಿ ಹೊರಸೂಸುತ್ತಿವೆ. ಈ ವಿಷ ಅನಿಲಗಳಿಂದ ಮತ್ತು ಸರಿಯಾದ ಹಾರುವ ಬೂದಿ ನಿಯಂತ್ರಣವಿಲ್ಲದ ಕಾರಣ ಈ ವಿದ್ಯುತ್ ಕೇಂದ್ರಗಳ ಸುತ್ತಮುತ್ತಲಿರುವ ದೇವಸೂಗೂರು , ಯದ್ಲಾಪುರ, ಚಿಕ್ಕಸೂಗೂರು ಗ್ರಾಮ ನಿವಾಸಿಗಳಲ್ಲಿ ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತಿದ್ದಲ್ಲದೆ ಪರಿಸರದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿದೆ.