ಅಂತರರಾಷ್ಟ್ರೀಯ ಮಹಿಳಾ ದಿನ : ಮಹಾರಾಣಿಯರಿಂದ ಸೂಪರ್ ಕಾರ್ ಮತ್ತು ಮೋಟಾರ್ ಬೈಕ್ ಜಾಥ – ಜನ ಜಾಗೃತಿ

ಬೆಂಗಳೂರು, ಮಾ, 19; ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಶಿಫಾ ಫಾರ್ ಸೊಸೈಟಿ ಮತ್ತು ಭಾರತೀಯ ತೈಲ ನಿಗಮದಿಂದ “ಮಹಿಳೆಯರು ಮನೆ ಮತ್ತು ಸಮಾಜಕ್ಕೆ ಮಹಾರಾಣಿಯರು” ಎಂಬ ಧ್ಯೇಯ ವಾಕ್ಯದೊಂದಿದೆ ಕ್ವೀನ್ ಸೂಪರ್ ಬೈಕ್ ಮತ್ತು ಐಷಾರಾಮಿ ಕಾರ್ ಗಳ ಜಾಥ ಆಯೋಜಿಸಲಾಗಿತ್ತು.

ಭಾರತೀಯ ತೈಲ ನಿಗಮದ ಕಾರ್ಯನಿರ್ವಾಹಕ ಗುರುಪ್ರಸಾದ್ ದಿ.ಡೆನ್ ಹೋಟೆಲ್ ಮುಂಭಾಗ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಿ ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕು. ಪುರುಷರಿಗೆ ಸರಿಸಮಾನ ಸಾಧನೆ ಮಾಡುವ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರು ರಾಜಕೀಯ, ಚಲನಚಿತ್ರ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರದಲ್ಲಿ ಅಗಾಧ ಸಾಧನೆ  ಮಾಡಿದ್ದಾರೆ ಎಂದರು.

ಶಿಫಾರ್ ಸಂಘಟನೆಯ ಮುಖ್ಯಸ್ಥರಾದ ಹರ್ಷಿಣಿ ವೆಂಕಟೇಶ್ ಮಾತನಾಡಿ, ರಾಷ್ಟ್ರ ರಕ್ಷಣೆಗಾಗಿ ಹುತಾತ್ಮರಾದ ಸೇನಾ ಯೋಧರ ಪತ್ನಿಯರು ಮತ್ತು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ದಿ ಡೆನ್ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ವಿಶೇಶ್ ಗುಪ್ತಾ, ಮೇಜರ್ ಅಪರಾಜಿತಾ ಭಟ್ಟಚಾರ್ಯ, ಸಿ.ಐಎಸ್.ಯುನ ಮಾಜಿ ಅಧಿಕಾರಿ ವನಿತಾ ಅಶೋಕ್, ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್, ಶೀ ಫಾರ್ ಸಂಘಟನೆಯ ವಿಹಾನಾ, ವಿದ್ಯಾ ಮಂಜುನಾಥ್, ಶಾಲಿನಿ ದೀಪಕ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *