ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ‘ಬ್ರಹ್ಮೋತ್ಸವ’ 10,000 ಸಾಧಕರ ಸಮ್ಮುಖದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !
ಫೋಂಡಾ – ‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವ ಸಪ್ತರ್ಷಿಗಳ ಆಜ್ಞೆಯಂತೆ ಈ ವರ್ಷ ‘ಬ್ರಹ್ಮೋತ್ಸವ’ ಎಂದು ಆಚರಿಸಲಾಯಿತು. ಸನಾತನ ಸಂಸ್ಥೆಯ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ 10,000 ಕ್ಕೂ ಹೆಚ್ಚು ಸಾಧಕರ ಸಮ್ಮುಖದಲ್ಲಿ ಅತ್ಯಂತ ಭಾವಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಗೋವಾದ ಫಾರ್ಮಾಗುಡಿಯ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಈ ‘ಬ್ರಹ್ಮೋತ್ಸವ’ವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಆಂಧ್ರಪ್ರದೇಶದ ತಿರುಪತಿಯಲ್ಲಿ ಶ್ರೀ ಬಾಲಾಜಿ ದೇವಸ್ಥಾನದ ವತಿಯಿಂದ ನೆಡಸಲಾಗುವ ಮೆರವಣಿಗೆಗೆ ‘ಬ್ರಹ್ಮೋತ್ಸವ’ ಎಂದು ಕರೆಯಲಾಗುತ್ತದೆ. ಅದೇ ರೀತಿ ಈ ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ರಥಯಾತ್ರೆಯನ್ನು ಮರದಿಂದ ತಯಾರಿಸಲಾದ ಸುವರ್ಣ ವರ್ಣದ ರಥದಲ್ಲಿ ಮಾಡಲಾಯಿತು.
ಈ ಸಮಾರಂಭದಲ್ಲಿ ಝಾರ್ಖಂಡ್ ನಿಂದ ಪೂ. ಪ್ರದೀಪ್ ಖೇಮ್ಕಾ, ಪೂ.(ಸೌ). ಸುನೀತಾ ಖೇಮ್ಕಾ, ದೆಹಲಿಯಿಂದ ಪೂ. ಸಂಜೀವ್ ಕುಮಾರ್, ‘ಪೀತಾಂಬರಿ’ ಉದ್ಯೋಗ ಸಮೂಹದ ಶ್ರೀ. ರವೀಂದ್ರ ಪ್ರಭುದೇಸಾಯಿ ಮತ್ತು ಕರ್ನಾಟಕದ ಹಿಂದುತ್ವನಿಷ್ಠ ವಕೀಲರಾದ ಪಿ. ಕೃಷ್ಣಮೂರ್ತಿ ಅವರು ಮನೋಗತವನ್ನು ವ್ಯಕ್ತಪಡಿಸಿದರು. ಹಾಗೂ ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಸೇರಿದಂತೆ ಸನಾತನದ ಇನ್ನಿತರ ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋವಾ ಸರಸಂಘಚಾಲಕರಾದ ಶ್ರೀ. ರಾಜನ್ ಭೋಬೆ, ಶ್ರೀ ಮ್ಹಾದ್ರಾಳನ ಮಹಾಲಸಾ ಮಂದಿರದ ಅಧ್ಯಕ್ಷ ಶ್ರೀ. ಪ್ರೇಮಾನಂದ ಕಾಮತ್, ಗೋಮಾಂತಕ ಸಂತ ಮಂಡಲದ ಸಂಚಾಲಕ ಹ.ಭ.ಪ ಸುಹಾಸ್ ಬುವಾ ವಝೆ, ಗೋಮಾಂತಕ ದೇವಸ್ಥಾನದ ಮಹಾಸಂಘದ ಅಧ್ಯಕ್ಷ ಶ್ರೀ. ಭಾಯಿ ಪಂಡಿತ್, ಕೊಂಕಣಿ ಲೇಖಕ ಮಹೇಶ್ ಪಾರಕರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ದೇಶದಾದ್ಯಂತ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ, ನೂರಾರು ದೇವಾಲಯಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆಗಳು, ಪ್ರವಚನಗಳು ಮತ್ತು ಹಲವೆಡೆ ‘ಹಿಂದೂ ಐಕ್ಯತಾ ಶೋಭಾಯಾತ್ರೆ’ಯನ್ನು ನಡೆಸಲಾಗಿದೆ. ಈ ಎಲ್ಲಾ ಕಾರ್ಯಗಳಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು.