BEL EDUCATION: ದೊಡ್ಡಬೊಮ್ಮಸಂದ್ರ ಕೆರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಬಿಇಎಲ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು…

ಬೆಂಗಳೂರು : ನಗರದ ಜಾಲಹಳ್ಳಿಯ ಬಿಇಎಲ್ ಸಂಸ್ಥೆಯ ಸಹಯೋಗದೊಂದಿಗೆ ಬಿಇಎಲ್ ಸಪ್ತ ಶಿಕ್ಷಣ ಸಂಸ್ಥೆಗಳ ವತಿಯಿಂದ ಇಂದು ಬೆಳಗ್ಗೆ ವಿದ್ಯಾರ್ಥಿಗಳೊಂದಿಗೆ ದೊಡ್ಡಬೊಮ್ಮಸಂದ್ರ ಕೆರೆಯಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಣ ಆಂದೋಲನ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವೂ ಕೆರೆಯಷ್ಟೇ ಅಲ್ಲದೇ ಸುಮಾರು 80 ಕ್ಕೂ ಹೆಚ್ಚು ಭಾಗದಲ್ಲಿ ಪ್ಲಾಸ್ಟಿಕ್ ಸಂಗ್ರಹಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಇಎಲ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ನರಸಿಂಹ ಕುಮಾರ್ ಎಸ್ ವಿ ಎನ್,ಬಿಇಇಐ ಸಂಯೋಜಕರಾದ ರಂಗಸ್ವಾಮಿ ಡಿ, ಬಿ ಇ ಇ ಐ ನ ಸದಸ್ಯರುಗಳಾದ ಧೀರಜ್ ಟಾಕ್ರೆ,ರಂಜನ್ ಕುಮಾರ್ ಬಾರಕ್  ಮತ್ತು ಬಿ ಇ ಇ ಐ ನ ಆಡಳಿತ ಅಧಿಕಾರಿ ರಘುಪತಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ಎನ್ ಸಿ ಸಿ ಕೆಡೆಟ್ಸ್ ಹಾಗೂ ಎನ್ ಸಿ ಸಿ ಆಫೀಸರ್ ಗಳು,ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡು ಯಶಸ್ವಿಯಾಗಿ ನಡಸಿಕೊಟ್ಟರು.

Leave a Reply

Your email address will not be published. Required fields are marked *